Short News

ಬಹುಮತ ಸಾಬೀತು ಮಾಡಿದ ನಂತರ 4 ಲಕ್ಷ ಜನ ಸೇರಿಸಿ ಸಂಪುಟ ರಚನೆ ಮಾಡುತ್ತೇನೆ : ಸಿಎಂ ಯಡಿಯೂರಪ್ಪ

ಬಹುಮತ ಸಾಬೀತು ಮಾಡಿದ ನಂತರ 4 ಲಕ್ಷ ಜನ ಸೇರಿಸಿ ಸಂಪುಟ ರಚನೆ ಮಾಡುತ್ತೇನೆ : ಸಿಎಂ ಯಡಿಯೂರಪ್ಪ

ಸಿಎಂ ಯುಡಿಯೂರಪ್ಪ ಮೊದಲ ಪತ್ರಿಕಾಗೋಷ್ಠಿ ನಡೆಸಿ, 222 ಶಾಸಕರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುತ್ತಾರೆಂಬ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರವಿರುವುದರಿಂದ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ಈ ವೇಳೆ ವಿಶ್ವಾಸ ಮತವನ್ನು ಸಾಬಿತುಪಡಿಸಲು ಅಧಿವೇಶನ ಯಾವಾಗ ಕರೆಯುತ್ತೀರಿ ಎಂಬ ಪ್ರಶ್ನೆಗೆ, ನಾಳೆ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಹಾಗೆಯೇ ಬಹುಮತ ಸಾಬೀತು ಮಾಡಿದ ನಂತರ 4ಲಕ್ಷ ಜನ ಸೇರಿಸಿ ಅಮಿತ್ ಶಾ, ನರೇಂದ್ರ ಮೋದಿ, ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ದೊಡ್ಡ ಸಮಾರಂಭದಲ್ಲಿ ಸಂಪುಟ ರಚನೆ ಮಾಡಬೇಕು ಎಂದುಕೊಂಡಿದ್ದೇನೆ," ಎಂದರು.
ಸರ್ಕಾರದ ಆಡಳಿತದಲ್ಲಿ, ಸಂಪುಟ ರಚನೆಯಲ್ಲಿ  ನನ್ನ ಹಸ್ತಕ್ಷೇಪವಿಲ್ಲ: ದೇವೇಗೌಡ ಸ್ಪಷ್ಟನೆ

ಸರ್ಕಾರದ ಆಡಳಿತದಲ್ಲಿ, ಸಂಪುಟ ರಚನೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ: ದೇವೇಗೌಡ ಸ್ಪಷ್ಟನೆ

ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳಲ್ಲಿ ಇಂದು ಪ್ರಕಟವಾಗಿರುವ ಸುದ್ದಿಯ ಬಗ್ಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕಾಂಗೆಸ್‌ ನಾಯಕರಲ್ಲಿ ಡಿ ಕೆ ಶಿವಕುಮಾರ್ ಹಾಗೂ ಎಂ ಬಿ ಪಾಟೀಲ್ ಅವರನ್ನು ಸಂಪುಟಕ್ಕೆ ಸೇರ್ಪಡಿಸಲು ತಮ್ಮ ವಿರೋಧವಿದೆ ಎಂಬ ಅರ್ಥದಲ್ಲಿ ಪ್ರಕಟವಾಗುವ ಸುದ್ದಿ ಕುಚೋದ್ಯದಿಂದ ಕೂಡಿದ್ದು ಜನರನ್ನು ದಾರಿತಪ್ಪಿಸುವ ಕೆಲಸವಾಗಿದೆ ಎಂದು ತಿಳಿಸಿದ್ದಾರೆ. ಸಚಿವ ಸಂಪುಟ ರಚನೆಯನ್ನು ನಿಯೋಜಿತ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧರಿಸಲಿದ್ದಾರೆ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೇಗಿದೆ OnePlus ಸಿಕ್ಸು..? ಇದು ಕನ್ನಡದಲ್ಲೇ ಫಸ್ಟು..!

ಹೇಗಿದೆ OnePlus ಸಿಕ್ಸು..? ಇದು ಕನ್ನಡದಲ್ಲೇ ಫಸ್ಟು..!

ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ತನ್ನದೇ ಅಭಿಮಾನಿ ವೃಂದವನ್ನು ಹೊಂದಿದ್ದು, ಅತೀ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗವ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಪ್ರತಿಬಾರಿಯೂ ಬೊಂಬಾಟ್ ಸ್ಮಾರ್ಟ್‌ಫೋನ್‌ಗಳನ್ನು ಅತೀ ಕಡಿಮೆ ಬೆಲೆಗೆ ನೀಡುವ ಒನ್‌ಪ್ಲಸ್ ಈ ಬಾರಿ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಲಾಂಚ್ ಮಾಡಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಹೇಗಿದೆ ಎಂದು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಇದಾಗಿದೆ.

ದ್ವಾದಶ ರಾಶಿಗಳ ಇಂದಿನ (ಮೇ 22) ದಿನ ಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಮೇ 22) ದಿನ ಭವಿಷ್ಯ

ಮೇಷ:ರಹಸ್ಯ ಕಾರ್ಯಾಚರಣೆ ಬಹಿರಂಗ ವಾಗುವುದು, ಸಣ್ಣ ಅಡೆತಡೆಗಳು ಬರಬಹುದು. ವೃಷಭ:ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ. ಮಿಥುನ:ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ. ಕಟಕ:ತಂದೆ-ತಾಯಿಯರ ವಿರೋಧ ಎದುರಿಸಬೇಕಾಗುತ್ತದೆ. ಸಿಂಹ:ಕೋಪ ಕಡಿಮೆ ಮಾಡಿ ಕೊಂಡರೆ ಬಹಳ ಉತ್ತಮ. ಕನ್ಯಾ:ರಾಜಕೀಯ ಪ್ರವೇಶ ಅನಿವಾರ್ಯವಾಗಬಹುದು. ತುಲಾ:ಕುಟುಂಬದಲ್ಲಿ ಆಸ್ತಿ ಕಲಹ ಕಂಡುಬರುವುದು. ವೃಶ್ಚಿಕ:ಆರೋಗ್ಯ ಸಮಸ್ಯೆ ಮಾನಸಿಕ ಚಿಂತೆಗೆ ಕಾರಣವಾಗಬಹುದು. ಧನುಸ್ಸು:ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸಿ. ಮಕರ: ಮನೆ ದೇವರ ಪೂಜೆ ಮಾಡಿ. ಕುಂಭ:ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ. ಮೀನ:ಮಕ್ಕಳ ವಿಚಾರದಲ್ಲಿ ಅಸಮಾಧಾನ.