Short News

ಚಿತ್ತಾಪುರದಲ್ಲಿ ಖರ್ಗೆ ಪುತ್ರನಿಗೆ ಸೋಲುಣಿಸಲು ಬಿಜೆಪಿ,ಜೆಡಿಎಸ್ ತಂತ್ರ

ಚಿತ್ತಾಪುರದಲ್ಲಿ ಖರ್ಗೆ ಪುತ್ರನಿಗೆ ಸೋಲುಣಿಸಲು ಬಿಜೆಪಿ,ಜೆಡಿಎಸ್ ತಂತ್ರ

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರಿಗೆ ಸೋಲುಣಿಸಲು ಬಿಜೆಪಿ ಮತ್ತು ಜೆಡಿಎಸ್ ತಂತ್ರ ರೂಪಿಸುತ್ತಿವೆ. ಜಿಲ್ಲೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರವಿದು. ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಸೋಮಶೇಖರ ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಈ ಬಾರಿ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ. ಪ್ರಿಯಾಂಕ್‌ ಖರ್ಗೆ ಈ ಬಾರಿಯೂ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವುದು ಖಚಿತವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಜೆಡಿಎಸ್ ಕಳೆದ ಚುನಾವಣೆಯಲ್ಲಿ 955 ಮತಗಳನ್ನು ಮಾತ್ರ ಪಡೆದಿತ್ತು.
ಎರಡನೇ ಮಹಾ ಯುದ್ಧ ಕಾಲದ  ಸಜೀವ ಬಾಂಬ್‌ ಪತ್ತೆ!

ಎರಡನೇ ಮಹಾ ಯುದ್ಧ ಕಾಲದ ಸಜೀವ ಬಾಂಬ್‌ ಪತ್ತೆ!

ಬರ್ಲಿನ್‌ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಕಟ್ಟಡ ನಿರ್ಮಾಣ ಕೆಲಸದ ಸಂದರ್ಭದಲ್ಲಿ ಎರಡನೇ ಮಹಾ ಯುದ್ಧ ಕಾಲದ 250 ಕೆ.ಜಿ.ಯ ಸಜೀವ ಬಾಂಬ್‌ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಬಾಂಬ್‌ ಇದ್ದ ಸ್ಥಳದಿಂದ 800 ಮೀ. ವ್ಯಾಪ್ತಿಯಲ್ಲಿ ವಾಸವಿದ್ದ ಜನರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಬಳಿಕ ಬಾಂಬನ್ನು ನಿಷ್ಕ್ರಿಯ ಗೊಳಿಸಲಾಯ್ತು. ಬಾಂಬ್ ಸಿಕ್ಕಿದ ಸಮೀಪವೇ ಇಂಡೊನೇಷ್ಯಾ ಮತ್ತು ಉಜ್ಬೇಕಿಸ್ತಾನದ ರಾಯಭಾರಿ ಕಚೇರಿಯೂ ಇದೆ.
ಶೀಘ್ರವೇ ಬರಲಿದೆ ಫೇಸ್ ಬುಕ್ ಪೇಮೆಂಟ್ ಸೇವೆ..!

ಶೀಘ್ರವೇ ಬರಲಿದೆ ಫೇಸ್ ಬುಕ್ ಪೇಮೆಂಟ್ ಸೇವೆ..!

ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ನೀಡಲು ಮುಂದಾಗಿರುವ ಬೆನ್ನಲ್ಲೇ, ವಾಟ್ಸ್‌ಆಪ್ ಒಡೆತವನ್ನು ಹೊಂದಿರುವ ಫೇಸ್‌ಬುಕ್ ಸಹ ಪೇಮೆಂಟ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಈ ಹಿಂದೆಯಂತೆ ಫೇಸ್‌ಬುಕ್ ತನ್ನ ಒಡೆತದ ಆಪ್ ವೊಂದರಲ್ಲಿ ಕಾಣಿಸಿಕೊಂಡ ಆಯ್ಕೆಯನ್ನು ಬೇರೆ ಆಪ್‌ ಗಳಲ್ಲಿಯೂ ನೀಡಲಿದೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ಮೇಸೆಂಜರ್ ಆಪ್ ನಲ್ಲಿಯೂ ನೀಡಲಿದೆ ಎನ್ನಲಾಗಿದೆ. ಈ ಹಿಂದೆಯೇ ವಾಟ್ಸ್‌ಆಪ್ ತನ್ನ ಪೇಮೆಂಟ್ ಮಾಹಿತಿಯನ್ನು ಪೇರೆಂಟ್ ಕಂಪನಿ ಫೇಸ್‌ಬುಕ್ ನೊಂದಿಗೆ ಹಂಚಿಕೊಳ್ಳುವುದಾಗಿ ಅಧಿಕೃತ ಮಾಹಿತಿಯನ್ನು ನೀಡಿತ್ತು.
ಕಾಂಗ್ರೆಸ್ ನಿಂದ ಜೆಡಿಎಸ್‌‌ಗೆ ಸೇರ್ಪಡೆಗೊಂಡ ನಟ ಶಶಿಕುಮಾರ್

ಕಾಂಗ್ರೆಸ್ ನಿಂದ ಜೆಡಿಎಸ್‌‌ಗೆ ಸೇರ್ಪಡೆಗೊಂಡ ನಟ ಶಶಿಕುಮಾರ್

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ನಟ ಶಶಿಕುಮಾರ್ ಜೆಡಿಎಸ್‌ ಪಕ್ಷ ಸೇರಿದ್ದಾರೆ. ಹೊಸದುರ್ಗ ಕ್ಷೇತ್ರದಿಂದ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಗುರುವಾರ ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಟ ಶಶಿಕುಮಾರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಶಿಕುಮಾರ್ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಪಕ್ಷ ಡಾ.ಬಿ.ಯೋಗೇಶ್ ಬಾಬು ಅವರನ್ನು ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು.