Short News

ಕರ್ನಾಟಕ-ಕೇರಳ ರಾಜ್ಯ ಹೆದ್ದಾರಿ ಒಂದು ತಿಂಗಳ ಕಾಲ ಬಂದ್

ಕರ್ನಾಟಕ-ಕೇರಳ ರಾಜ್ಯ ಹೆದ್ದಾರಿ ಒಂದು ತಿಂಗಳ ಕಾಲ ಬಂದ್

ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಜೂನ್ 12 ರಂದು ನಿರಂತರವಾಗಿ ಭಾರಿ ಮಳೆ ಸುರಿದಿದ್ದು, ಇದರಿಂದಾಗಿ ಜಿಲ್ಲೆಯಿಂದ ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಪೆರುಂಬಾಡಿಯಿಂದ ಮಾಕುಟ್ಟದವರೆಗೆ ಸುಮಾರು 25 ಕ್ಕೂ ಹೆಚ್ಚು ಭಾಗಗಳಲ್ಲಿ ಗಣನೀಯ ಪ್ರಮಾಣದ ಭೂಕುಸಿತ ಉಂಟಾಗಿದೆ. ತಾತ್ಕಾಲಿಕವಾಗಿ ಜೂನ್ 13ರಿಂದ ಜುಲೈ 12 ರ ವರೆಗೆ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ನಮ್ಮ ಮೂಗಿನ ಮೂಳೆ ಮೃದುವಾಗಿದ್ದು ಈ ಮೂಳೆಯ ಹಿಂದೆ, ಎರಡೂ ಕಣ್ಣುಗಳ ನಡುವೆ ಮತ್ತು ಹಣೆಭಾಗದ ಕೊಂಚ ಅಡಿಯಲ್ಲಿ (ಅಂದರೆ ಹುಬ್ಬು ಪ್ರಾರಂಭವಾಗುವ ಕೆಳಗೆ) ಟೊಳ್ಳು ಭಾಗವೊಂದಿದೆ. ಇದೇ ಕುಹರ ಅಥವಾ ಸೈನಸ್. ಈ ಟೊಳ್ಳಿನಲ್ಲಿ ಸೋಂಕು ಉಂಟಾದರೆ ಇದರ ಅಕ್ಕಪಕ್ಕ ಹಾದು ಹೋಗುವ ನರಗಳಲ್ಲಿ ಭಾರೀ ಸಂವೇದನೆಯುಂಟಾಗಿ ತಲೆನೋವು, ಮುಖದ ಸ್ನಾಯುಗಳಲ್ಲಿ ನೋವು, ಮೂಗಿನ ಒಳಗಿನಿಂದ ಗಂಟಲವರೆಗೆ ಭಾರೀ ಉರಿ, ನೋವು, ವಾಕರಿಕೆ ಮೊದಲಾದವು ಎದುರಾಗುತ್ತವೆ. ಇದಕ್ಕೆಂದೇ ಆಯುರ್ವೇದದಲ್ಲಿ ಕೆಲವೊಂದು ಮನೆಮದ್ದನ್ನು ನೀಡಿದ್ದೇವೆ ಮುಂದೆ ಓದಿ...

ಗರ್ಭಿಣಿಯರ ಸಮಸ್ಯೆಗಳಿಗೆ ದಿವ್ಯೌಷಧ ಜೀರಿಗೆ ನೀರು

ಗರ್ಭಿಣಿಯರ ಸಮಸ್ಯೆಗಳಿಗೆ ದಿವ್ಯೌಷಧ ಜೀರಿಗೆ ನೀರು

ಜೀರಿಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ಅಪಾರವಾದುದು. ದಕ್ಷಿಣ ಭಾಗಗಳಲ್ಲಿ ಇದು ಹೆಚ್ಚು ಬಳಕೆಯಾಗುವ ಸಾಂಬಾರ ಪದಾರ್ಥವಾಗಿದ್ದು ಮದ್ದಿನ ವಿಷಯದಲ್ಲೂ ಎತ್ತಿದ ಕೈ ಎಂದೆನಿಸಿದೆ. ಇದನ್ನು ಬಳಸಿ ಮಾಡದ ಖಾದ್ಯವಿಲ್ಲ ಅಂತೆಯೇ ಇದು ಗುಣಪಡಿಸದ ರೋಗಗಳೇ ಇಲ್ಲ ಎಂಬುದು ಚಾಲ್ತಿಯಲ್ಲಿರುವ ಮಾತಾಗಿದೆ. ಹೊಟ್ಟೆಯ ಗ್ಯಾಸ್ ಸಮಸ್ಯೆ, ಮುಟ್ಟಿನ ನೋವು, ಹೊಟ್ಟೆಯುಬ್ಬರ ಹೀಗೆ ಯಾವುದೇ ಸಮಸ್ಯೆಗೂ ರಾಮಬಾಣವಾಗಿದೆ ಜೀರಿಗೆ. ಇದೀಗ ಗರ್ಭಿಣಿಯರಿಗೂ ಈ ವಸ್ತು ಫಲಪ್ರದ ಕೊಡುಗೆ ಎಂದೆನಿಸಿದೆ. ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಎದುರಿಸುವ ಸಕಲ ಸಂಕಷ್ಟಗಳಿಗೂ ಜೀರಿಗೆ ಹಾಕಿದ ನೀರು ಅತ್ಯುತ್ತಮ ಔಷಧಿ ಎಂದೆನಿಸಿದೆ.

ಜೀರಿಗೆ ನೀರು : ಗರ್ಭಿಣಿಯರಿಗೆ ಅತ್ಯುತ್ತಮ ಮನೆ ಔಷಧಿ

ಜೀರಿಗೆ ನೀರು : ಗರ್ಭಿಣಿಯರಿಗೆ ಅತ್ಯುತ್ತಮ ಮನೆ ಔಷಧಿ

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಎದುರಿಸುವ ಸಕಲ ಸಂಕಷ್ಟಗಳಿಗೂ ಜೀರಿಗೆ ಹಾಕಿದ ನೀರು ಅತ್ಯುತ್ತಮ ಔಷಧಿ ಎಂದೆನಿಸಿದೆ. ಇದು ಹೆಚ್ಚು ಪರಿಣಾಮಕಾರಿ ಮಾತ್ರವಾಗಿಲ್ಲದೆ ತಾಯಿ ಮತ್ತು ಭ್ರೂಣಕ್ಕೂ ಸುರಕ್ಷಿತವಾದುದಾಗಿದೆ ಎಂಬುದಾಗಿ ಜೀರಿಗೆಯ ಔಷಧೀಯ ಗುಣಗಳು ಸಾಬೀತು ಪಡಿಸಿವೆ. ಈ ನೀರನ್ನು ತಯಾರು ಪಡಿಸಲು ನಿಮಗೆ 1 ಲೀಟರ್ ನೀರು ಮತ್ತು 1 ಚಮಚ ಜೀರಿಗೆ ಸಾಕು. ನೀರನ್ನು ಜೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಅದನ್ನು ತಣಿಸಿ ಜೀರಿಗೆಯನ್ನು ತೆಗೆದು ನೀರನ್ನು ಸೇವಿಸಬೇಕು.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more