ಮದುವೆ ಯಾವಾಗ ಎಂದದ್ದಕ್ಕೆ ರಾಹುಲ್ ನೀಡಿದ ಉತ್ತರ ಇದು
ಕರ್ನಾಟಕ
- 2 month, 12 days ago
ಕಲಬುರಗಿಯಲ್ಲಿ ವಿದ್ಯಾರ್ಥಿಗಳು, ನವೋದ್ಯಮಿಗಳು, ವ್ಯಾಪಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯುವ ವೇಳೆ ಸಭಿಕರೊಬ್ಬರು ರಾಹುಲ್ ಗಾಂಧಿ ಅವರನ್ನು 'ನಿಮ್ಮ ಮದುವೆ ಯಾವಾಗ?' ಎಂದು ಜೋರಾಗಿ ಕೂಗಿ ಪ್ರಶ್ನೆ ಕೇಳಿದರು. ಅಲ್ಲಿಯವರೆಗೆ ಗಂಭೀರ ವದನರಾಗಿದ್ದ ರಾಹುಲ್ ಮದುವೆ ಪ್ರಶ್ನೆ ತೂರಿ ಬರುತ್ತಿದ್ದಂತೆ ನಸುನಕ್ಕರು. 'ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದ, ವೇದಿಕೆ ಮೇಲೆ ಇರುವವರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ' ಎಂದು ವೇದಿಕೆ ಮೇಲೆ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಸಂಸದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಹುಲ್ ಗಾಂಧಿ ನೋಡಿದರು. ಅವರೂ ನಗುತ್ತಿದ್ದರು.