Short News

ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಕರ್ನಾಟಕ ಸಾರಿಗೆ ಇಲಾಖೆ ನಿರಾಸಕ್ತಿ

ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಕರ್ನಾಟಕ ಸಾರಿಗೆ ಇಲಾಖೆ ನಿರಾಸಕ್ತಿ

ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಏ.1ರಿಂದ ದೇಶಾದ್ಯಂತ ಆಟೋ ಹೊರತುಪಡಿಸಿ ಎಲ್ಲ ರೀತಿಯ ಪ್ಯಾಸೆಂಜರ್ ವಾಹನಗಳಿಗೆ ವೆಹಿಕಲ್ ಟ್ರ್ಯಾಕಿಂಗ್ ಯುನಿಟ್ ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಎಂಬ ಆದೇಶವಿದೆ. ಇದನ್ನು ಅನುಷ್ಠಾನ ಮಾಡುವಲ್ಲಿ ಕರ್ನಾಟಕ ವಿಫಲವಾಗಿದೆ. ನಿರ್ಭಯಾ ಪ್ರಕರಣ ನಂತರ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ 23ಸೀಟಿಗಿಂತ ಅಧಿಕವಿರುವ ಬಸ್ ಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ ಆದೇಶವನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿತ್ತು. ಇದಾದ ನಂತರ ಪ್ಯಾಸೆಂಜರ್ ವಾಹನಗಳ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಜತೆಗೆ 2018 ಏ.1ರಿಂದ ವಿಟಿಯು ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಆದೇಶವಿದೆ.
ಹೇರ್ ಸ್ಟೈಲ್ ಕಿಂಗ್ ಧೋನಿ, ಸೂಪರ್ ಲುಕ್ ಎಂದ ಫ್ಯಾನ್ಸ್

ಹೇರ್ ಸ್ಟೈಲ್ ಕಿಂಗ್ ಧೋನಿ, ಸೂಪರ್ ಲುಕ್ ಎಂದ ಫ್ಯಾನ್ಸ್

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ.ಎಸ್.ದೋನಿ ಅವರು ಮತ್ತೊಮ್ಮೆ ಹೊಸ ವಿನೂತನ ಕೇಶ ವಿನ್ಯಾಸದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಹೊಸ ಹೊಸ ಹೇರ್ ಸ್ಟೈಲ್ ಮಾಡಿಕೊಂಡು ಮೈದಾನದಲ್ಲಿ ಕಾಣಿಸಿಕೊಳ್ಳುವ ಧೋನಿ ಅವರು ಈ ಬಾರಿ ಯಾವ ಸ್ಟೈಲ್ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಕೊನೆಗೆ ಧೋನಿ ಅವರ ಕೇಶ ವಿನ್ಯಾಸ ಮಾಡುವ ಸಪ್ನ ಮೋತಿ ಭವ್ನಾನಿ ಅವರು ಗೊಂದಲ ಪರಿಹರಿಸಿದ್ದು, ಇದು ಮೋಹ್ವಕ್ ಸ್ಟೈಲ್ ಅಲ್ಲ , 'ವೈಕಿಂಗ್' ಸ್ಟೈಲ್‌ ಎಂದಿದ್ದಾರೆ. ಎಂಎಸ್ ಧೋನಿ ಅಲ್ಲದೆ, ವಿರಾಟ್ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಉಮೇಶ್‌ ಯಾದವ್‌ ಹೊಸ ಕೇಶ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಾರೆ.
ಇಐಎಲ್ ನಲ್ಲಿ 67 ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ... ಬಂಪರ್ ಸ್ಯಾಲರಿ ಆಫರ್!

ಇಐಎಲ್ ನಲ್ಲಿ 67 ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ... ಬಂಪರ್ ಸ್ಯಾಲರಿ ಆಫರ್!

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಒಟ್ಟು 67ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ2. ಅಭ್ಯರ್ಥಿಗಳ ಆಯ್ಕೆಯಾದ ಬಳಿಕ ಒಂದು ವರ್ಷ ಟ್ರೈನಿಂಗ್ ನೀಡಲಾಗುವುದು ಈ ಟೈಂನಲ್ಲಿ ಅಭ್ಯರ್ಥಿಗಳಿಗೆ ವಸತಿ ಹಾಗೂ ಸಾರಿಗೆಯನ್ನ ಹೊರತುಪಡಿಸಿ, 35,000 ರೂ ವೇತನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಟ್ರೈನಿಂಗ್ ಮುಗಿದ ಬಳಿಕ 60,000 ರೂ ಯಿಂದ 180000ರೂ ವೇತನ ನೀಡಲಾಗುವುದು. ಆಸಕ್ತ ಇಂಜಿನಿಯರ್ ಅಭ್ಯರ್ಥಿಗಳು ಹಾಗೂ ಈಗಷ್ಟೇ ಕೊನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 
ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್

ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಅವರು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಾವು ಹೊರದೇಶಗಳಿಗೆ ಹೋಗಿ ಬಂದು ಕರ್ನಾಟಕವನ್ನು ನೋಡಿದಾಗ ನಿಜವಾಗಲೂ ತುಂಬಾ ಬೇಸರವಾಗುತ್ತದೆ. ನಮ್ಮಲ್ಲಿ ಒಳ್ಳೆಯ ಬಜೆಟ್ ಮಂಡನೆಯಾಗುತ್ತದೆ. ಉತ್ತಮವಾದ ಅಧಿಕಾರಿಗಳು ಇದ್ದಾರೆ. ಜನರಿಗಾಗಿ ಮಾಡಿದ ಯೋಜನೆಗಳು ನೇರವಾಗಿ ಅವರನ್ನು ತಲುಪುವ ಕಾರ್ಯಗಳು ಆಗಬೇಕಾಗಿದೆ. ಎಲ್ಲೂ ಕೋಮುಗಲಭೆ ಆಗಬಾರದು. ಶಾಂತಿ ನೆಲೆಸಬೇಕು ಎಂಬ ಆಸೆ ಇದೆ. ಭಾರತೀಯ ಜನತಾಪಾರ್ಟಿ ಮೂಲಕ ಈ ಆಸೆ ನೇರವೇರಲಿದೆ ಎಂದರು.