Short News

ಮೇಷ, ಮಿಥುನ, ಕುಂಭ ಈ 3 ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಕಷ್ಟ ಬರಲಿದೆ

ಮೇಷ, ಮಿಥುನ, ಕುಂಭ ಈ 3 ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಕಷ್ಟ ಬರಲಿದೆ

ಜ್ಯೋತಿಷಿಗಳು ನಕ್ಷತ್ರಗಳನ್ನು ನೋಡಿಕೊಂಡು ರಾಶಿಭವಿಷ್ಯ ಹೇಳುವರು. ಆದರೆ ಇದರಲ್ಲಿ ಎಲ್ಲವೂ ನಿಮ್ಮ ಮೇಲೆ ಪರಿಣಾಮ ಬೀರಬೇಕೆಂದಿಲ್ಲ. ಹೀಗಾಗಿ ಸ್ವಲ್ಪ ಮಟ್ಟಿಗೆ ಸಮಾಧಾನಪಡಿ. ಯಾಕೆಂದರೆ ಪ್ರತಿಯೊಬ್ಬರ ಜಾತಕವು ತುಂಬಾ ಭಿನ್ನವಾಗಿರುವುದು. ಉದಾಹರಣೆಗೆ ನಿಮ್ಮ ರಾಶಿಯು ಮಿಥುನವಾಗಿದ್ದು, ಕುಂಭ ಪ್ರಾಬಲ್ಯದೊಂದಿಗೆ, ವೃಷಭದಲ್ಲಿ ಬುಧ ಮತ್ತು ಕರ್ಕಾಟಕದಲ್ಲಿ ಚಂದ್ರನಿದ್ದರೆ...ನೀವು ಕೇವಲ ಮಿಥುನ ರಾಶಿಯವರಾಗಿರುವ ಕಾರಣದಿಂದ ಇದಕ್ಕೆ ಸಂಬಂಧಿಸಿರುವ ಪ್ರತಿಯೊಂದು ವಿಚಾರವು ನಿಮ್ಮ ಮೇಲೆ ಪರಿಣಾಮ ಬೀರಬೇಕೆಂದಿಲ್ಲ.

ಕೊಡಗು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯ

ಕೊಡಗು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯ

ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು , 12 ಜನ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 773 ಮನೆಗಳು ಭಾಗಶಃ ಹಾನಿಯಾಗಿದೆ. 123 ಕಿ.ಮೀ. ರಸ್ತೆ, 58 ಸೇತುವೆ, 278 ಸರ್ಕಾರಿ ಕಟ್ಟಡ, 3800 ವಿದ್ಯುತ್ ಕಂಬ ಹಾನಿಗೊಳಗಾಗಿವೆ. ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ ಎಂದರು.
ನನ್ನನ್ನು ಕಾಂಗ್ರೆಸ್‌ಗೆ ತಂದವರು ವಿಶ್ವನಾಥ್‌ ಅಲ್ಲ ಎಂದ ಸಿದ್ದರಾಮಯ್ಯ..!! ಏನ್ ಹೇಳಿದ್ರು ಗೊತ್ತಾ ?

ನನ್ನನ್ನು ಕಾಂಗ್ರೆಸ್‌ಗೆ ತಂದವರು ವಿಶ್ವನಾಥ್‌ ಅಲ್ಲ ಎಂದ ಸಿದ್ದರಾಮಯ್ಯ..!! ಏನ್ ಹೇಳಿದ್ರು ಗೊತ್ತಾ ?

ಗೆಳೆಯ ವಿಶ್ವನಾಥ್‌ಗೆ ಮೋಸ ಮಾಡಿದರು ಎಂಬುದು ಸಿದ್ದರಾಮಯ್ಯ ಮೇಲಿರುವ ಆರೋಪಗಳಲ್ಲಿ ಒಂದು. ಆದರೆ ಇದನ್ನು ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ವಿಶ್ವನಾಥ್ ಅವರು, ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ತಂದರು ಆದರೆ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರನ್ನು ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಎತ್ತರಕ್ಕೆ ಏರಿದರು ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿ ಅಪ್ರಸ್ತುತರಾಗಿಬಿಟ್ಟರು. ಆದರೆ ಸಿದ್ದರಾಮಯ್ಯ ಹೇಳುವ ಪ್ರಕಾರ ಇದು ಸುಳ್ಳಂತೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ತಂದವರು ವಿಶ್ವನಾಥ್ ಅಲ್ಲ ಅಹ್ಮದ್ ಪಟೇಲ್ ಎಂದು ಸ್ವತಃ ಅವರೇ ಹೇಳಿದ್ದಾರೆ.
ಸೆ.5ಕ್ಕೆ ಸಾರಿಗೆ ಇಲಾಖೆಯ ವಾಹನಗಳ ಬಹಿರಂಗ ಹರಾಜು

ಸೆ.5ಕ್ಕೆ ಸಾರಿಗೆ ಇಲಾಖೆಯ ವಾಹನಗಳ ಬಹಿರಂಗ ಹರಾಜು

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ತನಿಖೆ ನಡೆಸಿದಾಗಿ ವಶಪಡಿಸಿಕೊಂಡಿರುವ ವಾಹನಗಳನ್ನು ಸೆಪ್ಟೆಂಬರ್ 5 2018 ರಂದು ಬಹಿರಂಗ ಹರಾಜು ಪ್ರಕ್ರಿಯೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ. 14 ವಾಹನಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಹರಾಜಿಗಿರುವ ವಾಹನಗಳ ಪಟ್ಟಿಯನ್ನು ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಯಶವಂತಪುರ ಸಾರಿಗೆ ಅಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more