Short News

ದೃಷ್ಟಿ ಕಳೆದುಕೊಂಡ ಗರುಡನಿಗೆ ಪೇಜಾವರ ಮಠದಲ್ಲಿ ಚಿಕಿತ್ಸೆ

ದೃಷ್ಟಿ ಕಳೆದುಕೊಂಡ ಗರುಡನಿಗೆ ಪೇಜಾವರ ಮಠದಲ್ಲಿ ಚಿಕಿತ್ಸೆ

ಎರಡೂ ಕಣ್ಣುಗಳಿಗೆ ಪೊರೆ ಆವರಿಸಿರುವ ಹಿನ್ನೆಲೆಯಲ್ಲಿ ದೃಷ್ಟಿ ಹೀನವಾಗಿರುವ ಗರುಡ ಪಕ್ಷಿಗೆ ಉಡುಪಿ ಪೇಜಾವರ ಮಠದಲ್ಲಿ ಆರೈಕೆ ಮಾಡಲಾಗುತ್ತಿದೆ. ಗರುಡ ಪಕ್ಷಿಯ ಆರೈಕೆ ಜವಾಬ್ದಾರಿಯನ್ನು ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು ವಹಿಸಿಕೊಂಡಿದ್ದಾರೆ . ಎರಡು ದಿನಗಳ ಹಿಂದೆ ಉಡುಪಿಯ ಕೃಷ್ಣ ಮಠ ಆವರಣದಲ್ಲಿ ಗರುಡ ಪಕ್ಷಿ ಗಾಯಗೊಂಡು ಬಿದ್ದಿತ್ತು. ಗರುಡನ ಕಣ್ಣುಗಳು ಅತ್ಯಂತ ಸೂಕ್ಮ. ಆದರೆ ಗಾಯಗೊಂಡಿರುವ ಈ ಗರುಡನ ಎರಡೂ ಕಣ್ಣುಗಳ ಮೇಲೆ ಪೊರೆ ಆವೃತವಾಗಿದೆ. ಹೀಗಾಗಿ ಗರುಡ ಸೂಕ್ಮ ಗೃಹಿಕೆಯನ್ನು ಕಳೆದುಕೊಂಡಿದೆ. ಗರುಡನಿಗೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ನುರಿತರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ  ಕಿತ್ತಾಟ !

ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಕಿತ್ತಾಟ !

ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಗಲಾಟೆ ಆರಂಭವಾಗಿದೆ. ಬೆಳಗಾವಿಯಲ್ಲಿ  ತೆಲಗಿ ಪತ್ನಿ ಶಹೀದಾ, ಮಗಳು ಸನಾ ಮೇಲೆ ತೆಲಗಿ ಸಹೋದರ ಅಜೀಂ ತೆಲಗಿ ಹಲ್ಲೆ‌ ನಡೆಸಿದ್ದಾನೆ. ಹಗರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ತೆಲಗಿ ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಸಾವನ್ನಪ್ಪಿದ್ದ. ಈತನ ಸಾವಿನ ಬಳಿಕ ಹಗರಣದಲ್ಲಿಗಳಿಸಿದ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಶಹೀದಾ ನಿರ್ಧರಿಸಿದ್ದರು. ಈ ಬಗ್ಗೆ ಪುಣೆ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಇದಕ್ಕೆ ಸಹೋದರನ ವಿರೋಧ ವ್ಯಕ್ತವಾಗಿದ್ದು ಶಹೀದಾ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ.
ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಕ್ರಿಕೆಟ್​ನ ಪ್ರತಿಷ್ಠಿತ ವೆಬ್​ಸೈಟ್​ ಇಎಸ್​ಪಿಎನ್​ ಅತ್ಯುತ್ತಮ ಪ್ರದರ್ಶನ ತೋರಿರುವ ಆಟಗಾರರಿಗೆ ಕ್ರಿಕ್​ಇನ್ಫೋ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು,2017ರ ಪ್ರಶಸ್ತಿಗಳಿಸಿರುವವರ ಪಟ್ಟಿಯನ್ನು ಪ್ರಕಟಿಸಿದೆ. ಭಾರತದ 3ಜನ ಈ ಪ್ರಶಸ್ತಿಗೆ ಆಯ್ಜೆಯಾಗಿದ್ದು,ಯಜುವೀಂದ್ರ್​ ಚಹಲ್​ ಅತ್ಯುತ್ತಮ ಟಿ20 ಬೌಲರ್, ಕುಲ್​ದೀಪ್​ ಯಾದವ್​ ಡೆಬ್ಯು ಕ್ರಿಕೆಟರ್​ ಆಗಿ ಹೊರಹೊಮ್ಮಿದ್ದಾರೆ. ಇನ್ನು ವರ್ಷದ ಬ್ಯಾಟಿಂಗ್​ ಪರ್ಫಾರ್ಮರ್​ ಆಗಿ ಹರ್ಮನ್​ಪ್ರೀತ್​ ಕೌರ್​ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 12 ಪ್ರಶಸ್ತಿಗಳಲ್ಲಿ 3 ಜನ ಭಾರತೀಯರಿದ್ದು, ಅತಿ ಹೆಚ್ಚು ಪ್ರಶಸ್ತಿ ಪಡೆದ ದೇಶ ಎಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.
ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅತ್ಯುತ್ತಮ ಸಂವಹನಾಕಾರ, ಅವರ ಭಾಷಣ ಕಲೆಗೆ ಹೋಲಿಸಬಹುದಾದ ಇನ್ನೊಬ್ಬ ರಾಜಕಾರಣಿ ಸದ್ಯಕ್ಕಂತೂ ರಾಷ್ಟ್ರ ರಾಜಕಾರಣದಲ್ಲಿ ದೂರಕ್ಕೂ ಕಾಣ ಸಿಗುತ್ತಿಲ್ಲ. ಇದ್ದರೂ ಮೋದಿ ಅವರ ಶೈಲಿಯನ್ನೇ ಅನುಕರಿಸುವವರು ಇದ್ದಾರೆ ಅಷ್ಟೆ.

ಅವರ ಭಾಷಣ ಶೈಲಿ, ಧ್ವನಿ ಏರಿಳಿತ, ಹಾವ ಭಾವ, ಪದಗಳ ಆಯ್ಕೆ, ಎಲ್ಲವೂ ಗಮನಿಸಲರ್ಹ. ಅವರ ಭಾಷಣವನ್ನು ಸಂಶೋಧಿಸಿ ಪುಟಗಟ್ಟಲೆ ಪ್ರಬಂಧ ಬರೆದ ಪತ್ರಕರ್ತರೂ ಇದ್ದಾರೆ. ಈ ಲೇಖನದಲ್ಲೂ ಇದೇ ಪ್ರಯತ್ನವನ್ನು ಮಾಡ ಹೊರಟಿದ್ದೇವೆ.