Short News

ಕರ್ನಾಟಕದ ಕರಾವಳಿಯಲ್ಲಿ ಮತ್ತೆ ಮುಂದುವರಿಯಲಿದೆ ಮಳೆಯ ಆರ್ಭಟ

ಕರ್ನಾಟಕದ ಕರಾವಳಿಯಲ್ಲಿ ಮತ್ತೆ ಮುಂದುವರಿಯಲಿದೆ ಮಳೆಯ ಆರ್ಭಟ

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಸಹ ಭಾರೀ ಮಳೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ. ಕೊಡಗು ಮತ್ತು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಇಂದು ಸಹ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನಗಳಲ್ಲಿ, ಬೆಂಗಳೂರು, ಚಿತ್ರದುರ್ಗ, ಚಾಮಾರಾಜನಗರ, ಚಿಕ್ಕಮಂಗಳೂರು, ಹಾಸನ, ಕೋಲಾರ, ಮೈಸೂರು, ತುಮಕೂರುಗಳಲ್ಲೂ ಇಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಎಡಿಷನ್ ಸ್ಕೂಟರ್...

ಯಮಹಾ ಸಂಸ್ಥೆಯು ಕಳೆದ ವಾರವಷ್ಟೆ ತಮ್ಮ ಹೊಸ ಸ್ಟ್ರೀಟ್ ರ್‍ಯಾಲಿ ಜೆಡ್‍ಆರ್ ಸ್ಕೂಟರ್‍‍ನ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಲ್ಲದೇ, ಇದೀಗ ಸೈನಸ್ ರೇ ಸ್ಕೂಟರಿನ ಸ್ಟ್ರೀಟ್ ರ್‍ಯಾಲಿ ಎಡಿಷನ್ ಮಾದರಿಯನ್ನ ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸದಾಗಿ ಬಿಡುಗಡೆಗೊಂಡ ಸ್ಟ್ರೀಟ್ ರ್‍ಯಾಲಿ ಜೆಡ್‍ಆರ್ ಸಂಸ್ಥೆಯ ರೇ ಜೆಡ್‍ಆರ್ ಸ್ಪೋರ್ಟಿ 110 ಸ್ಕೂಟರಿನ ಸ್ಪೋರ್ಟಿ ವರ್ಷನ್ ಆಗಿದ್ದು, ರ್‍ಯಾಲಿ ರೆಡ್ ಮತ್ತು ರೇಸಿಂಗ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟ ಈ ಸ್ಕೂಟರ್‌ನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 57,898 ಸಾವಿರಕ್ಕೆ ನಿಗದಿಪಡಿಸಲಾಗಿದೆ.
ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ವಿನೂತನ ಎಕ್ಸಾಸ್ಟ್ ಸೌಲಭ್ಯದೊಂದಿಗೆ ಮಿಂಚಿದ ಟಿವಿಎಸ್ ಅಪಾಚೆ ಆರ್‌ಆರ್310

ದೇಶಿಯ ಮಾರುಕಟ್ಟೆಯಲ್ಲಿನ ಪ್ರವೇಶ ಮಟ್ಟದ ಕ್ರೀಡಾ ಬೈಕ್‌ಗಳ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಟಿವಿಎಸ್ ಅಪಾಚೆ ಆರ್‌ಆರ್ ಬೈಕ್‌ಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಕ್ರೊಪ್ರೊವಿಕ್ ಎನ್ನುವ ಸಂಸ್ಥೆಯೊಂದುವ ಅಪಾಚೆ ಆರ್‌ಆರ್310 ಬೈಕ್‌ಗಳಿಗಾಗಿಯೇ ವಿನೂತನ ವಿನ್ಯಾಸದ ಎಕ್ಸಾಸ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಅಪಾಚೆ ಆರ್‌ಆರ್310 ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಂಡಿದ್ದು,ಈ ಹಿಂದೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.05ಲಕ್ಷ ಬೆಲೆ ಹೊಂದಿದ್ದ ಬೆಲೆಯನ್ನು ಇದೀಗ ಹೆಚ್ಚುವರಿಯಾಗಿ ರೂ.18 ಸಾವಿರ ಏರಿಕೆ ಮಾಡಲಾಗಿದೆ.
ಎಲ್ಪಿಜಿ ಸಬ್ಸಿಡಿ ಬದಲಾವಣೆ!  ಎಲ್ಪಿಜಿ ಸಬ್ಸಿಡಿ ಬದಲು ಅಡುಗೆ ಸಬ್ಸಿಡಿ

ಎಲ್ಪಿಜಿ ಸಬ್ಸಿಡಿ ಬದಲಾವಣೆ! ಎಲ್ಪಿಜಿ ಸಬ್ಸಿಡಿ ಬದಲು ಅಡುಗೆ ಸಬ್ಸಿಡಿ

  • ಎಲ್ಪಿಜಿ ಸಬ್ಸಿಡಿಯನ್ನು ಅಡುಗೆ ಸಬ್ಸಿಡಿಯೊಂದಿಗೆ ಬದಲಿಸುವ ಕುರಿತಾದ ಪ್ರಸ್ತಾಪವನ್ನು ನೀತಿ ಆಯೋಗ ಜಾರಿ ತರುವ ಬಗ್ಗೆ ಚಿಂತಿಸುತ್ತಿದೆ. ನೈಸರ್ಗಿಕ ಅನಿಲ ಮತ್ತು ಜೈವಿಕ ಇಂಧನವನ್ನು ಬಳಸುವ ಜನರಿಗೂ ಕೂಡ ಸಬ್ಸಿಡಿ ಪ್ರಯೋಜನ ಲಭ್ಯವಾಗಲಿ ಎನ್ನುವುದು ನೀತಿ ಆಯೋಗದ ಉದ್ದೇಶವಾಗಿದೆ.
  • ಅಡುಗೆ ಮಾಡಲು ಬಳಸಲಾಗುವ ಎಲ್ಲಾ ರೀತಿಯ ಇಂಧನಗಳ ಮೇಲೆ ಸಬ್ಸಿಡಿಗಳನ್ನು ಒದಗಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ, ಸರ್ಕಾರ ಎಲ್ಪಿಜಿ ಬಳಕೆದಾರರಿಗೆ ಸಬ್ಸಿಡಿಯನ್ನು ವಿಸ್ತರಿಸಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more