Short News

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗೆ ಸಿಗಲಿದೆ ಸ್ಯಾನಿಟರಿ ನ್ಯಾಪ್ ಕಿನ್

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗೆ ಸಿಗಲಿದೆ ಸ್ಯಾನಿಟರಿ ನ್ಯಾಪ್ ಕಿನ್

ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ರೈಲ್ವೆ ವಲಯ ಎರಡು ಪ್ರಮುಖ ಮೆಷಿನ್ ಗಳನ್ನು ಬೆಂಗಳೂರಿನ ಎರಡು ನಿಲ್ದಾಣಗಳ ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯಗಳಲ್ಲಿ ಇಡಲು ಉದ್ದೇಶಿಸಿದೆ. ಸ್ಯಾನಿಟರಿ ನ್ಯಾಪ್ ಕಿನ್ ಉತ್ಪಾದಿಸುವ ಯಂತ್ರ ಮತ್ತು ನ್ಯಾಪ್ ಕಿನ್ ಗಳನ್ನು ಹೊರಹಾಕಲು ಇರುವ ಪರಿಸರ ಸ್ನೇಹಿ ಯಂತ್ರ ಇಡಲು ತೀರ್ಮಾನಿಸಲಾಗಿದ್ದು, ಮಹಿಳೆಯರಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ಹೆಚ್ಚಿಸಲು ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಸೋಮವಾರ ಪ್ರಾಯೋಗಿಕ ಮಾದರಿಯಲ್ಲಿ ಯಂತ್ರವನ್ನು ಸ್ಥಾಪಿಸಲಾಯಿತು. ನೈರುತ್ಯ ರೈಲ್ವೆ ಮಹಿಳಾ ಅಭಿವೃದ್ಧಿ ಸಂಘ ಈ ಯೋಜನೆಗೆ ಪ್ರಾಯೋಜಕತ್ವ ವಹಿಸಿಕೊಂಡಿದೆ.
ಸಕಲ ಕಲಾವಲ್ಲಭನಾದ ಜ್ಯೂನಿಯರ್ ದರ್ಶನ್

ಸಕಲ ಕಲಾವಲ್ಲಭನಾದ ಜ್ಯೂನಿಯರ್ ದರ್ಶನ್

ದರ್ಶನ್ ಹಾಗೂ ವಿಜಯಲಕ್ಷ್ಮೀ ಪುತ್ರ ವೀನಿಶ್ ದರ್ಶನ್ ಚಿಕ್ಕ ವಯಸ್ಸಿನಲ್ಲೇ ಎಲ್ಲಾ ರೀತಿಯ ಕಲೆಗಳನ್ನ ಕರಗತ ಮಾಡಿಕೊಂಡಿದ್ದಾನೆ. ಇತ್ತೀಚಿಗಷ್ಟೇ ಅಮ್ಮನ ಜೊತೆ ಸೇರಿ ಮಣ್ಣಿನಲ್ಲಿ ಗಣೇಶನನ್ನು ಮಾಡುವುದನ್ನು ಕಲಿತುಕೊಂಡಿದ್ದಾನೆ. ಇತ್ತೀಚೆಗೆ ಶಾಲೆಯಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ವೀನಿಶ್ ಚಿನ್ನದ ಪದಕವನ್ನ ಗೆದ್ದು ತಂದಿದ್ದರು.  ಕೇವಲ ಕರಾಟೆಯಲ್ಲಿ ಮಾತ್ರವಲ್ಲದೆ ವೀನಿಶ್ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದಾರೆ. ತನ್ನ ಒಂಬತ್ತನೇ ವಯಸ್ಸಿನಲ್ಲೇ ವೀನಿಶ್ ಸಾಧನೆ ಅಪಾರವಾದದ್ದು. ರಾಜರಾಜೇಶ್ವರಿ ನಗರದ ಹಿಲ್ ವೀವ್ ಸ್ಕೂಲ್ ನಲ್ಲಿ ವೀನಿಶ್ ದರ್ಶನ್ ವ್ಯಾಸಾಂಗ ಮಾಡುತ್ತಿದ್ದಾರೆ.
ರಾಜಾಜಿನಗರದಲ್ಲಿ ಜ್ಯುವೆಲ್ಲರಿ ದರೋಡೆಗೆ ಯತ್ನ, ಗಾಳಿಯಲ್ಲಿ ಗುಂಡು

ರಾಜಾಜಿನಗರದಲ್ಲಿ ಜ್ಯುವೆಲ್ಲರಿ ದರೋಡೆಗೆ ಯತ್ನ, ಗಾಳಿಯಲ್ಲಿ ಗುಂಡು

ನಗರದ ರಾಜಾಜಿನಗರದ ಚೆಮ್ಮನೂರು ಜ್ಯುವೆಲ್ಸ್ ಅನ್ನು ದರೋಡೆ ಮಾಡಲು ಕಳ್ಳರು ಯತ್ನ ನಡೆಸಿದ್ದು ಈ ಸಂದರ್ಭ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಬಂದಿದ್ದ ದರೋಡೆಕೋರರನ್ನು ತಡೆಯಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ, ಇದನ್ನು ನೋಡಿದ ದರೋಡೆಕೋರರು ಭಯಗೊಂಡು ಸ್ಥಳದಿಂದ ಪೇರಿ ಕಿತ್ತಿದ್ದಾರೆ.

ಮೊದಲು ಒಬ್ಬ ಭದ್ರತಾ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ

ಪ್ರಧಾನಿ ಮೋದಿಗೆ ಕರ್ನಾಟಕ ಕಾಂಗ್ರೆಸ್‌ನ ಪ್ರಶ್ನೆಗಳು!

ಪ್ರಧಾನಿ ಮೋದಿಗೆ ಕರ್ನಾಟಕ ಕಾಂಗ್ರೆಸ್‌ನ ಪ್ರಶ್ನೆಗಳು!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮೈಸೂರಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. 'ಕರ್ನಾಟಕದ ಕಮೀಷನ್ ಸರ್ಕಾರ ಬೇಕಾ?, ಬಿಜೆಪಿಯ ವಿಷನ್ ಸರ್ಕಾರ ಬೇಕಾ?" ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕ ಕಾಂಗ್ರೆಸ್ ನರೇಂದ್ರ ಮೋದಿ ಅವರಿಗೆ ತಿರುಗೇಟು ಕೊಟ್ಟಿದೆ. ಟ್ವಿಟರ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಟ್ವಿಟರ್ ವಾರ್ ಆರಂಭಿಸಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ಯಾವುದೇ ಆಧಾರಗಳಿಲ್ಲದೇ ಆರೋಪಗಳನ್ನು ಮಾಡಬೇಡಿ ಎಂದು ಹೇಳಿದೆ.