Short News

ಈ ಐದು ರಾಶಿಗಳಿಗೆ 2020 ಅದೃಷ್ಟ ತರಲಿದೆ!

ಈ ಐದು ರಾಶಿಗಳಿಗೆ 2020 ಅದೃಷ್ಟ ತರಲಿದೆ!

ಹೊಸ ವರ್ಷ ಎನ್ನುವುದು ಎಲ್ಲರಿಗೂ ಒಂದು ಬಗೆಯ ವಿಶೇಷ ಸಂಭ್ರಮವನ್ನು ಮೂಡಿಸುತ್ತದೆ. ಪ್ರಸ್ತುತ ಸ್ಥಿತಿಗಿಂತ ಮುಂದಿನ ದಿನದಲ್ಲಾದರೂ ಕೊಂಚ ಬದಲಾವಣೆ ಹಾಗೂ ಸಂತೋಷ ದೊರೆಯಬಹುದು ಎನ್ನುವ ನಿರೀಕ್ಷೆ ಇರುತ್ತದೆ. ಗ್ರಹಗತಿಗಳ ಬದಲಾವಣೆ ಹಾಗೂ ನಕ್ಷತ್ರಗಳ ಪ್ರಭಾವವೂ ಅವರ ಚಲನೆ ಹಾಗೂ ಸ್ಥಾನ ಬದಲಾವಣೆಯಿಂದ ವಿಶೇಷ ಬದಲಾವಣೆ ಉಂಟಾಗುವುದು. ಅವು ಮನುಷ್ಯನ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುತ್ತವೆ ಎಂದು ನಂಬಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2020ರಲ್ಲಿ ಕೆಲವು ಗ್ರಹಗಳು ಹಾಗೂ ನಕ್ಷತ್ರಗಳು ವಿಶೇಷ ಚಲನೆಯನ್ನು ಕೈಗೊಳ್ಳುತ್ತವೆ.

ಪ್ರೊಫೆಸರ್ ದೊಡ್ಡರಂಗೇಗೌಡರು ಮಾಡಿದ ಗೋಪಾಲ ಗಾಂಧಿ’ಯ ಪಾಠ

ಪ್ರೊಫೆಸರ್ ದೊಡ್ಡರಂಗೇಗೌಡರು ಮಾಡಿದ ಗೋಪಾಲ ಗಾಂಧಿ’ಯ ಪಾಠ

ನಾನು ನಾಗೇಶ್ ಅವರ ಅನಾಮಿಕ ಮತ್ತು ಇತರೆ ಕಥೆಗಳು' ಕಥಾ ಸಂಕಲನ ಓದಿದ್ದೆ. ಹಾಗಾಗಿ ಕತೆಯ ಬಗ್ಗೆ ಗೊತ್ತಿತ್ತು. ಅದನ್ನು ಆಧಾರವಾಗಿಸಿರುವ ಗೋಪಾಲ ಗಾಂಧಿ' ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿತ್ತು. ನನ್ನ ಹಾವಭಾವ, ಗುಣಧರ್ಮ, ರೀತಿ ನೀತಿಗೆ ಅವರು ನೀಡಿದ ಪಾತ್ರ ಹತ್ತಿರವಿದೆ ಎನಿಸಿದ ಕಾರಣ ಸುಲಭವಾಗಿ ನಿರ್ವಹಿಸಬಹುದು ಎನಿಸಿತು. ಹಾಗಾಗಿ ಪಾತ್ರ ಮಾಡಲು ಒಪ್ಪಿಕೊಂಡೆ.ನಾನು ನಾಗೇಶ್ ಅವರ ಅನಾಮಿಕ ಮತ್ತು ಇತರೆ ಕಥೆಗಳು' ಕಥಾ ಸಂಕಲನ ಓದಿದ್ದೆ. ಹಾಗಾಗಿ ಕತೆಯ ಬಗ್ಗೆ ಗೊತ್ತಿತ್ತು. ಅದನ್ನು ಆಧಾರವಾಗಿಸಿರುವ ಗೋಪಾಲ ಗಾಂಧಿ' ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿತ್ತು.

ಫೀಲ್ಡಿಗಿಳಿದು ಫುಟ್ಬಾಲ್ ಆಡಿದ ಸನ್ನಿ ನೋಡಿ ಅಭಿಮಾನಿಗಳು ಫಿದಾ

ಫೀಲ್ಡಿಗಿಳಿದು ಫುಟ್ಬಾಲ್ ಆಡಿದ ಸನ್ನಿ ನೋಡಿ ಅಭಿಮಾನಿಗಳು ಫಿದಾ

ಬಾಲಿವುಡ್ ನಟಿ ಸನ್ನಿ ಲಿಯೋನ್ ಬಣ್ಣದ ಲೋಕದಿಂದ ಆಚೆ ಬಂದು ಫುಟ್ಬಾಲ್ ಫೀಲ್ಡೆಗೆ ಇಳಿದ್ದಾರೆ. ಸನ್ನಿಲಿಯೋನ್ ಫುಲ್ ಬಾಲ್ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗೋಲ್ ಮೇಲೆ ಗೋಲ್ ಹೊಡೆದು ಸಖತ್ ಎಂಜಾಯ್ ಮಾಡಿದ್ದಾರೆ. ಸನ್ನಿ ಫುಟ್ಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಬುದಾಬಿಯಲ್ಲಿ ನಡೆಯುತ್ತಿರುವ ಟಿ 10 ಲೀಗ್ ಸಮಯದಲ್ಲಿ ಸನ್ನಿ ಫುಟ್ಬಾಲ್ ಆಡಿದ್ದಾರೆ. ದೆಹಲಿ ಬುಲ್ಸ್ ತಂಡಕ್ಕೆ ಚಿಯರ್ ಹೇಳಲು ಭಾಗಿಯಾಗಿದ್ದ ಸನ್ನಿ ಫುಟ್ಬಾಲ್ ಆಡಿ ಗಮನ ಸಳೆದಿದ್ದಾರೆ. ದೆಹಲಿ ತಂಡದ ಬ್ರಾಂಡ್ ಅಂಬಾಸಿಡರ್ ಆಗಿರುವ ಸನ್ನಿ ತಂಡವನ್ನು ಹುರಿದುಂಬಿಸಲು ಭಾಗಿಯಾಗಿದ್ದರು.

ಸಾವಿನ ಮನೆಯಲ್ಲಿ ನಕ್ಕು ಟ್ರೋಲಿಗರಿಗೆ ಆಹಾರವಾದ ನಟಿ ಕರೀನಾ ಕಪೂರ್

ಸಾವಿನ ಮನೆಯಲ್ಲಿ ನಕ್ಕು ಟ್ರೋಲಿಗರಿಗೆ ಆಹಾರವಾದ ನಟಿ ಕರೀನಾ ಕಪೂರ್

ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ತೈಮೂರ್ ಗೆ ಜನ್ಮ ನೀಡಿದ ನಂತರ 'ಗುಡ್ ನ್ಯೂಸ್' ಮತ್ತು 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕರೀನಾ ತೆರೆ ಮೇಲೆ ಬರದೆ ಸುಮಾರು ಒಂದು ವರ್ಷದ ಮೇಲಾಗಿದೆ. ಸದ್ಯ ಗುಡ್ ನ್ಯೂಸ್ ಟ್ರೈಲರ್ ಮೂಲಕ ಸದ್ದು ಮಾಡುತ್ತಿದ್ದ ಕರೀನಾ ಈಗ ಸಾವಿನ ಮನೆಯಲ್ಲಿ ನಕ್ಕು ಸುದ್ದಿಯಾಗಿದ್ದಾರೆ. ಇತ್ತೀಚಿಗೆ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ತಂದೆ ಕೊನೆಯುಸಿರೆಳೆದ್ದಾರೆ. ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ 90 ವರ್ಷದ ಮನೀಶ್ ತಂದೆ ನಿಧನರಾಗಿದ್ದಾರೆ. ಮಲ್ಹೋತ್ರಾ ಕುಟುಂಬ ಬಾಲಿವುಡ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.