Short News

ಮಾದಕ ದ್ರವ್ಯ ವ್ಯಸನದಿಂದ ಮಗನ ಹೊರತಂದ ಕಷ್ಟ ಹೇಳಿಕೊಂಡ ಶಾಸಕ

ಮಾದಕ ದ್ರವ್ಯ ವ್ಯಸನದಿಂದ ಮಗನ ಹೊರತಂದ ಕಷ್ಟ ಹೇಳಿಕೊಂಡ ಶಾಸಕ

ಸದನದಲ್ಲಿ ಇಂದು ಮಾದಕ ದ್ರವ್ಯ ಜಾಲದ ಬಗ್ಗೆ ಗಹನವಾದ ಚರ್ಚೆ ನಡೆಯಿತು. ಬಿಜೆಪಿಯ ಆರ್‌.ಅಶೋಕ್ ಎತ್ತಿದ ಚರ್ಚೆಗೆ ಪಕ್ಷಾತೀತರಾಗಿ ಶಾಸಕರು ಬೆಂಬಲ ಸೂಚಿಸಿದರು. ಬಿಜೆಪಿಯ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಕಾಂಗ್ರೆಸ್‌ನ ಎನ್.ಎ.ಹ್ಯಾರಿಸ್, ಇನ್ನೂ ಹಲವರು ಮಾದಕ ದ್ರವ್ಯ ಜಾಲ ಹರಡುತ್ತಿರುವ ಬಗ್ಗೆ ಹಾಗೂ ಅದರಿಂದಾಗುವ ವ್ಯಾಪಕ ಹಾನಿಯ ಬಗ್ಗೆ ಸದನದ ಗಮನ ಸೆಳೆದರು. ಇವುಗಳಲ್ಲಿ ಅತಿ ಗಮನ ಸೆಳೆದದ್ದು ರೋಣದ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಹೇಳಿದ ಸ್ವಂತ ಅನುಭವ. ಇವರ ಮಗನೇ ಮಾದಕ ದ್ರವ್ಯ ವ್ಯಸನಕ್ಕೆ ಸಿಕ್ಕಿಬಿಟ್ಟಿದ್ದನಂತೆ. ಮಾದಕ ದ್ರವ್ಯ ಯುವಕರಿಗೆ ಶಾಪ ಅದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದರು.
ಯುಪಿಎಸ್ ಸಿ ನಲ್ಲಿ ಜಾಯಿಂಟ್ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯುಪಿಎಸ್ ಸಿ ನಲ್ಲಿ ಜಾಯಿಂಟ್ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜಾಯಿಂಟ್ ಡೈರೆಕ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 2, 2018 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆಗೆ ಜುಲೈ 14, 2018 ಆರಂಭ ದಿನಾಂಕ. ಫಿಶರೀಸ್ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ಸ್ನಾತಕೋತ್ತರ ಪದವಿ ಆಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಲೋಕ ಸೇವಾ ಆಯೋಗ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ.
ಇಂಟೆಕ್ಸ್‌ ಇಂಡೀ 5 ಸ್ಮಾರ್ಟ್‌ಫೋನ್ ಕೇವಲ 4,999 ರೂ.ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಇಂಟೆಕ್ಸ್‌ ಇಂಡೀ 5 ಸ್ಮಾರ್ಟ್‌ಫೋನ್ ಕೇವಲ 4,999 ರೂ.ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಭಾರತೀಯ ಮೊಬೈಲ್ ತಯಾರಿಕಾ ಸಂಸ್ಥೆ ಹೊಸ ಪ್ರಯತ್ನಕ್ಕೆ ಮುನ್ನುಡಿ ಇಟ್ಟಿದೆ ಮತ್ತು ಭಾರತದ ಪ್ರಮುಖ 22 ಭಾಷೆಯನ್ನು ಬೆಂಬಲಿಸುವ ಫೋನ್ ಬಿಡುಗಡೆಗೆ ಸನ್ನದ್ಧವಾಗಿದೆ. ದೇಶೀಯ ಹ್ಯಾಂಡ್ ಸೆಟ್ ತಯಾರಿಕಾ ಕಂಪೆನಿ ಇಂಟೆಕ್ಸ್ ಟೆಕ್ನಾಲಜೀಸ್ ತನ್ನ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ಬಿಡುಗಡೆಯ ಸರಣಿಯನ್ನು ಮುಂದುವರಿಸಿದೆ. ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಇಂಡೀ 5 ಫೋನನ್ನು 4,999 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಿದೆ. ಇಂಡೀ 5 4ಜಿ-Volte ಸ್ಮಾರ್ಟ್ ಫೋನ್ ಆಗಿದ್ದು 1.25GHz ಕ್ವಾರ್ಡ್ -ಕೋರ್ ಪ್ರೊಸೆಸರ್ ನ್ನು ಹೊಂದಿದೆ ಮತ್ತು ಆಂಡ್ರಾಯಡ್ ನಗಟ್ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.
ಕೂದಲಿನ ಸರ್ವ ರೋಗಕ್ಕೂ ಸರಳವಾಗಿ ಮಾಡಬಹುದಾದ 'ಬೇವಿನ ಟಾನಿಕ್' !

ಕೂದಲಿನ ಸರ್ವ ರೋಗಕ್ಕೂ ಸರಳವಾಗಿ ಮಾಡಬಹುದಾದ 'ಬೇವಿನ ಟಾನಿಕ್' !

ಕೂದಲಿನ ಹಲವಾರು ಸಮಸ್ಯೆಗಳಿಗೆ ಮತ್ತು ಕೂದಲು ಆರೋಗ್ಯಕರ ಹಾಗೂ ಬಲಿಷ್ಠವಾಗಿ ಬೆಳೆಯಲು ಪ್ರಮುಖವಾದ ಸಾಮಗ್ರಿಯೇ ಬೇವಿನ ಎಲೆಗಳು. ನೈಸರ್ಗಿಕದತ್ತ ಬೇವಿನ ಎಲೆಗಳಿಂದ ಮಾಡುವಂತಹ ಹೇರ್ ಟಾನಿಕ್ ಯಾವುದೇ ಅಡ್ಡಪರಿಣಾಮ ಬೀರದು. ಇದು ತಲೆಬುರುಡೆಯ ಸಮತೋಲನ ಕಾಪಾಡಿಕೊಂಡು ಅದನ್ನು ಮೊಶ್ಚಿರೈಸ್ ಆಗಿ ಇಟ್ಟು, ಶಿಲೀಂಧ್ರಿಯ ಸೋಂಕಿನಿಂದ ಕಾಪಾಡುವುದು. ಈ ಹೇರ್ ಟಾನಿಕ್ ಕೂದಲಿನ ಕೋಶಗಳನ್ನು ಬಲಗೊಳಿಸಿ, ಹೊಸ ಕೂದಲು ಬೆಳೆಯಲು ನೆರವಾಗುವುದು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more