Short News

ಎ. 23ರಂದು ಕಾಂಗ್ರೆಸ್ ನಿಂದ 'ಸಂವಿಧಾನ ಉಳಿಸಿ' ಅಭಿಯಾನಕ್ಕೆ ಚಾಲನೆ

ಎ. 23ರಂದು ಕಾಂಗ್ರೆಸ್ ನಿಂದ 'ಸಂವಿಧಾನ ಉಳಿಸಿ' ಅಭಿಯಾನಕ್ಕೆ ಚಾಲನೆ

ಏಪ್ರಿಲ್ 23ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಸಂವಿಧಾನ ಉಳಿಸಿ' ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಂವಿಧಾನದ ಮೇಲಿನ ಆಕ್ರಮಣ ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಹಾಲಿ ಮತ್ತು ಮಾಜಿ ಜನಪ್ರಿನಿಧಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲದೆ ಯುವಕರು, ಮಹಿಳೆಯರು ಮತ್ತು ಸೇವಾ ದಳದ ಸದಸ್ಯರು ಕೂಡ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
ರೈಲಿಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್:ಉ.ಪ್ರದೇಶದಲ್ಲಿ 11  ಮಕ್ಕಳು ಸಾವು

ರೈಲಿಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್:ಉ.ಪ್ರದೇಶದಲ್ಲಿ 11 ಮಕ್ಕಳು ಸಾವು

ಶಾಲಾ ವಾಹನವೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಕ್ಕಳು ದುರ್ಮರಣಕ್ಕೀಡಾದ ದುರ್ಘಟನೆ ಉತ್ತರ ಪ್ರದೇಶದ ಖುಷಿ ನಗರದಲ್ಲಿ ನಡೆದಿದೆ.

ನ್ಯಾಯಾಂಗದಲ್ಲಿ ಹೊಸ ಇತಿಹಾಸ, ಇಂದು ಮಲ್ಹೋತ್ರ ಸುಪ್ರೀಂ ಕೋರ್ಟ್ ಜಡ್ಜ್

ನ್ಯಾಯಾಂಗದಲ್ಲಿ ಹೊಸ ಇತಿಹಾಸ, ಇಂದು ಮಲ್ಹೋತ್ರ ಸುಪ್ರೀಂ ಕೋರ್ಟ್ ಜಡ್ಜ್

ಹಿರಿಯ ವಕೀಲೆ ಇಂದು ಮಲ್ಹೋತ್ರರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸ್ಸಿಗೆ ಕೇಂದ್ರ ಸರಕಾರ ಒಪ್ಪಿದೆ. ಈ ಮೂಲಕ ದೇಶದ ನ್ಯಾಯಾಂಗ ಇತಿಹಾಸದಲ್ಲಿ ನೇರವಾಗಿ ಸುಪ್ರೀಂ ನ್ಯಾಯಮೂರ್ತಿಯಾಗಿ ನೇಮಕವಾದ ಪ್ರಥಮ ಮಹಿಳಾ ವಕೀಲೆ ಎಂಬ ಹಿರಿಮೆಗೆ ಇಂದು ಮಲ್ಹೋತ್ರಾ ಪಾತ್ರವಾಗಿದ್ದಾರೆ. ಇಂದು  ಜೊತೆಗೆ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ಹೆಸರನ್ನೂ ಶಿಫಾರಸ್ಸು ಮಾಡಲಾಗಿತ್ತು. ಆದರೆ ಇದಕ್ಕೆ ತಡೆ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಕೊಲಿಜಿಯಂ ಇವರಿಬ್ಬರ ಹೆಸರನ್ನು ಜನವರಿಯಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
ಅರ್ಜುನ ಪ್ರಶಸ್ತಿಗೆ ಶಿಖರ್ ಧವನ್, ಸ್ಮೃತಿ ಮಂದಾನ ಹೆಸರು ಶಿಫಾರಸು

ಅರ್ಜುನ ಪ್ರಶಸ್ತಿಗೆ ಶಿಖರ್ ಧವನ್, ಸ್ಮೃತಿ ಮಂದಾನ ಹೆಸರು ಶಿಫಾರಸು

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ. ಇದನ್ನು ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸ್ಪಷ್ಟಪಡಿಸಿದ್ದಾರೆ. 32 ವಯಸ್ಸಿನ ಶಿಖರ್ ಧವನ್ 2013ರಲ್ಲಿ ಆಡಿದ ಮೊದಲ ಟೆಸ್ಟ್‌ ಪಂದ್ಯದಲ್ಲಿಯೇ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಗಳಿಸಿದ್ದು, ಆರಂಭಿಕ ಆಟಗಾರರಾಗಿ ತಂಡದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. 21 ವರ್ಷದ ಸ್ಮೃತಿ ಮಂದಾನ ಅತ್ಯುತ್ತಮ ಫಾರ್ಮ್‌ನಲ್ಲಿರುವ ಅವರು, ಐಸಿಸಿ ಮಹಿಳಾ ರಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.