ನೈಋತ್ಯ ರೈಲ್ವೆಯಲ್ಲಿ ಕಾಯ್ದಿರಿಸದ ಟಿಕೇಟ್ ಬುಕ್ ಮಾಡಲು ಆ್ಯಪ್
ಕರ್ನಾಟಕ
- 2 month, 9 days ago
ಕಾಯ್ದಿರಿಸದ ಮತ್ತು ಪ್ಲ್ಯಾಟ್ ಫಾರಂ ಟಿಕೆಟ್ ಗಳನ್ನು ಬುಕ್ ಮಾಡಲು ರೈಲ್ವೆ ಇಲಾಖೆ ನೈಋತ್ಯ ರೈಲ್ವೆ ವಲಯದಲ್ಲಿ ಮೊಬೈಲ್ ಅಪ್ಲಿಕೇಷನ್ ಸೇವೆ ಆರಂಭಿಸಿದೆ. ಈಗಾಗಲೇ ಹುಬ್ಬಳ್ಳಿ, ಮೈಸೂರು ರೈಲ್ವೆ ವಿಭಾಗ, ಬೆಂಗಳೂರಿನಲ್ಲಿ ಕಾರ್ಯಾರಂಭಿಸಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್. ಸಕ್ಸೇನಾ ತಿಳಿಸಿದ್ದಾರೆ. ಆಂಡ್ರ್ಯಾಯ್ಡ್ ಮತ್ತು ವಿಂಡೊ ಫೋನ್ ಗಳಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡರೆ ಕಾಯ್ದಿರಿಸಿದ ಟಿಕೆಟ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.