Short News

ಫಿಟ್ನೆಸ್ ಗೆ ಈ ವ್ಯಾಯಾಮ ಅನುಸರಿಸಿ

ಫಿಟ್ನೆಸ್ ಗೆ ಈ ವ್ಯಾಯಾಮ ಅನುಸರಿಸಿ

ಈಜುವುದರಿಂದ ದೇಹಕ್ಕೆ ವರ್ಕೌಟ್ ಮಾತ್ರವಲ್ಲ ಮನಸ್ಸು ಕೂಡ ರಿಲ್ಯಾಕ್ಸ್ ಆಗಿರುತ್ತದೆ. ಇದೊಂದು ಸಂಪೂರ್ಣ ವ್ಯಾಯಾಮವಾಗಿದ್ದು, ಇದರಿಂದ ಡಿಪ್ರೆಷನ್ ಕಡಿಮೆಯಾಗುತ್ತದೆ. ಎರಡನೇಯದಾಗಿ ಭಾರವಾದ ವಸ್ತುಗಳು ಅಂದರೆ ಡಂಬಲ್ಸ್, ಎಲಾಸ್ಟಿಕ್ ಬಾಂಡ್ಸ್, ಭಾರವಾದ ಆಂಕಲ್ ಕಪ್ಸ್ ಗಳನ್ನು ಉಪಯೋಗಿಸಿ ವ್ಯಾಯಾಮ ಮಾಡುವುದು. ಇದರಿಂದ ದೇಹದ ಮಾಂಸಖಂಡಗಳು ಗಟ್ಟಿಯಾಗುತ್ತವೆ. ಇನ್ನು ದಿನವೂ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ದೆಹ ಮತ್ತು ಮನಸ್ಸಿಗೆ ಉಲ್ಲಾಸ ಸಿಗುತ್ತದೆ.
ದ್ವೀಪರಾಷ್ಟ್ರ ಸೆಷೆಲ್ಸ್ ಜೊತೆಗೂಡಿ ಓಪನ್‌ ಮಿಲಿಟರಿ ಬೇಸ್‌ ಸ್ಥಾಪಿಸಲು  ಮುಂದಾದ ಭಾರತ, ಚೀನಾಗೆ ಸೆಡ್ಡು

ದ್ವೀಪರಾಷ್ಟ್ರ ಸೆಷೆಲ್ಸ್ ಜೊತೆಗೂಡಿ ಓಪನ್‌ ಮಿಲಿಟರಿ ಬೇಸ್‌ ಸ್ಥಾಪಿಸಲು ಮುಂದಾದ ಭಾರತ, ಚೀನಾಗೆ ಸೆಡ್ಡು

ದಕ್ಷಿಣ ಚೀನ ಸಮುದ್ರ ವ್ಯಾಪ್ತಿ ಪ್ರದೇಶದಲ್ಲಿ ಚೀನಾ ತನ್ನ ಅಧಿಪತ್ಯ ಸ್ಥಾಪಿಸಲು ಹವಣಿಸುತ್ತಿದ್ದು, ಅದನ್ನು ತಡೆಯಲು ಅಮೆರಿಕ, ಭಾರತ ಪ್ರಯತ್ನ ಮಾಡುತ್ತಿವೆ. ಇತ್ತ, ಭಾರತ, ದಕ್ಷಿಣ ಆಫ್ರಿಕಾದ ದ್ವೀಪರಾಷ್ಟ್ರ ಸೆಷೆಲ್ಸ್‌ ಜತೆಗೂಡಿ ಹಿಂದೂ ಮಹಾಸಾಗರ ದ್ವೀಪಸಮೂಹದಲ್ಲಿ ಮುಕ್ತ ಸೇನಾ ನೆಲೆ (ಓಪನ್‌ ಮಿಲಿಟರಿ ಬೇಸ್‌) ಸ್ಥಾಪಿಸಲು ಸಿದ್ಧತೆ ನಡೆಸಿದೆ. 5 ಲಕ್ಷ ಚದರ ಮೈಲು ಉದ್ದದ ಕಡಲು ಪ್ರದೇಶವನ್ನು ರಕ್ಷಣೆ ಮಾಡುವುದು. ಅಕ್ರಮ ಮೀನುಗಾರಿಕೆ, ಮಾದಕ ವಸ್ತು ಸಾಗಣೆಗೆ ತಡೆ ಮತ್ತು ದಕ್ಷಿಣ ಆಫ್ರಿಕಾದ ಸೆಷಲ್ಸ್‌ನ ಸೇನಾಪಡೆಗೆ ಭಾರತದ ಸೇನಾ ಪಡೆಯಿಂದ ತರಬೇತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ರೂ.2400ಕ್ಕೆ ಆಂಡ್ರಾಯ್ಡ್ ಒರಿಯೊ(ಗೋ) ಲಾವಾ Z50 ಮಾರಾಟ

ರೂ.2400ಕ್ಕೆ ಆಂಡ್ರಾಯ್ಡ್ ಒರಿಯೊ(ಗೋ) ಲಾವಾ Z50 ಮಾರಾಟ

ಲಾವಾ Z50 ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಆಂಡ್ರಾಯ್ಡ್ ಒರಿಯೊ (ಗೋ ಆವೃತ್ತಿ)ಯ ಸ್ಮಾರ್ಟ್‌ಫೋನ್ ಆಗಿದ್ದು, ಕಳೆದ ತಿಂಗಳಿನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಲಾವಾ ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಟಾಪ್ ಎಂಡ್ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆ ಅನುಭವವನ್ನು ನೀಡಲಿದೆ ಎನ್ನಲಾಗಿದ್ದು, ಇದರಿಂದಾಗಿ ಶುದ್ಧ ಆಂಡ್ರಾಯ್ಡ್ ಬಳಕೆ ಮಾಡುವ ಬಯಕೆ ಇದ್ದವರು ಲಾವಾ Z50 ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಬೈಕ್ ಖರೀದಿಗೆ ಇದೊಂದು ಸುವರ್ಣಾವಕಾಶ ಎಂದರೇ ತಪ್ಪಾಗಲಾರದು. ಏಕೆಂದರೆ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.30,714ಕ್ಕೆ ಲಭ್ಯವಾಗಿವೆ. ಹೊಸ ನಮೂನೆಯ ಗುರುತರ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್‌ಗಳು ಒಟ್ಟು 3 ವಿವಿಧ ನಮೂನೆಗಳಲ್ಲಿ ಬಿಡುಗಡೆಗೊಂಡಿದ್ದು, ಹೊಸ ಮಾದರಿಗಳಲ್ಲಿ ಬಿಎಸ್-4 ಸೇರಿದಂತೆ ಎಎಚ್‍‌ಎ ಸೌಲಭ್ಯಗಳನ್ನು ಒದಗಿಸಿರುವ ಗುರುತರ ಬದಲಾವಣೆ ಎನ್ನಬಹುದು.