Short News

ಮಂತ್ರಾಲಯದಲ್ಲಿ ಉರುಳು ಸೇವೆ ಸಲ್ಲಿಸಿದ ರಾಘವೇಂದ್ರ ರಾಜಕುಮಾರ್

ಮಂತ್ರಾಲಯದಲ್ಲಿ ಉರುಳು ಸೇವೆ ಸಲ್ಲಿಸಿದ ರಾಘವೇಂದ್ರ ರಾಜಕುಮಾರ್

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಡಾ.ರಾಜಕುಮಾರ್ ಕುಟುಂಬ ಭೇಟಿ ನೀಡಿತು. ಈ ವೇಳೆ ಉರುಳು ಸೇವೆ ಮಾಡಿ, ರಾಯರ ದರ್ಶನ ಪಡೆದರು ರಾಘವೇಂದ್ರ ರಾಜಕುಮಾರ್. ರಾಘವೇಂದ್ರ ರಾಜಕುಮಾರ್ ಹಾಗೂ ವಿನಯ್ ರಾಜಕುಮಾರ್ ಮಠಕ್ಕೆ ಬಂದಿದ್ದರು. ರಾಯರ ದರ್ಶನದ ಬಳಿಕ ರಾಘವೇಂದ್ರ ರಾಜಕುಮಾರ್ ಮಾತನಾಡಿ, ರಾಘವೇಂದ್ರ ಸ್ವಾಮಿ ದರ್ಶನದಿಂದ ನನ್ನ ಆರೋಗ್ಯ ಸುಧಾರಿಸಿದೆ. ಕಳೆದ ಬಾರಿ ಮಠಕ್ಕೆ ಬಂದಾಗ ನನ್ನಿಂದ ನಡೆಯಲು ಆಗುತ್ತಿರಲಿಲ್ಲ. ಆದರೆ ಈ ಬಾರಿ ರಾಯರ ದರ್ಶನದಿಂದ ಉರುಳು ಸೇವೆ ಮಾಡಿದ್ದೇನೆ ಎಂದು ಹೇಳಿದರು.
ವಿಶ್ವಕಪ್ ಫುಟ್ಬಾಲ್ : ಸೌದಿ ಅರೇಬಿಯಾ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದ ಉರುಗ್ವೆ

ವಿಶ್ವಕಪ್ ಫುಟ್ಬಾಲ್ : ಸೌದಿ ಅರೇಬಿಯಾ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದ ಉರುಗ್ವೆ

ವಿಶ್ವಕಪ್ ಫುಟ್ಬಾಲ್ ಪಂದ್ಯಕ್ಕಾಗಿ ಬುಧವಾರ ನಡೆದ ಸೌದಿ ಅರೇಬಿಯಾ ಮತ್ತು ಉರುಗ್ವೆ ತಂಡಗಳ ಸೆಣಸಾಟದಲ್ಲಿ ಉರುಗ್ವೆ 1-0 ಅಂತರದ ಗೆಲುವು ದಾಖಲಿಸಿದೆ. ಲೂಯಿಸ್ ಸೌರೆಜ್ ಅವರು ಸಿಡಿಸಿದ ಗೋಲ್ ನೆರವಿನಿಂದ ಉರುಗ್ವೆ ಗೆಲುವನ್ನು ಸಂಭ್ರಮಿಸಿತು. ಗ್ರೂಪ್ ಎಯ ಬುಧವಾರದ ಕಾದಾಟದಲ್ಲಿ 13ನೇ ನಿಮಿಷದಲ್ಲೇ ಉರುಗ್ವೆಗೆ ಮೊದಲ ಗೋಲ್ ದಾಖಲಿಸುವ ಅವಕಾಶವಿತ್ತು. ಆದರೆ ಗೋಲ್ ಸಿಡಿಸುವಲ್ಲಿನ ಪ್ರಯತ್ನ ವಿಫಲಗೊಂಡಿತು. ಪಂದ್ಯದಲ್ಲಿ ಉರುಗ್ವೆಯಿಂದ ಆಕರ್ಷಕ ಆಟ ಪ್ರದರ್ಶನಗೊಂಡಿತು. 23ನೇ ನಿಮಿಷದಲ್ಲಿ ಉರುಗ್ವೆಯ ಲೂಯಿಸ್ ಸೌರೆಜ್ ಮೊದಲ ಗೋಲ್ ಬಾರಿಸಿ ಉರುಗ್ವೆಗೆ 1-0ಯ ಮುನ್ನಡೆ ತಂದುಕೊಟ್ಟರು.
ಆಂಡ್ರಾಯ್ಡ್ ಮತ್ತು iOSಗಳಲ್ಲಿ ವಾಟ್ಸ್ಆಪ್ ಶೀಘ್ರವೇ ಸ್ಥಗಿತ..!

ಆಂಡ್ರಾಯ್ಡ್ ಮತ್ತು iOSಗಳಲ್ಲಿ ವಾಟ್ಸ್ಆಪ್ ಶೀಘ್ರವೇ ಸ್ಥಗಿತ..!

ಈಗಾಗಲೇ ವಾಟ್ಸ್ಆಪ್ ಹಲವು ಮಾದರಿಯಲ್ಲಿ ಬದಲಾವಣೆಯನ್ನು ಹೊಂದಿದ್ದು, ಹೊಸ ಹೊಸ ಆಯ್ಕೆಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕೇಲವು ಸ್ಮಾರ್ಟ್ ಫೋನ್ ಗಳು ವಾಟ್ಸ್ಆಪ್ ಆಯ್ಕೆಯನ್ನು ಸಪೋರ್ಟ್ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಕೇಲವು ಸ್ಮಾರ್ಟ್ ಫೋನ್ ಗಳಿಗೆ ತನ್ನ ಸೇವೆಯನ್ನು ನಿಲ್ಲಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಗಮನಿಸಲೇ ಬೇಕಾದ ಮಾಹಿತಿಯೂ ಮುಂದಿದೆ. ನಿಮ್ಮ ಸ್ಮಾರ್ಟ್ ಫೋನ್ ಸಹ ಈ ಕೆಳಗಿನ ಫೋನ್ ಗಳ ಪಟ್ಟಿಯಲ್ಲಿ ಇದ್ದರೆ ನೀವು ಸಹ ವಾಟ್ಸ್ ಆಪ್ ಬಳಕೆಯಿಂದ ವಂಚಿತರಾಗುವಿರಿ.

ಯೋಗದಿನ: ಡೆಹ್ರಾಡೂನ್ ನಲ್ಲಿ ನರೇಂದ್ರ ಮೋದಿ ಯೋಗಾಚರಣೆ

ಯೋಗದಿನ: ಡೆಹ್ರಾಡೂನ್ ನಲ್ಲಿ ನರೇಂದ್ರ ಮೋದಿ ಯೋಗಾಚರಣೆ

ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಚರಣೆಯೊಂದಿಗೆ ಸಂಭ್ರಮ ಆಚರಿಸುತ್ತಿದ್ದಾರೆ.ಡೆಹ್ರಾಡೂನಿನ ಫಾರೆಸ್ಟ್ ರೀಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸುಮಾರು 55 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿರುವುದು ವಿಶೇಷ.ಪ್ರಧಾನಿಗಳೂ ಈ ಕಾರ್ಯಕ್ರಮದಲ್ಲಿ ಆಗಮಿಸಿರುವ ಕಾರಣ 6 ಸಾವಿರ ಪೊಲೀಸರನ್ನು ನಿಯೋಜಿಸಿ, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 2015 ಜೂನ್ 21 ರಿಂದ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more