Short News

ಜಮೀರ್ ಅಹ್ಮದ್ ಗೂ ಕರೆ ಮಾಡಿತ್ತು ಬಿಜೆಪಿ!

ಜಮೀರ್ ಅಹ್ಮದ್ ಗೂ ಕರೆ ಮಾಡಿತ್ತು ಬಿಜೆಪಿ!

ಬಹುಮತ ಸಾಬೀತುಪಡಿಸುವ ಒತ್ತಡದಲ್ಲಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಕರೆ ಮಾಡಿದ್ದರು ಎಂದು ಸ್ವತಃ ಜಮೀರ್ ಅಹ್ಮದ್ ತಿಳಿಸಿದ್ದಾರೆ. "ನನಗೂ ಕರೆ ಬಂದಿತ್ತು. ಆದರೆ ನಾನು ಮತ್ತು ಕುಮಾರಸ್ವಾಮಿ ಇಬ್ಬರೂ ಹಳೇ ದೋಸ್ತಿಗಳು. ನಾವು ಮತ್ತೆ ಒಂದಾಗುತ್ತಿದ್ದೇವೆ. ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ" ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ. ಜೆಡಿಎಸ್ ನಲ್ಲಿದ್ದ ಜಮೀರ್ ಅಹ್ಮದ್ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದರು. ನಂತರ ಕಾಂಗ್ರೆಸ್ಸಿನಿಂದ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದರು.
ಶಿರಾ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಬಲಿ

ಶಿರಾ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಬಲಿ

ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಬಲಿಯಾಗಿದ್ದಾರೆ.

ಸಿಗಂದೂರಿನಿಂದ ಶಿರಾಗೆ ತೆರಳುತ್ತಿದ್ದ ಹನುಮಾನ್ ಟ್ರಾವೆಲ್ಸ್ ಬಸ್, ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದು, ಅದರಲ್ಲಿ 10 ಮಂದಿ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲರೂ ಶಿರಾ ಪಟ್ಟಣದ ಪಟ್ಟನಾಯಕನಹಳ್ಳಿ ನಿವಾಸಿಗಳು. ಬಸ್‌ನಲ್ಲಿ 60 ಮಂದಿ ಪ್ರಯಾಣಿಕರಿದ್ದರು.

ಸಿಗಂದೂರಿಗೆ ತೆರಳಿದ್ದ ಇವರು ಚೌಡೇಶ್ವರಿಯ ದರ್ಶನ ಪಡೆದು ಊರಿಗೆ ವಾಪಸಾಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಜೈಹಿಂದ್ ಎಂಬ ಹೋಟೆಲ್ ಬಳಿ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ.

ಲಂಡನ್ ಯುವರಾಜನ ಮದುವೆಯಲ್ಲಿ ಮಿಂಚಿದ ಪಿಗ್ಗಿ, ಪಿಗ್ಗಿಯ ಲ್ಯಾವೆಂಡರ್ ಲುಕ್ ಗೆ ಫಿದಾ ಆದ ಜನತೆ

ಲಂಡನ್ ಯುವರಾಜನ ಮದುವೆಯಲ್ಲಿ ಮಿಂಚಿದ ಪಿಗ್ಗಿ, ಪಿಗ್ಗಿಯ ಲ್ಯಾವೆಂಡರ್ ಲುಕ್ ಗೆ ಫಿದಾ ಆದ ಜನತೆ

ಲಂಡನ್ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕಲೆ ವಿಶ್ವದ ಪ್ರತಿಷ್ಟಿತ ಗಣ್ಯರು ಭಾಗವಹಿಸಿದ್ದರು. ಹಾಲಿವುಡ್, ಬಾಲಿವುಡ್ ನ ಹಲವು ಮಂದಿ ನರೆದಿದ್ದರು. ಅದ್ರಲ್ಲಿ ಭಾರತದ ನಟಿ ಪ್ರಿಯಾಂಕ ಚೋಪ್ರಾ ಕೂಡಾ ಒಬ್ಬರು. ಥೇಮ್ಸ್ ನದಿ ಥಟದಲ್ಲಿ ನಡೆದ ಮದುವೆಗೆ ಪ್ರಿಯಾಂಕ ಚೋಪ್ರಾ ಲ್ಯಾವೆಂಡರ್ ಕಲರ್ ಸ್ಕರ್ಟ್, ಅದೇ ಬಣ್ಣದ ಬ್ಲೇಜರ್ ಧರಿಸಿ, ಹಾಲಿವುಡ್ ನ ತನ್ನ ಕೋ ಸ್ಟಾರ್ ಜೊತೆ ಆಗಮಿಸಿದ್ರು. ಈ ಫೋಟೋಗಳನ್ನು ಪಿಗ್ಗಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಟಿ-20 ಟೂರ್ನಿಯ 56 ನೇ ಪಂದ್ಯ: ಪಂಜಾಬ್  ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ

ಟಿ-20 ಟೂರ್ನಿಯ 56 ನೇ ಪಂದ್ಯ: ಪಂಜಾಬ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಟಾಸ್ ಗೆದ್ದಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಪಂಜಾಬ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಐಪಿಎಲ್ 11ನ ಲೀಗ್‌ ಹಂತದ ಕೊನೆಯ ಪಂದ್ಯ ಇದಾಗಿದ್ದು ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಲು ಪಂಜಾಬ್‌ ತಂಡವು ಭಾರಿ ಅಂತರದಲ್ಲಿ ಗೆಲುವು ಸಾಧಿಸಲೇ ಬೇಕಿದೆ. ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ಚೆನ್ನೈ ತಂಡ, ಕಳೆದ ಪಂದ್ಯದಲ್ಲಿ ಸೋಲನ್ನಪ್ಪಿರುವ ಕಾರಣ ಈ ಪಂದ್ಯ ಗೆದ್ದು ಗೆಲುವಿನ ಹಾದಿ ಮರಳುವ ಪ್ರಯತ್ನದಲ್ಲಿದೆ.