Short News

ಟಿಕೇಟ್ ವಂಚಿತ ಎನ್.ವೈ. ಗೋಪಾಲಕೃಷ್ಣರಿಗೆ ತ್ರಿಶಂಕು ಸ್ಥಿತಿ!

ಟಿಕೇಟ್ ವಂಚಿತ ಎನ್.ವೈ. ಗೋಪಾಲಕೃಷ್ಣರಿಗೆ ತ್ರಿಶಂಕು ಸ್ಥಿತಿ!

ಎನ್.ವೈ. ಗೋಪಾಲಕೃಷ್ಣ ಅವರು ಸೋಲಿಲ್ಲದ ಸರದಾರ. ಆದರೆ, 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷದ ಎಸ್. ತಿಪ್ಪೇಸ್ವಾಮಿ ಅವರಿಂದ ಹೀನಾಯವಾಗಿ ಸೋಲು ಕಂಡರು. ಡೆಪ್ಯುಟಿ ಸ್ಪೀಕರ್ ಆಗಿದ್ದ ಗೋಪಾಲಕೃಷ್ಣ ಅವರಿಗೆ ರಾಜಕೀಯ ಪುನರುತ್ಥಾನ ಕಲ್ಪಿಸಿದ್ದು ಬಳ್ಳಾರಿ ಗ್ರಾಮೀಣ ಕ್ಷೇತ್ರ. ಆದರೆ, ಬಳ್ಳಾರಿಯ ಮೋಕಾಕ್ಕೆ ಬಂದಿದ್ದು ತಪ್ಪೇ? ಎನ್ನುವಂತಾಗಿದೆ ಅವರ ಸ್ಥಿತಿ. ಅಕ್ಷರಶಃ ತ್ರಿಶಂಕು ಸ್ಥಿತಿ. 2018 ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಟಿಕೇಟ್ ನಿರಾಕರಿಸಲಾಗಿದೆ. ಅತ್ತ ಸ್ವಕ್ಷೇತ್ರ ಮೊಳಕಾಲ್ಮೂರು ಇಲ್ಲದೇ, ಪರಕ್ಷೇತ್ರ ಬಳ್ಳಾರಿ ಗ್ರಾಮೀಣವೂ ಇಲ್ಲದೇ ತ್ರಿಶಂಕು ಸ್ಥಿತಿ ತಲುಪಿದ್ದಾರೆ.
ಲಾಂಚ್ ಆಯ್ತು ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌

ಲಾಂಚ್ ಆಯ್ತು ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌

ಈ ಹಿಂದೆ ಒಂದು ಸರಣಿಯಲ್ಲಿ ಎರಡು ಸ್ಮಾರ್ಟ್‌ಪೋನ್ ಲಾಂಚ್ ಮಾಡುತ್ತಿದ್ದ ಮೊಟೊ, ಈ ಬಾರಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್ ಟಾಪ್ ಎಂಡ್ ಆಗಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ಗಳು ಇಂದು ಬ್ರೆಜಿಲ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಭಾರತೀಯ ರೂಪಾಯಿಗಳಲ್ಲಿ ಬೆಲೆಗಳನ್ನು ನೋಡುದಾದರೆ ಮೊಟೊ G6 ರೂ. 16,500ಕ್ಕೆ, ಮೊಟೊ G6 ಪ್ಲೇ ರೂ.13000ಕ್ಕೆ ಮತ್ತು ಮೊಟೊ G6 ಪ್ಲಸ್ ರೂ.24,350ಕ್ಕೆ ಲಭ್ಯವಿದೆ.
ಮತದಾನ ಕಾರ್ಮಿಕರ ಹಕ್ಕು, ತಪ್ಪದೇ ಮತ ಚಲಾಯಿಸಿ

ಮತದಾನ ಕಾರ್ಮಿಕರ ಹಕ್ಕು, ತಪ್ಪದೇ ಮತ ಚಲಾಯಿಸಿ

ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಮಿಕರಿಗೆ ಸಂಪೂರ್ಣ ಅವಕಾಶಚುನಾವಣಾ ಪ್ರಕ್ರಿಯೆಯಲ್ಲಿ ಕೈಗಾರಿಕೆಗಳು ಪಾಲುದಾರರಾಗಿರುವುದರಿಂದ ಕಾರ್ಮಿಕರು ಚುನಾವಣೆಯಲ್ಲಿ ಭಾಗವಹಿಸಲು ಸಂಪೂರ್ಣ ಅವಕಾಶ ನೀಡಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕರೆ ನೀಡಿದರು. ಮತದಾನ ಕಾರ್ಮಿಕರ ಹಕ್ಕು ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯಲ್ಲಿ (ಎಫ್‍ಕೆಸಿಸಿಐ) ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮವಾಗಿ ಬಳಕೆಯಾಗುತ್ತಿರುವ ವಿವಿಪ್ಯಾಟ್ ಯಂತ್ರಗಳು ಅತ್ಯಂತ ಸುರಕ್ಷಿತ ಎಂದು ತಿಳಿಸಿದರು.

ಇಂದಿನ (ಏಪ್ರಿಲ್ 21) ಪೆಟ್ರೋಲ್, ಡೀಸೆಲ್ ಬೆಲೆ

ಇಂದಿನ (ಏಪ್ರಿಲ್ 21) ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿ: ಪೆಟ್ರೋಲ್: 74.21 / ಲೀಟರ್, ಡೀಸೆಲ್: 65.46 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 76.91 / ಲೀಟರ್ , ಡೀಸೆಲ್: 68.16 / ಲೀಟರ್. ಮುಂಬೈ: ಪೆಟ್ರೋಲ್: 82.06/ ಲೀಟರ್ , ಡೀಸೆಲ್: 69.70 / ಲೀಟರ್. ಚೆನ್ನೈ: ಪೆಟ್ರೋಲ್: 76.99 / ಲೀಟರ್ , ಡೀಸೆಲ್: 69.06 / ಲೀಟರ್. ಬೆಂಗಳೂರು: ಪೆಟ್ರೋಲ್: 75.39 / ಲೀಟರ್, ಡೀಸೆಲ್: 66.57 / ಲೀಟರ್. ಹೈದರಾಬಾದ್: ಪೆಟ್ರೋಲ್: 78.59 / ಲೀಟರ್, ಡೀಸೆಲ್: 71.12 / ಲೀಟರ್.