Short News

ನಂಜನಗೂಡು ಪಾರ್ಲೆಜಿ ಕಾರ್ಖಾನೆಯಲ್ಲಿ ವಾಟರ್ ಟ್ಯಾಂಕ್ ಸಿಡಿದು ಸಾವು

ನಂಜನಗೂಡು ಪಾರ್ಲೆಜಿ ಕಾರ್ಖಾನೆಯಲ್ಲಿ ವಾಟರ್ ಟ್ಯಾಂಕ್ ಸಿಡಿದು ಸಾವು

ನಂಜನಗೂಡು ತಾಲೂಕಿನ ಹೊರವಲಯದಲ್ಲಿರುವ ತಾಂಡ್ಯ ಕೈಗಾರಿಕಾ ಪ್ರದೇಶಕ್ಕೆ ಸೇರಿದ ಅಡಕನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಪಾರ್ಲೆಜಿ ಆಗ್ರೋ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ವಾಟರ್ ಟ್ಯಾಂಕ್ ಸಿಡಿದು, ಒಬ್ಬ ಕಾರ್ಮಿಕ ಮೃತ ಪಟ್ಟು, ಐವರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. ಪಾರ್ಲೆಜಿ ಬಿಸ್ಕೆಟ್ ತಯಾರಿಕೆ ಕಾರ್ಖಾನೆಯಲ್ಲಿ ಕೆಲವು ವರ್ಷಗಳಿಂದಲೂ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಬಿಹಾರಿ ಮೂಲದ ವೇದ ಇಂಜಿನಿಯರಿಂಗ್ ವರ್ಕ್ಸ್ ಕಂಟ್ರಾಕ್ಟ್ ನ ಏಜೆಂಟ್ ಸಂಸ್ಥೆಯಿಂದ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಕರೆಯಿಸಿ, ಅವರಿಂದಲೇ ಕಾಮಗಾರಿ ನಡೆಸಲಾಗುತ್ತಿತ್ತು.  
ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆ ಫಲಿತಾಂಶ ಪ್ರಕಟ

ಕೇಂದ್ರ ಲೋಕ ಸೇವಾ ಆಯೋಗವು ಇದೀಗ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಜೂನ್ 3 ರಂದು ಪ್ರೆಲಿಮಿನರಿ ಪರೀಕ್ಷೆಯು ನಡೆದಿದ್ದು, ನಿನ್ನೆ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಆಫೀಶಿಯಲ್ ಸೈಟ್‌ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ. ಈ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು ಇದೀಗ ಸಿವಿಲ್ ಸರ್ವೀಸಸ್ ಪ್ರಮುಖ ಪರೀಕ್ಷೆಗಾಗಿ ಡೀಟೆಲ್ಡ್ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಬಹುದಾಗಿದೆ ಎಂದು ಅಫೀಶಿಯಲ್ ಪ್ರಕಟಣೆ ಹೊರಡಿಸಲಾಗಿದೆ.
ಬಾದಾಮಿಯಲ್ಲಿ ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು

ಬಾದಾಮಿಯಲ್ಲಿ ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು

ದಕ್ಷಿಣ ಕಾಶಿ ಎಂದೇ ಹೆಸರು ವಾಸಿಯಾಗಿರುವ ಐತಿಹಾಸಿಕ ಕೇಂದ್ರ ಮಹಾಕೂಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ. ಮಹಾಕೂಟೇಶ್ವರ ದೇವಾಲಯದ ಪಕ್ಕದಲ್ಲಿಯೇ ಇರುವ ಪುಷ್ಕರಣಿಯಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಿ, ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದ ಕೈಮಾಕ್ಸ್ ಹಂತದ ಶೂಟಿಂಗ್ ಐದು ದಿನಗಳ ಕಾಲ ನಡೆಸಲಾಗುತ್ತಿದೆ. ರಾತ್ರಿ ಇಡೀ ಶೂಟಿಂಗ್ ನಲ್ಲಿ ಪಾಲ್ಗೊಂಡ ಪುನೀತ್ ಬಾದಾಮಿಯ ಕೃಷ್ಣ ಹೇರಿಟಿಜ್ ಹೋಟೆಲ್ ನಲ್ಲಿ ತಂಗಿದ್ದಾರೆ. ಹೋಟೆಲ್ ಬಳಿ ತಮ್ಮ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.
ಚಿತ್ರದ ಸಂಭಾಷಣೆಗೆ ನಟರು ಹೊಣೆಯಾಗುವುದಿಲ್ಲ: ಹೈಕೋರ್ಟ್

ಚಿತ್ರದ ಸಂಭಾಷಣೆಗೆ ನಟರು ಹೊಣೆಯಾಗುವುದಿಲ್ಲ: ಹೈಕೋರ್ಟ್

ಚಿತ್ರದ ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲು ಸಾಧ್ಯವಿವೆಂದು ದೆಹಲಿಯ ಹೈಕೋರ್ಟ್ ಅಭಿಪ್ರಾಯಿಸಿದೆ. ಅನುರಾಗ್ ಕಶ್ಯಪ್ ನಿರ್ದೇಶನದ ‘ಸೇಕ್ರೆಡ್ ಗೇಮ್ಸ್‌' ವೆಬ್ ಸಿರೀಸ್ ಸಂಭಾಷಣೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯರಿಗೆ ಅವಮಾನ ಮಾಡಲಾಗಿದೆಯೆಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿಗ ನಿಖಿಲ್ ಭಲ್ಲಾ ಎಂಬವರು ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ವೆಬ್ ಸೀರಿಸ್ ನಲ್ಲಿ ಕೆಲವೊಂದು ಅಂಶಗಳನ್ನು ತೆಗೆದುಹಾಕಬೇಕೆಂದೂ ಒತ್ತಾಯಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದಿದ್ದು,ಮುಂದಿನ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more