Short News

ವಿಜಯಪುರ: RTI ಅರ್ಜಿಗೆ ಮಾಹಿತಿ ನೀಡದ ತಹಸೀಲ್ದಾರ್ ಗೆ ದಂಡ

ವಿಜಯಪುರ: RTI ಅರ್ಜಿಗೆ ಮಾಹಿತಿ ನೀಡದ ತಹಸೀಲ್ದಾರ್ ಗೆ ದಂಡ

ನಿಗದಿತ ಸಮಯದಲ್ಲಿ ಮಾಹಿತಿ ನೀಡದ ಹಿನ್ನೆಲೆ ವಿಜಯಪುರ ಜಿಲ್ಲೆಯ ತಹಸೀಲ್ದಾರ್ ಎಂ.ಎಸ್. ಭಗವಾನ್ ಅವರಿಗೆ 10 ಸಾವಿರ ರೂ ದಂಡ ವಿಧಿಸಿ ರಾಜ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಆದೇಶ ನೀಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ನಿಗದಿತ ಸಮಯದಲ್ಲಿ ಮಾಹಿತಿ ನೀಡಿದ ತಹಸೀಲ್ದಾರ್ ಎಂ.ಎಸ್. ಭಗವಾನ್ ಅವರಿಗೆ 10 ಸಾವಿರ ದಂಡ ವಿಧಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಜಾಗೆಯ ಕುರಿತು ಮಾಹಿತಿ ಅರ್ಜಿ ಸಲ್ಲಿಕೆಯಾಗಿತ್ತು ಮೊರಾರ್ಜಿ ಶಾಲೆಯ ಜಾಗೆಯ ಕುರಿತು ಮಾಹಿತಿ ಕೊಡುವಂತೆ ನಿವೃತ್ತ ನ್ಯಾಯಾಧೀಶ ಜೆ ಡಿ ಇನಾಮದಾರ ಅರ್ಜಿ ಸಲ್ಲಿಸಿದ್ದರು.
ಶಬ್ದದ ವೇಗಕ್ಕೆ ಸಮನಾದ  'ಹೈಪರ್‌ಲೂಪ್‌' ಸಂಚಾರ ವ್ಯವಸ್ಥೆ  ಮುಂಬಯಿ- ಪುಣೆ ಸಂಚಾರಕ್ಕೆ ಕೇವಲ 20 ನಿಮಿಷ!

ಶಬ್ದದ ವೇಗಕ್ಕೆ ಸಮನಾದ 'ಹೈಪರ್‌ಲೂಪ್‌' ಸಂಚಾರ ವ್ಯವಸ್ಥೆ ಮುಂಬಯಿ- ಪುಣೆ ಸಂಚಾರಕ್ಕೆ ಕೇವಲ 20 ನಿಮಿಷ!

ಮುಂಬಯಿ ಮತ್ತು ಪುಣೆ ನಡುವೆ ಅತ್ಯಾಧುನಿಕ ಅತಿ ವೇಗದ 'ಹೈಪರ್‌ಲೂಪ್‌' ಸಂಚಾರ ವ್ಯವಸ್ಥೆಯ ನಿರ್ಮಾಣಕ್ಕೆ ಅಮೆರಿಕ ಮೂಲದ ಕಂಪನಿಯೊಂದು ತಯಾರಿ ನಡೆಸಿದ್ದು, ಇದಕ್ಕಾಗಿ ಕಂಪೆನಿ ಮಹಾರಾಷ್ಟ್ರ ಸರಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಈ 'ಹೈಪರ್‌ಲೂಪ್‌' ಸಂಚಾರ ವ್ಯವಸ್ಥೆ ಜಾರಿಗೆ ಬಂದರೆ ಮುಂಬಯಿ ಮತ್ತು ಪುಣೆ ನಡುವೆ ಕೇವಲ 20ನಿಮಿಷಗಳಲ್ಲಿ ಪ್ರಯಾಣಿಸಬಹದು. ಸದ್ಯ ಈ ಎರಡು ನಗರಗಳ ನಡುವೆ ಸಂಚಾರಕ್ಕೆ 3ಗಂಟೆ ಬೇಕು. ಈ ವಿಚಾರವನ್ನು 'ಮ್ಯಾಗ್ನೆಟಿಕ್‌ ಮಹಾರಾಷ್ಟ್ರ' ಹೂಡಿಕೆದಾರರ ಸಮ್ಮೇಳನಕ್ಕೆ ಬಂದಿರುವ ವರ್ಜಿನ್‌ ಹೈಪರ್‌ಲೂಪ್‌ ಒನ್‌ ಮುಖ್ಯಸ್ಥ ರಿಚರ್ಡ್‌ ಬ್ರಾನ್ಸನ್‌ ಬಹಿರಂಗಪಡಿಸಿದ್ದಾರೆ.
ಮೈಸೂರು-ಬೆಂಗಳೂರು ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ  ಚಾಲನೆ

ಮೈಸೂರು-ಬೆಂಗಳೂರು ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ಚಾಲನೆ

ಮೈಸೂರು-ಬೆಂಗಳೂರು ವಿದ್ಯುತ್ ರೈಲು ಮಾರ್ಗ ಹಾಗೂ ಮೈಸೂರು-ರಾಜಸ್ತಾನದ ಉದಯಪುರ ನಡುವಣೆ ಪ್ಯಾಲೆಸ್ ಕ್ವೀನ್ ಹಮ್ ಸಫರ್ ನೂತನ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಆಗಮಿಸಿದ ಮೋದಿ ಮೈಸೂರಿನ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಈ ವೇಳೆ ಉಪಸ್ಥಿತರಿದ್ದರು.
ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ  ಕಿತ್ತಾಟ !

ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಕಿತ್ತಾಟ !

ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಗಲಾಟೆ ಆರಂಭವಾಗಿದೆ. ಬೆಳಗಾವಿಯಲ್ಲಿ  ತೆಲಗಿ ಪತ್ನಿ ಶಹೀದಾ, ಮಗಳು ಸನಾ ಮೇಲೆ ತೆಲಗಿ ಸಹೋದರ ಅಜೀಂ ತೆಲಗಿ ಹಲ್ಲೆ‌ ನಡೆಸಿದ್ದಾನೆ. ಹಗರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ತೆಲಗಿ ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಸಾವನ್ನಪ್ಪಿದ್ದ. ಈತನ ಸಾವಿನ ಬಳಿಕ ಹಗರಣದಲ್ಲಿಗಳಿಸಿದ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಶಹೀದಾ ನಿರ್ಧರಿಸಿದ್ದರು. ಈ ಬಗ್ಗೆ ಪುಣೆ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಇದಕ್ಕೆ ಸಹೋದರನ ವಿರೋಧ ವ್ಯಕ್ತವಾಗಿದ್ದು ಶಹೀದಾ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ.