Short News

ಕೆಐಎ: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್

ಕೆಐಎ: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ಒಂದೇ ಪ್ರವೇಶದ್ವಾರವಿದ್ದ ಕಾರಣ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆ ತಪ್ಪಲಿದೆ. ನಿಲ್ದಾಣದಲ್ಲಿ ವಿಮಾನದ ಪೈಲಟ್ ಹಾಗೂ ಸಿಬ್ಬಂದಿಯ ತ್ವರಿತ ಪ್ರವೇಶಕ್ಕೆ ಪ್ರತ್ಯೇಕ ಟರ್ಮಿನಲ್ ಆರಂಭಗೊಂಡಿದೆ. ನೂತನ ಟರ್ಮಿನಲ್ ಮೂಲಕ ಪ್ರತಿನಿತ್ಯ 350ರಿಂದ 400ಸಿಬ್ಬಂದಿ ನಿಲ್ದಾಣದ ಒಳಗೆ ಪ್ರವೇಶಿಸಲು ಮತ್ತು ಹೊರಗೆ ಬರಲು ಅನುಕೂಲವಾಗಲಿದೆ.
ಬಳ್ಳಾರಿ: ರೈಲು ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಫಲಕ ಅಳವಡಿಕೆ

ಬಳ್ಳಾರಿ: ರೈಲು ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಫಲಕ ಅಳವಡಿಕೆ

ಬಿರುಬಿಸಿಲಿಗೆ ಹೆಸರಾದ ಬಳ್ಳಾರಿಯಲ್ಲಿ ಸೂರ್ಯನ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಿ, ದೀಪಗಳಿಗೆ ಬಳಕೆ ಮಾಡಿಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ. ಹೌದು, ಬಳ್ಳಾರಿ ಸೇರಿದಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೇ ವಲಯ ವ್ಯಾಪ್ತಿಯ 'ಎ' ಕೆಟಗರಿ ರೈಲ್ವೆ ನಿಲ್ದಾಣಗಳಾದ ಹೊಸಪೇಟೆ, ಗದಗ, ಹುಬ್ಬಳ್ಳಿ, ಬೆಳಗಾವಿ ರೈಲು ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಮೂಲಗಳು ತಿಳಿಸಿವೆ. ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇದೆ. ಐತಿಹಾಸಿಕ ಮಹತ್ವವೂ ಇದೆ. ಅಷ್ಟೇ ಅಲ್ಲ, ಮಹಾತ್ಮಾಗಾಂಧಿ ಅವರು ಇಲ್ಲಿ ಕೆಲ ಹೊತ್ತು ತಂಗಿ, ಪ್ರವಾಸ ಮುಂದುವರೆಸಿದ್ದಾರೆ.
ಜುಲೈ8 ರಂದು ಯುಜಿಸಿ ನೆಟ್ ಪರೀಕ್ಷೆ... ಆನ್‌ಲೈನ್‌ನಲ್ಲಿ ಪ್ರವೇಶಪತ್ರ ಲಭ್ಯ!

ಜುಲೈ8 ರಂದು ಯುಜಿಸಿ ನೆಟ್ ಪರೀಕ್ಷೆ... ಆನ್‌ಲೈನ್‌ನಲ್ಲಿ ಪ್ರವೇಶಪತ್ರ ಲಭ್ಯ!

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ (ಸಿಬಿಎಸ್ ಇ) ಸಂಸ್ಥೆಯು ಇದೀಗ ಯುಜಿಸಿ ನೆಟ್ ಪರೀಕ್ಷೆಯ ಪ್ರವೇಶಪತ್ರವನ್ನ ಆಫೀಶಿಯಲ್ ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು www.cbsenet.nic.in ವೆಬ್‌ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರ ಪಡೆಯಬಹುದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಫೀಶಿಯಲ್ ಸೈಟ್ ಲಾಗಿನ್ ಆಗಿ, ಡೌನ್‌ಲೋಡ್ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಕೇಳಿರುವ ಡೀಟೆಲ್ಸ್ ನೀಡಿ, ಸ್ಕ್ರೀನ್ ಮೇಲೆ ನಿಮ್ಮ ಪ್ರವೇಶ ಪತ್ರ ಮೂಡುತ್ತದೆ. ಡೌನ್ ಲೋಡ್ ಮಾಡಿಕೊಳ್ಳಿ.
ಮಂಗಳೂರಿನ ಸರಕಾರಿ ಆಸ್ಪತ್ರೆಗಳಿಗೆ ಲೋಕಾಯುಕ್ತರ ದಿಢೀರ್ ಭೇಟಿ, ಪರಿಶೀಲ

ಮಂಗಳೂರಿನ ಸರಕಾರಿ ಆಸ್ಪತ್ರೆಗಳಿಗೆ ಲೋಕಾಯುಕ್ತರ ದಿಢೀರ್ ಭೇಟಿ, ಪರಿಶೀಲ

ಮಂಗಳೂರಿನ ವೆನ್ಲಾಕ್ ಹಾಗೂ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಇಂದು ದಿಢೀರ್ ಭೇಟಿ ನೀಡಿ ವೈದ್ಯರು ಹಾಗು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಆಸ್ಪತ್ರೆಗೆ ಏಕಾಏಕಿ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಕುಂದುಕೊರತೆಯ ಪರಿಶೀಲನೆ ನಡೆಸಿದರು.

ವಿಶ್ವನಾಥ್ ಶೆಟ್ಟಿ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆಗೆ ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಕಂಡು ಅವರಲ್ಲಿ ಚರ್ಚೆ ನಡೆಸಿದರು. ತಾವು ಸರಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದು ಆರೋಗ್ಯ ತಪಾಸಣೆಗೆ ಆಗಮಿಸಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more