Short News

ಜಿಎಸ್‌ಟಿಯನ್ನು ಪುನಾರಚನೆ ಮಾಡುತ್ತೇವೆ : ರಾಹುಲ್ ಗಾಂಧಿ

ಜಿಎಸ್‌ಟಿಯನ್ನು ಪುನಾರಚನೆ ಮಾಡುತ್ತೇವೆ : ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಪುನಾರಚನೆ ಮಾಡಲಾಗುತ್ತದೆ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಕಲಬುರಗಿಯಲ್ಲಿ ಉದ್ಯಮಿಗಳ ಜೊತೆ ಸಂವಾದ ನಡೆಸಿದರು. ರಾಹುಲ್ ಗಾಂಧಿ ಅವರ 4 ದಿನದ ಪ್ರವಾಸ ಇಂದು ಅಂತ್ಯಗೊಳ್ಳಲಿದ್ದು, ಮಧ್ಯಾಹ್ನ ದೆಹಲಿಗೆ ಮರಳಲಿದ್ದಾರೆ.

ರಾಶಿ ಭವಿಷ್ಯ: ನೋಡಿ ಈ ಆರು ರಾಶಿಯವರು ಬಹಳ ಬುದ್ಧಿವಂತರಂತೆ!

ರಾಶಿ ಭವಿಷ್ಯ: ನೋಡಿ ಈ ಆರು ರಾಶಿಯವರು ಬಹಳ ಬುದ್ಧಿವಂತರಂತೆ!

ಮಿಥುನ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ವೃಶ್ಚಿಕ ರಾಶಿಯ ಜನರು ಕೊಂಚ ಭಿನ್ನ ವ್ಯಕ್ತಿತ್ವ ಹೊಂದಿದ್ದು ತರ್ಕಬದ್ದವಲ್ಲದ ನಿರ್ಧಾರಗಳನ್ನು ಪ್ರಕಟಿಸುವವರಾಗಿದ್ದರೂ ಜಾಣರು ಹೇಗಾಗುತ್ತಾರೆ ಎಂದು ಅಚ್ಚರಿ ಪಡಬೇಡಿ. ಆದರೆ ಇವರು ಇಷ್ಟಪಟ್ಟ ವಿಷಯದ ಕುರಿತು ನಡೆಸುವ ಆಳವಾದ ಅಧ್ಯಯನ ಇವರ ಏಕಾಗ್ರತೆಯನ್ನು ಹೆಚ್ಚಿಸಿ ಹೆಚ್ಚು ಹೆಚ್ಚಾಗಿ ಪ್ರೇರಣೆ ನೀಡುವವರೂ ಆಗಿರುತ್ತಾರೆ.

ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ 80 ಸಾವಿರ ಉದ್ಯೋಗ ಅವಕಾಶ

ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ 80 ಸಾವಿರ ಉದ್ಯೋಗ ಅವಕಾಶ

  • ಉದ್ಯೋಗ ಹುಡುಕುವವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ರಿಲಯನ್ಸ್ ಜಿಯೋ ಸುಮಾರು 75 ಸಾವಿರದಿಂದ 80 ಸಾವಿರ ಜನರನ್ನು ನೇಮಕ ಮಾಡಲು ಯೋಜಿಸುತ್ತಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಂಜಯ್ ಜೋಗ್ ಹೇಳಿದ್ದಾರೆ. ಮಾರಾಟ ಮತ್ತು ತಾಂತ್ರಿಕ ವಿಭಾಗದ ಪರಿಣಿತರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ.
  • ಜಿಯೋ ಕಂಪೆನಿಯು ದೇಶಾದ್ಯಂತ ತಾಂತ್ರಿಕ ಸಂಸ್ಥೆಗಳನ್ನು ಒಳಗೊಂಡಂತೆ ಸುಮಾರು 6,000 ಕಾಲೇಜುಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆಯೆಂದು ಜೋಗ್ ಹೇಳಿದ್ದಾರೆ.

ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!

ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!

ವಾಟರ್ ಮಾರ್ಕ್ ಹಾಕಿ ಫೋಟೊ ಕಳ್ಳತನಕ್ಕೆ ನಿಯಂತ್ರಣ ಹೇರಬಹುದಾದರೂ ವಾಟರ್‌ ಮಾರ್ಕ್ ಅನ್ನು ಸಹ ತೆಗೆಯುವ ತಂತ್ರಜ್ಞಾನಗಳು ಇವೆ. ನಾವು ಕ್ಲಿಕ್ಕಿಸಿದ ಫೋಟೊಗಳನ್ನು ಇನ್ಯಾರಾದರೂ ಕದ್ದು ಬಳಕೆ ಮಾಡಿದ್ದರೆ ಆ ವಿಷಯವನ್ನು ಆ ತಕ್ಷಣವೇ ನಮ್ಮ ಗಮನಕ್ಕೆ ತಂದು, ಪರಿಹಾರವನ್ನು ಸಹ ಒದಗಿಸುವ ವೆಬ್‌ಸೈಟ್ ಒಂದಿದೆ. ಅದುವೇ www.pixsy.com ವೆಬ್‍ಸೈಟ್‌ನಲ್ಲಿ ಹೆಸರು ನೋಂದಾಯಿಸಿದ ಮೇಲೆ ಲಾಗಿನ್ ಆಗಿ. ನಮ್ಮ ಫೋಟೊವನ್ನು ಬೇರೆ ಯಾರಾದರೂ ಬಳಸಿದ್ದಾರೆಯೇ ಎಂದು ತಿಳಿಯಲು ಆ ಫೋಟೊವನ್ನು ಪಿಕ್ಸಿಯಲ್ಲಿ ಅಪ್‍ಲೋಡ್ ಮಾಡಿ. ಆಗ ಫೋಟೊ ಬೇರೆ ಕಡೆ ಬಳಕೆಯಾಗಿದೆಯೇ ಎಂಬುದು ತಿಳಿಯಲಿದೆ.