Short News

ಬೆಳ್ಳಂದೂರು ಕೆರೆ ಸ್ವಚ್ಛತೆ ವಿಳಂಬ ಯಾಕೆ? ಸರಕಾರಕ್ಕೆ  ಚಾಟಿ ಬೀಸಿದ ಹೈಕೋರ್ಟ್

ಬೆಳ್ಳಂದೂರು ಕೆರೆ ಸ್ವಚ್ಛತೆ ವಿಳಂಬ ಯಾಕೆ? ಸರಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್

ಬೆಳ್ಳಂದೂರು ಕೆರೆವಿಚಾರದಲ್ಲಿ ರಾಜ್ಯ ಸರಕಾರವನ್ನು ಹೈಕೋರ್ಟ್‌ ತೀವ್ರ ತರಾಟೆಗೆ ಎತ್ತಿಕೊಂಡಿದೆ. ಕಳೆದ 3 ವರ್ಷದಿಂದ ಸರಕಾರಕ್ಕೆ ಕೆರೆ ಶುಚಿಗೊಳಿಸುವ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೇ? ಏನಿದರ ಅರ್ಥ? ಕೆರೆ ಸ್ವಚ್ಛಗೊಳಿಸುವುದು, ಮಾಲಿನ್ಯ ನಿಯಂತ್ರಣ ಸಂಬಂಧ ಪರಿಷ್ಕೃತ ಕ್ರಿಯಾಯೋಜನೆ ರಚಿಸಿ. ಬಿಡಿಎ ಆಯುಕ್ತರು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿ ಇದಕ್ಕೆ ಸಂಬಂಧಿಸಿದ ಎಲ್ಲ ಹಿರಿಯ ಅಧಿಕಾರಿಗಳು ಹಾಜರಾಗಿ ಕೆರೆ ಶುದ್ಧೀಕರಣಕ್ಕೆ ಕೈಗೊಳ್ಳ ಬಹುದಾದ ಕೆಲಸಗಳ ಬಗ್ಗೆ ವಿವರಣೆ ಕೊಡಿ ಎಂದು ಖಡಕ್ ಆಗಿ ಹೈಕೋರ್ಟ್‌ ಹೇಳಿದೆ.
ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಸೌರ ವಿದ್ಯುತ್ ಮೂಲಕವೇ ಚಲಿಸುತ್ತೆ ಈ ವಾಹನ- ಕನ್ನಡಿಗ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ..!

ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ದಪಡಿಸಿರುವಂತಹ ವಿನೂತನ ಮಾದರಿಯ ಸೌರ ವಿದ್ಯುತ್ ಚಾಲಿತ ವಾಹನವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಾಹನ ಮೂರು ಚಕ್ರದ್ದಾಗಿದೆ. ಆಳ್ವಾಸ್ ಇನ್ಸ್‌ಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಬೈರೇಗೌಡ ಜಿ, ರೋಹನ್ ಮತ್ತು ಶರತ್ ನಾಯಕ್ ಎನ್ನುವ ಮೂವರು ವಿದ್ಯಾರ್ಥಿಗಳೇ ಈ ಸೌರ ವಿದ್ಯುತ್ ವಾಹನದ ರೂವಾರಿಗಳಾಗಿದ್ದು, ಡಾ.ಫರ್ನಾಂಡಿಸ್ ಮತ್ತು ವಿದ್ಯಾಸಾಗರ್ ಇವರುಗಳ ಮಾರ್ಗದರ್ಶನದೊಂದಿಗೆ ಸೌರ ವಿದ್ಯುತ್ ಚಾಲಿತ ವಾಹನವು ಹೊಸ ರೂಪ ಪಡೆದುಕೊಂಡಿದೆ.
'ಕುಮಾರಸ್ವಾಮಿ'ಯಂತಹ ನಾಯಕ ಭಾರತಕ್ಕೆ ಬೇಡ: ಜೇಟ್ಲಿ

'ಕುಮಾರಸ್ವಾಮಿ'ಯಂತಹ ನಾಯಕ ಭಾರತಕ್ಕೆ ಬೇಡ: ಜೇಟ್ಲಿ

ಕಾಂಗ್ರೆಸ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಖಿನ್ನತೆಗೆ ದೂಡಿದೆ ಎಂದು ಆರೋಪಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕೇವಲ ಮೋದಿಯನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಸೈದ್ಧಾಂತಿಕ ವಿರೋಧಿಗಳೊಂದಿಗೆ ಕಾಂಗ್ರೆಸ್ ಅವಕಾಶವಾದಿತನದ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಜೇಟ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರು ಕಣ್ಣೀರಿಟ್ಟಿದ್ದು, ನೋಡಿ ಹಳೆ ದುರಂತ ಬಾಲಿವುಡ್ ಸಿನಿಮಾಗಳ ಸಂಭಾಷಣೆ ನೆನಪಾಯಿತು ಎಂದು ಕಾಲೆಳೆದಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷ ಇತಿಹಾಸ ನೋಡಿದರೆ ತಿಳಿಯುತ್ತದೆ ಅದು ಪ್ರಾದೇಶಿಕ ಪಕ್ಷಗಳನ್ನು ಕೇವಲ ಲಾಭಕ್ಕಾಗಿ ಬಳಸುತ್ತದೆ ಎಂದಿದ್ದಾರೆ.
ಹಾಕಿ: ಬ್ರಿಟನ್ ವಿರುದ್ಧ ಭಾರತದ ಅಂಡರ್ -23 ಪುರುಷರಿಗೆ ಸೋಲು

ಹಾಕಿ: ಬ್ರಿಟನ್ ವಿರುದ್ಧ ಭಾರತದ ಅಂಡರ್ -23 ಪುರುಷರಿಗೆ ಸೋಲು

ಬೆಲ್ಜಿಯಂನ ಆಂಟ್ವೆರ್ಪ್ ನಲ್ಲಿ ಭಾನುವಾರ ನಡೆದ ಅಂಡರ್-23 ವಯೋಮಾನದವರ ಐದು ರಾಷ್ಟ್ರಗಳ ಹಾಕಿ ಟೂರ್ನಮೆಂಟ್ ನಲ್ಲಿ ಭಾರತದ ಪುರುಷರ ತಂಡ ಗ್ರೇಟ್ ಬ್ರಿಟನ್ ವಿರುದ್ಧ 1-3 ಅಂತರದ ಸೋಲನುಭವಿಸಿದೆ. ಹಿಂದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 5-0ಅಂತರದಿಂದ ಸೋಲಿಸಿದ್ದ ತಂಡ, ಆಂಗ್ಲರನ್ನು ಹಿಮ್ಮೆಟ್ಟಿಸಲು ವಿಫಲವಾಯಿತು. ಪಂದ್ಯದ ಫಸ್ಟ್ ಕ್ವಾರ್ಟರ್ ಅವಧಿ ಮುಗಿಯುತ್ತಲೇ ಬ್ರಿಟನ್ ನ ಟಿಮ್ ನರ್ಸ್ ಅವರು 19ನೇ ನಿಮಿಷದಲ್ಲಿ, ಡಂಕನ್ ಸ್ಕಾಟ್ 34ನೇ ನಿಮಿಷದಲ್ಲಿ, ಕ್ಯಾಮೆರಾನ್ ಗೋಲ್ಡ್ 50ನೇ ನಿಮಿಷದಲ್ಲಿ, ಗೋಲು ಬಾರಿಸಿದರುಇನ್ನೇನು 3 ನಿಮಿಷಗಳಿರುವಾಗ ಭಾರತದ ಪ್ರದೀಪ್ ಸಿಂಗ್ ಗೋಲ್ ದಾಖಲಿಸಿದರಾದರೂ ಪ್ರಯೋಜನವಾಗಲಿಲ್ಲ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more