Short News

ಭೋರ್ಗರೆವ ಕಪಿಲಾ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

ಭೋರ್ಗರೆವ ಕಪಿಲಾ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರು ಯುವಕರು ನದಿಯಲ್ಲಿ ಈಜುವ ದುಸ್ಸಾಹಸಕ್ಕೆ ಇಳಿದಿದ್ದರು. ಆದರೆ ಇದೀಗ ಅವರಲ್ಲಿ ಒಬ್ಬ ಯುವಕ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಸೇತುವೆ ಬಳಿ ಇಂದು ಶುಕ್ರವಾರ ಹರಿಯುತ್ತಿರುವ ನೀರಿಗೆ ಸೇತುವೆ ಮೇಲಿನಿಂದ ಮೂವರು ಈಜಲು ಬಿದ್ದರು. ಆದರೆ ಇವರಲ್ಲಿ ಉಮೇಶ್ (24) ಎಂಬಾತ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಚಿಕ್ಕನಾಯ್ಕ, ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಮೇಶ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ತೀವ್ರಗೊಂಡ ಕಡಲ ಕೊರೆತ

ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ತೀವ್ರಗೊಂಡ ಕಡಲ ಕೊರೆತ

ರಾಜ್ಯದ ಕರಾವಳಿಯಲ್ಲಿ ವರುಣ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಕಳೆದ 2 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಇನ್ನೊಂದೆಡೆ ಕಡಲ ರೌದ್ರ ನರ್ತನಕ್ಕೆ ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ಭಾರೀ ಕಡಲ ಕೊರೆತವಾಗುತ್ತಿದೆ. ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಕಡಬದ ಹೊಸ್ಮಠ ಸೇತುವೆ ಸತತ ಎಂಟನೇ ದಿನವೂ ಮುಳುಗಡೆಯಾಗುತ್ತಿದ್ದು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಭಕ್ತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
"135 ಕೋಟಿ ಜನರಿರುವ ಭಾರತ ಹಿಂದೂ-ಮುಸ್ಲಿಂ ಆಟವಾಡ್ತಿದೆ": ಬಜ್ಜಿ ಟ್ವೀಟ್ ಫುಲ್ ವೈರಲ್

"135 ಕೋಟಿ ಜನರಿರುವ ಭಾರತ ಹಿಂದೂ-ಮುಸ್ಲಿಂ ಆಟವಾಡ್ತಿದೆ": ಬಜ್ಜಿ ಟ್ವೀಟ್ ಫುಲ್ ವೈರಲ್

ಭಾನುವಾರ ನಡೆದ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟರ್ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ ಈಗ ವ್ಯಾಪಕ ವೈರಲ್ ಆಗಿದೆ. 50 ಲಕ್ಷ ಜನಸಂಖ್ಯೆಯಿರುವ ಸಣ್ಣ ದೇಶ ಕ್ರೊಯೇಷಿಯಾ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನಾಡಿದೆ. ಆದ್ರೆ 135 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತದಲ್ಲಿ, ಜನರು ಹಿಂದೂ-ಮುಸ್ಲಿಂ ಆಟವಾಡ್ತಿದ್ದಾರೆ. ನಮ್ಮ ಆಲೋಚನೆ ಬದಲಾದ್ರೆ ದೇಶ ಬದಲಾಗುತ್ತದೆ ಎಂದು ಹರ್ಭಜನ್ ಟ್ವಿಟ್ ಮಾಡಿದ್ದಾರೆ.
ಶ್ರೀರಂಗಪಟ್ಟಣದ ಮನೆಗಳಿಗೆ ಮತ್ತು ದೇವಸ್ಥಾನಕ್ಕೆ ನುಗ್ಗಿದ ನೀರು

ಶ್ರೀರಂಗಪಟ್ಟಣದ ಮನೆಗಳಿಗೆ ಮತ್ತು ದೇವಸ್ಥಾನಕ್ಕೆ ನುಗ್ಗಿದ ನೀರು

ಕೆಆರ್​​ಎಸ್​​​ ಜಲಾಶಯದಿಂದ 80 ಸಾವಿರ ಕ್ಯೂಸೆಕ್​​ ನೀರು ಬಿಟ್ಟಿರೋ ಹಿನ್ನೆಲೆ ಶ್ರೀರಂಗಪಟ್ಟಣದ ಮನೆಗಳಿಗೆ ಮತ್ತು ದೇವಸ್ಥಾನಕ್ಕೆ ನೀರು ನುಗ್ಗಿದೆ. ಪಶ್ಚಿಮ ವಾಹಿನಿಯಲ್ಲಿನ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ನದಿ ದಡದಲ್ಲೇ ಭಕ್ತರು ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪಕ್ಷಿಪ್ರಿಯರ ತಾಣವಾದ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮ ಕೂಡ ಜಲಾವೃತವಾಗಿದೆ. ನೀರಿನ ಒಳಹರಿವಿನಲ್ಲಿ ವ್ಯತ್ಯಯವಾಗಿದ್ದು, 73,159 ಕ್ಯೂಸೆಕ್ಸ್ ಇತ್ತು, ಕೆಆರ್ ಎಸ್ ಜಲಾಶಯದ ಗರಿಷ್ಟ ನೀರಿನ ಮಟ್ಟ, 124.80 ಇದ್ದಿ, ಈಗಾಗಲೇ 123.27 ಅಡಿ ನೀರು ಸಂಗ್ರಹವಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more