Short News

ಸಾಮಾಜಿಕ ಜಾಲತಾಣಗಳ ಮೊರೆ ಹೋದ ರಾಜಕೀಯ ನಾಯಕರಾರು ಗೊತ್ತಾ?

ಸಾಮಾಜಿಕ ಜಾಲತಾಣಗಳ ಮೊರೆ ಹೋದ ರಾಜಕೀಯ ನಾಯಕರಾರು ಗೊತ್ತಾ?

ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಧಾರವಾಡ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ , ಧಾರವಾಡ ಗ್ರಾಮೀಣ ಭಾಗದ ಶಾಸಕ ಹಾಗೂ ಸಚಿವ ವಿನಯ ಕುಲಕರ್ಣಿ, ನವಲಗುಂದದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಕೂಡ ಸಾಮಾಜಿಕ ಜಾಲತಾಣಗಳನ್ನು ರಾಜಕೀಯ ಪ್ರಚಾರಕ್ಕೆ ಭರ್ಜರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಇಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋಯ್ ಇನ್ ಅವರನ್ನು ಭೇಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ದಕ್ಷಿಣ ಕೊರಿಯಾ ಮತು ಉತ್ತರ ಕೊರಿಯಾ ಗಡಿಯಲ್ಲಿರುವ ಪೆನಿನ್ಸುಲಾದ ಹಳ್ಳಿಯೊಂದರಲ್ಲಿ ಇಬ್ಬರೂ ಭೇಟಿಯಾಗಲಿದ್ದಾರೆ. ಉಭಯ ನಾಯಕರೂ ಅಣ್ವಸ್ತ್ರ ನಿಷೇಧದ ಬಗ್ಗೆ, ಶಾಮತಿ ಸಂಧಾನ, ಉಭಯ ರಾಷ್ಟ್ರಗಳ ಸಂಬಂಧ ವರದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ. 1950-53 ರ ನಂತರ ಗಡಿ ದಾಟಿ ದಕ್ಷಿಣ ಕೊರಿಯಾ ಮಣ್ಣಿನಲ್ಲಿ ಕಾಲಿಟ್ಟ ಮೊದಲ ಉತ್ತರ ಕೊರಿಯಾ ನಾಯಕ ಎಂಬ ಹೆಗ್ಗಳಿಕೆಗೆ ಕಿಮ್ ಜಾಂಗ್ ಪಾತ್ರರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಇಂದು ಮಂಗಳೂರಿನಲ್ಲಿ ಬಿಡುಗಡೆ

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಇಂದು ಮಂಗಳೂರಿನಲ್ಲಿ ಬಿಡುಗಡೆ

ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅತೀ ಜತನದಿಂದ ತಯಾರಿಸಿರುವ ಚುನಾವಣಾ ಪ್ರಣಾಳಿಕೆ ಇಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ.ಮಂಗಳೂರಿನ ಟಿ.ಎಂ.ಎ ಪೈ ಕನ್ವೆನ್ಷನ್ ಹಾಲ್ ನಲ್ಲಿ‌ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಣಾಳಿಕೆಯನ್ನು‌ ಬಿಡುಗಡೆ ಮಾಡಲಿದ್ದಾರೆ.

ಈ ಕುರಿತು ಗುರುವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಎಂ. ವೀರಪ್ಪ ಮೊಯ್ಲಿ, "ಈವರೆಗೆ ರಾಜಕೀಯ ಇತಿಹಾಸದಲ್ಲಿ ಯಾವ ರಾಜಕೀಯ ಪಕ್ಷವೂ ಬಿಡುಗಡೆಗೊಳಿಸದ ರೀತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇವೆ," ಎಂದು ಹೇಳಿದರು.


ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಕಾಡಬಹುದಾದ ಕೆಲವೊಂದು ದೈಹಿಕ ಲಕ್ಷಣಗಳು

ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಕಾಡಬಹುದಾದ ಕೆಲವೊಂದು ದೈಹಿಕ ಲಕ್ಷಣಗಳು

ಒಂಭತ್ತು ತಿಂಗಳು ತನ್ನದೇ ಕುಡಿಯನ್ನು ತಮ್ಮ ಉದರದಲ್ಲಿ ಹೊತ್ತುಕೊಂಡು ಆ ಸಂದರ್ಭದಲ್ಲಿ ಅನುಭವಿಸಬೇಕಾದ ಮಾಸನಿಕ ಬೇಗುದಿಗಳನ್ನು ಸಹಿಸಿಕೊಂಡು ಒಂಭತ್ತನೆಯ ತಿಂಗಳಿಗೆ ಜೀವವನ್ನು ರೂಪಿಸುವ ಈ ಹಂತವನ್ನು ಹೆಣ್ಣಿನ ಮರುಜನ್ಮ ಎಂದು ಕರೆಯಲಾಗುತ್ತದೆ. ನೀವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಬದಲಾವಣೆ ಹಾಗೂ ಮಾರ್ಪಾಡುಗಳನ್ನು ನಿಮ್ಮ ದೇಹ ಒಳಗೊಳ್ಳುತ್ತದೆ. ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂತಹ ಬದಲಾವಣೆಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಕಾಗುತ್ತದೆ.ನಿಸರ್ಗದ ಕೊಡುಗೆಯೆನಿಸಿದ ತಾಯಿಯಾಗುವ ಅತ್ಯಂತ ಅಮೂಲ್ಯವಾದ ಕ್ಷಣ