Short News

ವಾಟಾಳ್ ನಾಗರಾಜ್‍ರನ್ನು ಗೆಲ್ಲಿಸ್ತಾರಾ ಚಾಮರಾಜನಗರದ ಜನ?

ವಾಟಾಳ್ ನಾಗರಾಜ್‍ರನ್ನು ಗೆಲ್ಲಿಸ್ತಾರಾ ಚಾಮರಾಜನಗರದ ಜನ?

ಪ್ರತಿಭಟನೆ, ಹೋರಾಟದ ಮೂಲಕವೇ ರಾಜ್ಯದ ಮನೆ ಮಾತಾಗಿರುವ ವಾಟಾಳ್ ನಾಗರಾಜ್ ಅವರಿಗೆ ಇತ್ತೀಚೆಗಿನ ವರ್ಷಗಳಲ್ಲಿ ಅದ್ಯಾಕೋ ರಾಜಕೀಯ ಹಾದಿ ಒಲಿದು ಬರುವಂತೆ ಕಾಣುತ್ತಿಲ್ಲ. ಯಾವ ಚುನಾವಣೆಗೂ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎನ್ನುವಂತಾಗಿದೆ. ಹೀಗಿದ್ದರೂ ಚುನಾವಣೆಗೆ ಸ್ಪರ್ಧಿಸುವುದನ್ನು ಮಾತ್ರ ಅವರು ಬಿಡುತ್ತಿಲ್ಲ. ಇದೀಗ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸಿದ್ಧಗೊಳ್ಳುತ್ತಿದ್ದು, ನಾಯಕರೆಲ್ಲರೂ ಗೆಲುವಿಗಾಗಿ ತಂತ್ರ ಮತ್ತು ಪ್ರತಿತಂತ್ರ ಹೆಣೆಯುತ್ತಿದ್ದಾರೆ.
ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿ: ಪೆಟ್ರೋಲ್: 74.63 / ಲೀಟರ್, ಡೀಸೆಲ್: 65.93 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.32 / ಲೀಟರ್ , ಡೀಸೆಲ್: 68.63 / ಲೀಟರ್. ಮುಂಬೈ: ಪೆಟ್ರೋಲ್: 82.48/ ಲೀಟರ್ , ಡೀಸೆಲ್: 70.20 / ಲೀಟರ್. ಚೆನ್ನೈ: ಪೆಟ್ರೋಲ್: 77.43 / ಲೀಟರ್ , ಡೀಸೆಲ್: 69.56 / ಲೀಟರ್. ಬೆಂಗಳೂರು: ಪೆಟ್ರೋಲ್: 75.82 / ಲೀಟರ್, ಡೀಸೆಲ್: 67.05/ ಲೀಟರ್. ಹೈದರಾಬಾದ್: ಪೆಟ್ರೋಲ್: 79.04/ ಲೀಟರ್, ಡೀಸೆಲ್: 71.63 / ಲೀಟರ್.
ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ಮೇಷ:ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಲಾರರು. ವೃಷಭ:ಪತ್ನಿ ಕಡೆಯಿಂದ ತೊಂದರೆ ಉಂಟಾಗಲಿದೆ. ಮಿಥುನ:ಸ್ನೇಹಿತರು ನಿಮ್ಮನ್ನು ಅವಮಾನ ಮಾಡಬಹುದು. ಕಟಕ:ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಸಿಂಹ:ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ನಷ್ಟವಾಗುವ ಸಾಧ್ಯತೆಗಳಿವೆ. ತುಲಾ:ಅತ್ತಿಗೆ-ನಾದಿನಿ ಯರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ. ವೃಶ್ಚಿಕ:ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಧನುಸ್ಸು:ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ಸಂಭವಿಸಬಹುದು. ಮಕರ:ಸಹೋದರರಿಂದ ತೊಂದರೆಯಾಗಲಿದೆ. ಕುಂಭ:ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮೀನ:ಪ್ರೇಮಿಗಳಿಗೆ ತೊಂದರೆಯಾಗಲಿದೆ.
ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ಕರ್ನಾಟಕದ ಬಿಜೆಪಿ ಘಟಕದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಸಂವಾದ ನಡೆಸಲಿದ್ದಾರೆ. ತಮ್ಮ ವಿಶಿಷ್ಟ ನಮೋ ಆ್ಯಪ್ ಮೂಲಕ ಅವರು ಸಂವಾದ ನಡೆಸಲಿದ್ದಾರೆ. ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರ ಜೊತೆಗೆ ಅವರು ಸಂವಾದ ನಡೆಸಲಿದ್ದಾರೆ. ಸಂವಾದದ ಸಂದರ್ಭದಲ್ಲಿ ಅವರು ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರಿಗೆ ಅವರು ಸಲಹೆ, ಮಾರ್ಗದರ್ಶನವನ್ನೂ ನೀಡಲಿದ್ದಾರೆ.