Short News

ಈಗಲ್‌ಟನ್‌ ರೆಸಾರ್ಟ್‌ನ ಪೊಲೀಸ್‌ ಭದ್ರತೆ ವಾಪಾಸ್‌, ಬಿಎಸ್‌ವೈ ತಂತ್ರ?

ಈಗಲ್‌ಟನ್‌ ರೆಸಾರ್ಟ್‌ನ ಪೊಲೀಸ್‌ ಭದ್ರತೆ ವಾಪಾಸ್‌, ಬಿಎಸ್‌ವೈ ತಂತ್ರ?

ಕಾಂಗ್ರೆಸ್‌ ಶಾಸಕರು ತಂಗಿರುವ ಈಗಲ್‌ಟನ್ ರೆಸಾರ್ಟ್‌ಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆದುಕೊಳ್ಳಲಾಗಿದೆ. ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ಕುತೂಹಲ ಕೆರಳಿಸಿದೆ. ಕುದುರೆ ವ್ಯಾಪಾರದಿಂದ ಪಾರಾಗಲು ಬಿಡದಿ ಬಳಿ ಇರುವ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಿನ್ನೆ ರಾತ್ರಿಯಿಂದಲೂ ಹಲವು ಶಾಸಕರು ವಾಸ್ತವ್ಯ ಹೂಡಿದ್ದಾರೆ, ನಿನ್ನೆ ರಾತ್ರಿಯಿಂದಲೂ ರೆಸಾರ್ಟ್‌ಗೆ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ.
ಬಿಜೆಪಿ ಚಾಣಾಕ್ಯನ ಮುಂದಿನ ತಂತ್ರಗಾರಿಕೆ ಏನಿರಬಹುದು?

ಬಿಜೆಪಿ ಚಾಣಾಕ್ಯನ ಮುಂದಿನ ತಂತ್ರಗಾರಿಕೆ ಏನಿರಬಹುದು?

ಮೂಲಗಳ ಪ್ರಕಾರ ಎಚ್.ಡಿ.ಕುಮಾರಸ್ವಾಮಿ ಸಂಪುಟ ರಚನೆ ಬಳಿಕ ಕಾಂಗ್ರೆಸ್‍ನಲ್ಲಿ ಭಿನ್ನಮತ ದೊಡ್ಡ ಮಟ್ಟಿಗೆ ಭುಗಿಲೇಳುವುದು ಖಚಿತ. ಏಕೆಂದರೆ 78 ಶಾಸಕರ ಪೈಕಿ ಹೆಚ್ಚೆಂದರೆ 20 ಮಂದಿಗೆ ಮಾತ್ರ ಸಚಿವ ಸ್ಥಾನ ದೊರೆಯಲಿದೆ. ಈ ಸಂದರ್ಭದಲ್ಲಿ ಹೈಕಮಾಂಡ್ ಬಹುತೇಕ ಹಸ್ತಕ್ಷೇಪ ಮಾಡಲಿದೆ. ಈ ಭಿನ್ನಮತವನ್ನು ಅವಲೋಕಿಸಿಕೊಂಡು ಬಿಜೆಪಿ ಮುಂದಿನ ಹೆಜ್ಜೆ ಇಡಲಿದೆ. ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದು ಕಡೆ ಅಮಿತ್ ಶಾ ಅವರು ಏನೇ ಆಗಲಿ ಕರ್ನಾಟಕದಲ್ಲಿ ಸರ್ಕಾರ ರಚಿಸಲೇಬೇಕು ಎನ್ನುವ ಜಿದ್ದಿಗೆ ಅಮಿತ್ ಶಾ ಬಿದ್ದಿದ್ದಾರೆ.
ದೇಶದಲ್ಲಿ ಕಡಿಮೆ ದಿನ ಮುಖ್ಯಮಂತ್ರಿಯಾದವರ ಪಟ್ಟಿ!

ದೇಶದಲ್ಲಿ ಕಡಿಮೆ ದಿನ ಮುಖ್ಯಮಂತ್ರಿಯಾದವರ ಪಟ್ಟಿ!

ಜಗದಂಬಿಕಾ ಪಟೇಲ್ : 1988ರಲ್ಲಿ 1 ದಿನದ ಕಾಲ ಉತ್ತರ ಪ್ರದೇಶದ ಸಿಎಂ ಆಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರು 2007ರಲ್ಲಿ 7 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. 1968ರಲ್ಲಿ ಸತೀಶ್ ಪ್ರಸಾದ್ ಅವರು ಬಿಹಾರ ಸಿಎಂ ಆಗಿ 7 ದಿನಗಳ ಕಾಲ ಕೆಲಸ ಮಾಡಿದ್ದರು. 1998ರಲ್ಲಿ ಎಸ್‌.ಸಿ.ಮರಾಕ್ ಅವರು 13 ದಿನ ಮೇಘಾಲಯದ ಸಿಎಂ ಆಗಿದ್ದರು. ಜಾನಕಿ ರಾಮಚಂದ್ರನ್ ಅವರು 1988ರಲ್ಲಿ 23 ದಿನ ತಮಿಳುನಾಡಿನ ಸಿಎಂ ಆಗಿದ್ದರು. ಸಿ.ಎಚ್.ಮಹಮ್ಮದ್ ಕೋಯಾ ಅವರು 1975ರಲ್ಲಿ 45 ದಿನ ಕೇರಳದ ಸಿಎಂ ಆಗಿದ್ದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಡಿ.ಕೆ.ಶಿವಕುಮಾರ್‌ಗೆ ಯಾವ ಹುದ್ದೆ?

ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಡಿ.ಕೆ.ಶಿವಕುಮಾರ್‌ಗೆ ಯಾವ ಹುದ್ದೆ?

ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದವರುಡಿ.ಕೆ.ಶಿವಕುಮಾರ್. ಈಗ ಎದ್ದಿರುವ ಪ್ರಶ್ನೆ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗುವ ಹುದ್ದೆ ಯಾವುದು? ಎಂದು. ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಲಿದ್ದಾರೆಯೇ?, ಉಪ ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬ ಚರ್ಚೆಗಳು ನಡೆಯುತ್ತಿವೆ. ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ ಹುದ್ದೆ ಕೊಟ್ಟರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ. 2013ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು.