Short News

ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ

ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ

ಮೇಷ:ದೇಹದ ಆಲಸ್ಯ, ಶ್ರಮದಿಂದ ಅನಾರೋಗ್ಯ.ವೃಷಭ:ದಿಢೀರ್ ಬಂಧುಗಳ ಆಗಮನ, ಖರ್ಚು ಅಧಿಕ.ಮಿಥುನ:ನಿರೀಕ್ಷಿತ ಪ್ರಮಾಣದಲ್ಲಿ ಲಾಭ ಸಿಗುವುದಿಲ್ಲ.ಕಟಕ:ಹೊಸ ವ್ಯಾಪಾರ- ವ್ಯವ ಹಾರಗಳಿಗೆ ಇದು ಸಕಾಲವಲ್ಲ.ಸಿಂಹ:ಕೆಲಸಕ್ಕೆ ಸೋಮಾರಿತನ.ಕನ್ಯಾ:ಮನೆಯಲ್ಲಿ ಕಲಹ ಮನಃಶಾಂತಿ ಕೊರತೆ.ತುಲಾ:ಧಾರ್ಮಿಕ ಕಾರ್ಯಗಳಿಗೆ ಹಣದ ವೆಚ್ಚ ಅಧಿಕ.ವೃಶ್ಚಿಕ:ರಾಜಕೀಯ ವರ್ಗದವರಿಗೆ ತುಸು ಸಮಾಧಾನಕರ ವಾತಾವರಣವಿರುತ್ತದೆ.ಧನುಸ್ಸು:ಸಾಲ ಬಾಧೆಯಿಂದ ಮನಸ್ಸಿಗೆ ನೆಮ್ಮದಿ ದೂರ.ಮಕರ:ಸಹೋದ್ಯೋಗಿಗಳೊಂದಿಗೆ ಜಗಳ.ಕುಂಭ:ಖರ್ಚು ಅಧಿಕ. ಮಾನಸಿಕ ತೊಳಲಾಟ, ಕುಟುಂಬದ ಸಮಸ್ಯೆಗಳಿಂದ ಬೇಸರ.ಮೀನ:ಮನೋರಂಜನೆಯಿಂದ ಮನಸ್ಸಿಗೆ ಸಂತೋಷ.
'ಒನ್‌ಪ್ಲಸ್ 6' ಬಗ್ಗೆ ಮತ್ತೊಂದು ಸಿಹಿಸುದ್ದಿ ನೀಡಿತು ಒನ್‌ಪ್ಲಸ್ ಕಂಪೆನಿ

'ಒನ್‌ಪ್ಲಸ್ 6' ಬಗ್ಗೆ ಮತ್ತೊಂದು ಸಿಹಿಸುದ್ದಿ ನೀಡಿತು ಒನ್‌ಪ್ಲಸ್ ಕಂಪೆನಿ

ಒನ್‌ಪ್ಲಸ್ 6 ಬಿಡುಗಡೆಗೆ ಇನ್ನೇನು ಕೆಲವೇ ದಿನ ಬಾಕಿ ಇವೆ ಎನ್ನುವಷ್ಟರಲ್ಲಿ ಮೊಬೈಲ್ ಕಂಪೆನಿ ಸಿಇಒ ಮತ್ತೊಂದು ಸಿಹಿಸುದ್ದಿಯನ್ನು ಹೊರಹಾಕಿದ್ದಾರೆ. ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನಲ್ಲಿ ಆಪಲ್ 10 ವಿನ್ಯಾಸದ ಬೆಜೆಲ್ ಡಿಸ್‌ಪ್ಲೇ ಇತ್ತು ಎಂಬುದು ಎಲ್ಲರಿಗೂ ತಿಳಿದಿದ್ದರೂ ಸ್ಮಾರ್ಟ್‌ಫೋನ್ ವಿನ್ಯಾಸ ಹೇಗಿದೆ ಎಂಬುದು ಈ ವರೆಗೂ ಸ್ಪಷ್ಟವಾಗಿರಲಿಲ್ಲ. ಇದನ್ನು ಸಿಇಒ ಪೀಟ್ ಲೌ ಅವರು ಬಹಿರಂಗಪಡಿಸಿದ್ದು, ಆ ಪ್ರಕಾರ ಗಾಜಿನ ಹಿಂಭಾಗವನ್ನು 70 ಗಾಜಿನ ಮೂಲಮಾದರಿ ಗಾಜುಗಳನ್ನು ಪರೀಕ್ಷಿಸಿ, ಅದರಲ್ಲಿ ಉತ್ತಮ ಆಯ್ಕೆ ಮಾಡಲಾಗಿದೆ. ಫೋನಿನಲ್ಲಿ 5 ಪದರದ ನ್ಯಾನೋಟೆಕ್ ಕೋಟಿಂಗ್ ಇರುವುದು ನೀರು ನಿರೋಧಕವಾಗಿದೆ.
aadhar

aadhar

  • ದೇಶದಲ್ಲಿನ ಹೆಚ್ಚಿನ ರಾಜಕಾರಣಿಗಳು, ಅಧಿಕಾರಿಗಳು ಅಥವಾ ಬಿಲ್ಡರ್ ಗಳು ಹೀಗೆ ಹಲವರು ಬೇನಾಮಿ ಆಸ್ತಿಯನ್ನು ಸಂಪಾದಿಸಿದ್ದಾರೆ. ರಿಯಲ್ ಎಸ್ಟೇಟ್ ವಲಯದಲ್ಲಿ ಕಪ್ಪುಹಣದ ಪ್ರಭಾವ ಹೆಚ್ಚಿದ್ದು, ಆಧಾರ್ ಸಂಪರ್ಕದಿಂದ ಕಡಿವಾಣ ಬೀಳಲಿದೆ. ಕೇಂದ್ರ ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಭೂ ಸಂಪನ್ಮೂಲ ಇಲಾಖೆ ಬೇನಾಮಿ ಆಸ್ತಿ (ರಿಯಲ್ ಎಸ್ಟೇಟ್) ಸಂಬಂಧಿತ ಪ್ರಸ್ತಾವದ ಬಗ್ಗೆ ಸಿದ್ದತೆ ನಡೆಸುತ್ತಿವೆ. ಜತೆಗೆ ರಾಜ್ಯ ಸರ್ಕಾರಗಳ ಮೂಲಕ ಇದನ್ನು ಅನುಷ್ಠಾನಕ್ಕೆ ತರಲು ಅನುಸರಿಸಬೇಕಾದ ಕ್ರಮಗಳ ರೂಪುರೇಷೆ ಸಿದ್ಧಪಡಿಸುತ್ತಿದೆ.

aadhar

aadhar

  • ಇಲ್ಲಿಯವರೆಗೆ ಒಟ್ಟು 13.28 ಕೋಟಿ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡುಗಳನ್ನು ಆಧಾರ್ ನೊಂದಿಗೆ ಜೋಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಇಲ್ಲಿಯವರೆಗೆ ಒಟ್ಟು 13.28 ಕೋಟಿ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡುಗಳನ್ನು ಆಧಾರ್ ನೊಂದಿಗೆ ಜೋಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
  • ಐಟಿಆರ್ ಸಲ್ಲಿಕೆಗೆ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡುವುದನ್ನು ಸರ್ಕಾರ ಜುಲೈ 1ರಿಂದ ಕಡ್ಡಾಯ ಮಾಡಿದ್ದು, ಪ್ಯಾನ್ ಆಧಾರ್ ಜೋಡಣೆಗೆ ಡಿಸೆಂಬರ್ 31ರ ವರೆಗೆ ಗಡುವು ನೀಡಿದೆ.
  • ಇಲ್ಲಿಯತನಕ 115 ಕೋಟಿ ಜನರಿಗೆ ಆಧಾರ್ ಕಾರ್ಡ ನೀಡಲಾಗಿದ್ದು, ಒಟ್ಟು 33 ಕೋಟಿ ಪ್ಯಾನ್‌ ಕಾರ್ಡ್‌ಗಳಿವೆ.