Short News

ಇಂದೂ ಮುಂದುವರಿದ ಸಿದ್ದು-ಬಿಎಸ್ ವೈ ಟ್ವಿಟ್ಟರ್ ವಾರ್!

ಇಂದೂ ಮುಂದುವರಿದ ಸಿದ್ದು-ಬಿಎಸ್ ವೈ ಟ್ವಿಟ್ಟರ್ ವಾರ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಡುವಿನ ಟ್ವಿಟ್ಟರ್ ಸಮರ ಇನ್ನೂ ನಿಂತಿಲ್ಲ. ಈ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರದ ಘಟಾನುಘಟಿ ನಾಯಕರೆಲ್ಲ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. 

ಕಳೆದ ಕೆಲದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಯ್ತು. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೂ ಬಂದು ಹೋಗಿದ್ದಾಯ್ತು. ಕೇಂದ್ರದ ನಾಯಕರ ಭೇಟಿ ಕರ್ನಾತಕದ ನಾಯಕರ ಹಗ್ಗಜಗ್ಗಾಟಕ್ಕೆ ವೇದಿಗೆ ಕಲ್ಪಿಸಿದೆ!

ಆಧಾರ್ ಆಧಾರಿತ ಇ-ಕೆವೈಸಿ ಎಂದರೇನು?

ಆಧಾರ್ ಆಧಾರಿತ ಇ-ಕೆವೈಸಿ ಎಂದರೇನು?

ಆಧಾರ್ ಸಂಖ್ಯೆ ಹೊಂದಿರುವವರು ಇ ಕೆವೈಸಿ (know your customer) ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ಈ ಸಂಖ್ಯೆಯನ್ನು ನೀಡಲಾಗಿರುತ್ತದೆ. ಇದು ಬಯೋಮೆಟ್ರಿಕ್ ಆಧಾರದಲ್ಲಿ ಕೆಲಸ ಮಾಡುತ್ತದೆ. ಆಧಾರ್ ಕಾರ್ಡ್ ಮತ್ತು ವಿಳಾಸ ದೃಢೀಕರಣದಲ್ಲಿ ಲಿಂಗ, ವಿಳಾಸ, ವಯಸ್ಸು ಎಲ್ಲವೂ ಹೊಂದಾಣಿಕೆಯಾಗ ಬೇಕಾಗುತ್ತದೆ. ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿಯೊಂದನ್ನು ಕಳುಹಿಸಿಕೊಡಲಾಗುತ್ತದೆ. ಅದರ ಮೂಲಕವೇ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ಆನ್ ಲೈನ್ ಮುಖಾಂತರ ಡೌನ್ಲೋಡ್ ಮಾಡಿಕೊಂಡ ಆಧಾರ್ ಕಾರ್ಡ್ ಗಳನ್ನು ಸಹ ಬ್ಯಾಂಕ್ ಗಳು ಸ್ವೀಕಾರ ಮಾಡುತ್ತವೆ.
ಮಾರ್ಕ್ -3 ಇವಿಎಂಗಳ ಪ್ರಾಥಮಿಕ ಹಂತದ ಪರಿಶೀಲನೆ ಯಶಸ್ವಿ

ಮಾರ್ಕ್ -3 ಇವಿಎಂಗಳ ಪ್ರಾಥಮಿಕ ಹಂತದ ಪರಿಶೀಲನೆ ಯಶಸ್ವಿ

ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಮಾರ್ಕ್ 3 ತಂತ್ರಜ್ಞಾನದ ಇವಿಎಂ ಯಂತ್ರಗಳನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಸಂಬಂಧ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಕ್ 3 ಇವಿಎಂ ಮತಯಂತ್ರಗಳ ಪ್ರಥಮ ಹಂತ ಪರಿಶೀಲನೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ರಾಜಕೀಯ ಪಕ್ಷಗಳಿಗೆ ಅಣಕು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಮಾರ್ಕ್3 EVM ಮತಯಂತ್ರಗಳು ಆಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಇವುಗಳ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಗಳನ್ನು ಬಿಎಎಲ್ ಸಂಸ್ಥೆ ಸಿದ್ಧಪಡಿಸಿ ನೀಡುವ ತಂತ್ರಾಂಶವನ್ನು ಮಾತ್ರ ಸ್ವೀಕರಿಸುತ್ತಿದೆ.
ಅದ್ಧೂರಿ ಮದುವೆಗೆ ನೋ ಎಂದ ಅನಿಲ್ ಕಪೂರ್ ಪುತ್ರಿ

ಅದ್ಧೂರಿ ಮದುವೆಗೆ ನೋ ಎಂದ ಅನಿಲ್ ಕಪೂರ್ ಪುತ್ರಿ

ಈಗಾಗ್ಲೇ ಮೇ ತಿಂಗಳಿನಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಮದುವೆ ನೆರವೇರಲಿದೆ ಅನ್ನೋ ಸುದ್ದಿ ಭಾರೀ ವೈರಲ್ ಆಗಿದೆ. ಮುಂಬೈನಲ್ಲಿರೋ ಸಂಬಂಧಿಕರ ಬೃಹತ್ ಬಂಗಲೆಯಲ್ಲಿ ಸೋನಂ ತಮ್ಮ ಗೆಳೆಯನನ್ನು ವರಿಸಲಿದ್ದಾರಂತೆ. ನಂತರ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಅದ್ಧೂರಿ ರಿಸೆಪ್ಷನ್ ಕೂಡ ಆಯೋಜಿಸಲಾಗ್ತಿದೆ. ಆದ್ರೆ ಸೋನಂಗೆ ಡೆಸ್ಟಿನೇಶನ್ ವೆಡ್ಡಿಂಗ್ ನಲ್ಲಿ ಆಸಕ್ತಿ ಇಲ್ಲ. ಮನೆಯಲ್ಲೇ ಸಂಪ್ರದಾಯಬದ್ಧವಾಗಿ ಮದುವೆ ನೆರವೇರಬೇಕು ಅನ್ನೋದು ಅವಳ ಆಸೆ. ಅಷ್ಟೇ ಅಲ್ಲ ಮದುವೆಗಾಗಿ ಕೋಟಿಗಟ್ಟಲೆ ಖರ್ಚು ಮಾಡೋದು ವ್ಯರ್ಥ ಅಂತಾ ಹೇಳಿದ್ದಾಳೆ.