Short News

ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ

ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ

ಮೇಷ:ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದುವರು.ವೃಷಭ:ನಿಮ್ಮ ಖರ್ಚು ಹೆಚ್ಚಾಗಲಿದೆ.ಮಿಥುನ:ಬರಹಗಾರರು,ಮುದ್ರಕರು,ಪ್ರಕಾಶಕರು,ಪುಸ್ತಕ ವ್ಯಾಪಾರಿಗಳಿಗೆ ಲಾಭವಿದೆ.ಕಟಕ:ದಾಂಪತ್ಯ ಜೀವನ ಸುಖಮಯವಾಗಿರುವುದು.ಸಿಂಹ:ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ನಡೆಸಿದರೆ ಉತ್ತಮ.ಕನ್ಯಾ:ಪ್ರೇಮಿಗಳಿಗೆ ಉತ್ತಮ ದಿನವಾಗಿದೆ.ತುಲಾ:ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು.ವೃಶ್ಚಿಕ:ಪ್ರಯತ್ನಿಸಿದ ಕಾರ್ಯ ಸಫಲವಾಗಲಿವೆ.ಧನುಸ್ಸು:ಅವಶ್ಯಕ ವಸ್ತುಗಳಿಂದ ಸಂತೋಷ ವಾಗಲಿದೆ.ಮಕರ:ವಿದ್ಯಾರ್ಥಿಗಳು ವಿದ್ಯೆಯಲ್ಲಿ ಜಯ ಸಾಧಿಸುವರು.ಕುಂಭ:ಸ್ವಂತ ಕೆಲಸದಲ್ಲಿ ಯಶ ಸಿಗಲಿದೆ.ಮೀನ:ಕಲಾವಿದರಿಗೆ ಲಾಭದಾಯಕವಾಗಿದೆ.
'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್

'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ರವಿಚಂದ್ರನ್ 'ಕಾಮಿಡಿ ಕಿಲಾಡಿಗಳು' ವೇದಿಕೆ ಏರಿದ್ದಾರೆ. 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟಗೆ ಪ್ರಸಾರ ಆಗಲಿದೆ.

ರವಿಚಂದ್ರನ್ ಅವರ ಸಂಚಿಕೆಯ ಚಿತ್ರೀಕರಣ ಈಗಾಗಲೇ ನಡೆದಿದೆ. ಚಿತ್ರೀಕರಣದ ವೇಳೆ ರವಿಚಂದ್ರನ್ ಜೊತೆಗೆ ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಮತ್ತು ಮಾಸ್ಟರ್ ಆನಂದ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 'ಜೀ ಕನ್ನಡ' ವಾಹಿನಿ ಇನ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಾಕಲಾಗಿದೆ. ಇನ್ನೂ ಫೋಟೋ ನೋಡಿರುವ ಅಭಿಮಾನಿಗಳು ಖುಷಿ

ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ನಿಧನ

ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ನಿಧನ

ರಾಜಸ್ಥಾನದ ನತದ್ವಾರದ ಬಿಜೆಪಿ ಶಾಸಕ ಕಲ್ಯಾಣ್ ಸಿಂಗ್ ಚೌಹಾಣ್(58) ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉದಯಪುರದ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು(ಫೆ.21) ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. 2013 ರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ನತದ್ವಾರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದರು.
ಸಿಎಂ ಓಲೈಕೆ ರಾಜಕಾರಣ ಯಶಸ್ವಿಯಾಗದು: ಕುಕ್ಕೆಯಲ್ಲಿ ಅಮಿತ್ ಶಾ

ಸಿಎಂ ಓಲೈಕೆ ರಾಜಕಾರಣ ಯಶಸ್ವಿಯಾಗದು: ಕುಕ್ಕೆಯಲ್ಲಿ ಅಮಿತ್ ಶಾ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದ ಕುಲ್ಕುಂದದಲ್ಲಿ ನವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ಓಲೈಕೆ ರಾಜಕಾರಣ ಯಶಸ್ವಿಯಾಗುತ್ತದೆ ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರೆ ಅದು ಅವರ ತಪ್ಪು ಭಾವನೆ ಅಷ್ಟೆ. ಅವರ ಓಲೈಕೆ ಮತ್ತು ಧ್ರುವೀಕರಣ ರಾಜಕಾರಣ ಯಶಸ್ವಿಯಾಗುವುದಿಲ್ಲ," ಎಂದು ಅವರು ಹೇಳಿದ್ದಾರೆ.

"ಓಲೈಕೆ ರಾಜಕಾರಣ ಯಶಸ್ವಿಯಾಗುತ್ತದೆ ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರೆ