Short News

ಹಾವೇರಿ : ವರದಾ ನದಿಯಲ್ಲಿ ಕೊಚ್ಚಿ ಹೋದ ಲಾರಿ, ಇಬ್ಬರು ನೀರು ಪಾಲು

ಹಾವೇರಿ : ವರದಾ ನದಿಯಲ್ಲಿ ಕೊಚ್ಚಿ ಹೋದ ಲಾರಿ, ಇಬ್ಬರು ನೀರು ಪಾಲು

ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋದ ಪರಿಣಾಮ ಇಬ್ಬರು ನೀರು ಪಾಲಾಗಿರುವ ಘಟನೆ ನಡೆದಿದೆ. ಹಾವೇರಿ ಯಿಂದ ಹಾನಗಲ್ ಗೆ ಲಾರಿ ತೆರಳುತ್ತಿದ್ದ ವೇಳೆ ನಾಗನೂರು ಗ್ರಾಮದ ವರದಾ ನದಿ ಸೇತುವೆ ಮೇಲೆ ಈ ದುರ್ಘಟನೆ ನಡೆದಿದ್ದು, ಬಸವರಾಜ ಸೋಮಣ್ಣವರ ಹಾಗೂ ಲಕ್ಷ್ಮಣ ದೊಡ್ಡ ತಳವಾರ ನೀರು ಪಾಲಾಗಿದ್ದಾರೆ. ಲಾರಿಯಲ್ಲಿದ್ದ ಗುಡ್ಡಪ್ಪ ಸೋಮಣ್ಣವರ ಎಂಬಾತ ಪಾರಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಗ್ರಾಮಾಂತರ ಠಾಣೆ ಪೊಲೀಸರು ನೀರು ಪಾಲಾದವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಅಧಿವೇಶನ ಸಂದರ್ಭದಲ್ಲೇ ಜಿಎಸ್ಟಿ ಸಭೆ, ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ಬೆಲೆ ಇಳಿಕೆ?

ಅಧಿವೇಶನ ಸಂದರ್ಭದಲ್ಲೇ ಜಿಎಸ್ಟಿ ಸಭೆ, ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ಬೆಲೆ ಇಳಿಕೆ?

ಮುಂಗಾರು ಅಧಿವೇಶನದಲ್ಲಿ ಮಹತ್ವದ ಮಸೂದೆ ಮಂಡನೆ,ಅವಿಶ್ವಾಸ ನಿರ್ಣಯ ಎದುರಿಸುತ್ತಿರುವ ಕೇಂದ್ರವು,ಜನತೆಗೆ ಶನಿವಾರದ ಬಳಿಕ ಕೊಂಚ ನೆಮ್ಮದಿಯ ಸುದ್ದಿ ನೀಡುವ ಸಾಧ್ಯತೆ ಹೆಚ್ಚಿದೆ.ಜುಲೈ 21ರಂದು ದೆಹಲಿಯಲ್ಲಿ ನಡೆಯಲಿರುವ ಜಿಎಸ್​ಟಿ ಮಂಡಳಿ ಸಭೆ ಸೇರಲಿದೆ. ನ್ಯಾಪ್ಕಿನ್,ಕೈಮಗ್ಗ,ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಹೊರೆ ಇಳಿಸುವ ಸಾಧ್ಯತೆ ಕಂಡು ಬಂದಿದೆ.ಜಿಎಸ್​ಟಿ ಜಾರಿಯಾಗಿ ಒಂದು ವರ್ಷವಾಗಿದ್ದು, ಇಲ್ಲಿ ತನಕ 328 ಸರಕು, ಸೇವೆಗಳ ಮೇಲಿನ ತೆರಿಗೆ ಇಳಿಸಲಾಗಿದೆ. ಇದೀಗ ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ತೆರಿಗೆ ಪ್ರಮಾಣ ಕಡಿಮೆ ಮಾಡುವ ಪ್ರಸ್ತಾವನೆ ಮಂಡಳಿ ಮುಂದಿದೆ.
ಅಧಿವೇಶನ ಅಪ್ಡೇಟ್ಸ್ : ಅವಿಶ್ವಾಸ ನಿರ್ಣಯ ಉತ್ತರ ನೀಡಲು ಎನ್ಡಿಎ ಸಜ್ಜು

ಅಧಿವೇಶನ ಅಪ್ಡೇಟ್ಸ್ : ಅವಿಶ್ವಾಸ ನಿರ್ಣಯ ಉತ್ತರ ನೀಡಲು ಎನ್ಡಿಎ ಸಜ್ಜು

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ ಶುಕ್ರವಾರ ಮಧ್ಯಾಹ್ನ ಚರ್ಚೆ, ಭಾಷಣ ನಡೆಯಲಿದೆ. ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ವಿಪಕ್ಷಗಳು, ಆಡಳಿತಾರೂಢ ಎನ್ಡಿಎ ಸರ್ಕಾರ ಬೀಳಿಸಲು ಸಾಧ್ಯವಿಲ್ಲದಿದ್ದರೂ ಇದು ಪ್ರತಿಷ್ಠೆಯ ನಿರ್ಣಯವಾಗಿದೆ. ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 314 ಸದಸ್ಯ ಬಲ ಹೊಂದಿದೆ. ಬಹುಮತ ಸಾಬೀತು ಪಡಿಸಲು ಮ್ಯಾಜಿಕ್ ನಂಬರ್ 268. 'ಬಿಜೆಪಿ ಕೇವಲ ಎನ್‌ಡಿಎ ಮೈತ್ರಿಕೂಟದ ಮತಗಳು ಮಾತ್ರವಲ್ಲ, ಬೇರೆ ಪಕ್ಷಗಳಿಂದಲೂ ಮತಗಳನ್ನು ಪಡೆಯಲಿದೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  
ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚೇ ಹಸಿವು ಏಕೆ ಆಗುತ್ತದೆ?

ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚೇ ಹಸಿವು ಏಕೆ ಆಗುತ್ತದೆ?

ಮಾಸಿಕ ದಿನಗಳಿಗೂ ಸುಮಾರು ಹನ್ನೆರಡರಿಂದ ಹದಿನಾರು ದಿನಗಳ ಮುನ್ನ ಗರ್ಭಾಶಯದಲ್ಲಿ ಅಂಡಾಣು ಬಿಡುಗಡೆಯಗುತ್ತದೆ ಹಾಗೂ ವೀರ್ಯಾಣುವಿಗಾಗಿ ಕಾಯುತ್ತದೆ. ಒಂದು ವೇಳೆ ಗರ್ಭ ಧರಿಸುವ ಸಂಭವವಿದ್ದರೆ ಇದಕ್ಕಾಗಿ ದೇಹ ತಯಾರಿರಬೇಕೆಂದು ಸಕಲ ಸಿದ್ದತೆಗಳನ್ನು ಮಾಡುತ್ತದೆ. ಮಾಸಿಕ ದಿನಗಳಲ್ಲಿ ಈ ಅಂಡಾಣುವನ್ನು ವಿಸರ್ಜಿಸಿ ಹೊಸ ಅಂಡಾಣುವನ್ನು ಬಿಡುಗಡೆ ಮಾಡಲು ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ರಸದೂತಗಳನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ. ಇದು ಹಸಿವಿಗೆ ಪ್ರಚೋದನೆ ನೀಡುತ್ತದೆ. ಹಾಗೂ, ಮಾಸಿಕ ದಿನಗಳಿಗೂ ಕೊಂಚ ದಿನಗಳ ಮುನ್ನ,

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more