Short News

ಮಣ್ಣೆತ್ತಿನ ಅಮಾವಾಸ್ಯೆ : ಮಣ್ಣಿನ ಬಸವಣ್ಣನಿಗೆ ಭಾರೀ ಬೇಡಿಕೆ

ಮಣ್ಣೆತ್ತಿನ ಅಮಾವಾಸ್ಯೆ : ಮಣ್ಣಿನ ಬಸವಣ್ಣನಿಗೆ ಭಾರೀ ಬೇಡಿಕೆ

ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಮಣ್ಣಿನಿಂದ ತಯಾರಿಸಿದ ಎತ್ತುಗಳ ವಿಗ್ರಹದ ಮಾರಾಟ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಭರ್ಜರಿಯಾಗಿ ನಡೆಯಿತು. ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ನಡೆಯಲಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕಂಪಿಲರಾಯ (ನಡುವಲ ಮಸೀದಿ) ಬಳಿ ಮಣ್ಣೆತ್ತುಗಳ ಮಾರಾಟ ಮಾಡುವಲ್ಲಿ ಚಿತ್ರಗಾರ ಕುಟುಂಬದ ಸದಸ್ಯರು ಹಾಗೂ ಬೇರೆ ಊರಿನಿಂದ ಬಂದಂತಹ ಕುಂಬಾರ ಕುಟುಂಬದವರು ಪೈಪೋಟಿ ನಡೆಸಿ, ಗ್ರಾಹಕರ ಬಳಿ ಚೌಕಾಸಿ ನಡೆಸುತ್ತಿರುವುದು ಸಾಮಾನ್ಯವಾಗಿತ್ತು. ಈ ಹಬ್ಬದ ಆಚರಣೆಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನಲೆಯೂ ಇದೆ ಎಂದು ಹಿರಿಯರು ಹೇಳುತ್ತಾರೆ.
"135 ಕೋಟಿ ಜನರಿರುವ ಭಾರತ ಹಿಂದೂ-ಮುಸ್ಲಿಂ ಆಟವಾಡ್ತಿದೆ": ಬಜ್ಜಿ ಟ್ವೀಟ್ ಫುಲ್ ವೈರಲ್

"135 ಕೋಟಿ ಜನರಿರುವ ಭಾರತ ಹಿಂದೂ-ಮುಸ್ಲಿಂ ಆಟವಾಡ್ತಿದೆ": ಬಜ್ಜಿ ಟ್ವೀಟ್ ಫುಲ್ ವೈರಲ್

ಭಾನುವಾರ ನಡೆದ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟರ್ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ ಈಗ ವ್ಯಾಪಕ ವೈರಲ್ ಆಗಿದೆ. 50 ಲಕ್ಷ ಜನಸಂಖ್ಯೆಯಿರುವ ಸಣ್ಣ ದೇಶ ಕ್ರೊಯೇಷಿಯಾ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನಾಡಿದೆ. ಆದ್ರೆ 135 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತದಲ್ಲಿ, ಜನರು ಹಿಂದೂ-ಮುಸ್ಲಿಂ ಆಟವಾಡ್ತಿದ್ದಾರೆ. ನಮ್ಮ ಆಲೋಚನೆ ಬದಲಾದ್ರೆ ದೇಶ ಬದಲಾಗುತ್ತದೆ ಎಂದು ಹರ್ಭಜನ್ ಟ್ವಿಟ್ ಮಾಡಿದ್ದಾರೆ.
ಶ್ರೀರಂಗಪಟ್ಟಣದ ಮನೆಗಳಿಗೆ ಮತ್ತು ದೇವಸ್ಥಾನಕ್ಕೆ ನುಗ್ಗಿದ ನೀರು

ಶ್ರೀರಂಗಪಟ್ಟಣದ ಮನೆಗಳಿಗೆ ಮತ್ತು ದೇವಸ್ಥಾನಕ್ಕೆ ನುಗ್ಗಿದ ನೀರು

ಕೆಆರ್​​ಎಸ್​​​ ಜಲಾಶಯದಿಂದ 80 ಸಾವಿರ ಕ್ಯೂಸೆಕ್​​ ನೀರು ಬಿಟ್ಟಿರೋ ಹಿನ್ನೆಲೆ ಶ್ರೀರಂಗಪಟ್ಟಣದ ಮನೆಗಳಿಗೆ ಮತ್ತು ದೇವಸ್ಥಾನಕ್ಕೆ ನೀರು ನುಗ್ಗಿದೆ. ಪಶ್ಚಿಮ ವಾಹಿನಿಯಲ್ಲಿನ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ನದಿ ದಡದಲ್ಲೇ ಭಕ್ತರು ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪಕ್ಷಿಪ್ರಿಯರ ತಾಣವಾದ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮ ಕೂಡ ಜಲಾವೃತವಾಗಿದೆ. ನೀರಿನ ಒಳಹರಿವಿನಲ್ಲಿ ವ್ಯತ್ಯಯವಾಗಿದ್ದು, 73,159 ಕ್ಯೂಸೆಕ್ಸ್ ಇತ್ತು, ಕೆಆರ್ ಎಸ್ ಜಲಾಶಯದ ಗರಿಷ್ಟ ನೀರಿನ ಮಟ್ಟ, 124.80 ಇದ್ದಿ, ಈಗಾಗಲೇ 123.27 ಅಡಿ ನೀರು ಸಂಗ್ರಹವಾಗಿದೆ.
ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

ಕೇಂದ್ರ ಲೋಕ ಸೇವಾ ಆಯೋಗವು ಇದೀಗ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಜೂನ್ 3 ರಂದು ಪ್ರೆಲಿಮಿನರಿ ಪರೀಕ್ಷೆಯು ನಡೆದಿದ್ದು, ನಿನ್ನೆ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಆಫೀಶಿಯಲ್ ಸೈಟ್‌ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ. ಈ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು ಇದೀಗ ಸಿವಿಲ್ ಸರ್ವೀಸಸ್ ಪ್ರಮುಖ ಪರೀಕ್ಷೆಗಾಗಿ ಡೀಟೆಲ್ಡ್ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಬಹುದಾಗಿದೆ ಎಂದು ಅಫೀಶಿಯಲ್ ಪ್ರಕಟಣೆ ಹೊರಡಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more