Short News

ತಕ್ಷಣಕ್ಕೆ ಹೊಳಪಿನ ತ್ವಚೆ ನೀಡುವ ಚಾಕಲೇಟ್ ಫೇಸ್ ಮಾಸ್ಕ್

ತಕ್ಷಣಕ್ಕೆ ಹೊಳಪಿನ ತ್ವಚೆ ನೀಡುವ ಚಾಕಲೇಟ್ ಫೇಸ್ ಮಾಸ್ಕ್

ಚಾಕಲೇಟ್ ತಿನ್ನುವುದು ಮಾತ್ರ ದೇಹಕ್ಕೆ ಹಿತ ಅಂದುಕೊಳ್ಳಬೇಡಿ ( ಡಾರ್ಕ್ ಚಾಕಲೇಟ್ ಅದರಲ್ಲಿ ಹೆಚ್ಚಿನ ಶೇಕಡಾ ಕೋಕೋ ಇರುತ್ತದೆ) . ಯಾವಾಗ ನೀವು ನಿಮ್ಮ ಚರ್ಮಕ್ಕೆ ಇದನ್ನು ಬಳಸುತ್ತೀರೋ ಆಗ ಕೂಡಲೇ ಒಂದು ವ್ಯತ್ಯಾಸವನ್ನು ಗಮನಿಸಲು ಸಾಧ್ಯವಾಗುತ್ತೆ. ನಿಮಗೆ ಸಾಫ್ಟ್ ಆದ, ಸ್ಮೂತ್ ಆದ ಮತ್ತು ಹೊಳೆಯುವ ತ್ವಚೆ ಪಡೆಯಲು ಇದು ನೆರವು ನೀಡುತ್ತೆ ಚಾಕಲೇಟ್ ನಲ್ಲಿ ಹಲವು ರೀತಿಯ ನ್ಯೂಟ್ರಿಯಂಟ್ಸ್ ಗಳಿದ್ದು ಇವು ನಿಮ್ಮ ಚರ್ಮದ ಫ್ರೀ ರ್ಯಾಡಿಕಲ್ ಗಳ ವಿರುದ್ದ ಸೆಣಸುತ್ತೆ ಮತ್ತು ಚರ್ಮವನ್ನು ಹೈಡ್ರೇಟ್ ಮಾಡುತ್ತೆ. ಅಷ್ಟೇ ಯಾಕೆ ನಿಮ್ಮ ಮುಖದಲ್ಲಿರುವ ಕಲೆಗಳನ್ನು ತೊಡೆದು ಹಾಕಿ,ಕಾಲಾಜಿನ್ ಉತ್ಪತ್ತಿಯನ್ನು ಉತ್ತೇಜಿಸುತ್ತದೆ.

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಆರ್‌ಇ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಆರ್‌ಇ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650

ದೇಶಿಯ ಮಾರುಕಟ್ಟೆಗಾಗಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಅಭಿವೃದ್ಧಿಗೊಳಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಹೊಸ ಬೈಕ್‌ಗಳನ್ನು ಮುಂಬರುವ ಜುಲೈ ಅಂತ್ಯಕ್ಕೆ ಇಲ್ಲವೇ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ. ಈ ಮಧ್ಯೆ ಚೆನ್ನೈ ಹೊರ ವಲಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಹೊಸ ಬೈಕ್‌ಗಳು ಡ್ಯುಯಲ್ ಟೋನ್ ಬಣ್ಣದೊಂದಿಗೆ ಪ್ರಿಮಿಯಂ ಟಚ್ ಪಡೆದಿರುವುದು ಖಚಿತವಾಗಿದೆ.
ಮೊಬೈಲ್ ಪ್ರತಿಬಿಂಬ ಕಂಪ್ಯೂಟರ್‌ನಲ್ಲಿ ಪಡೆಯುವುದು ಇನ್ಮುಂದೆ ಸುಲಭ!!

ಮೊಬೈಲ್ ಪ್ರತಿಬಿಂಬ ಕಂಪ್ಯೂಟರ್‌ನಲ್ಲಿ ಪಡೆಯುವುದು ಇನ್ಮುಂದೆ ಸುಲಭ!!

ಕೆಲವೇ ತಿಂಗಳ ಹಿಂದೆ ಮೈಕ್ರೋಸಾಫ್ಟ್ ತನ್ನ ವಾರ್ಷಿಕೋತ್ಸವ ಅಪ್ ಡೇಟ್ ವಿಂಡೋಸ್ 10 ನ್ನು ಬಿಡುಗಡೆಗೊಳಿಸಿದೆ. . ಆಪರೇಟಿಂಗ್ ಸಿಸ್ಟಮ್ ಗೆ ಇನ್ನಷ್ಟು ಟೂಲ್ಸ್ ಗಳನ್ನು ಸೇರಿಸಿ ಎಂಡ್ ಯ್ಯೂಸರ್ ಗೆ ಜೀವನ ಸುಲಭವಾಗುವಂತೆ ಮಾಡುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿತ್ತು. ವೈಶಿಷ್ಟ್ಯಗಳಾದ ಟೈಮ್ ಲೈನ್, ನಿಯರ್ ಬೈ ಶೇರಿಂಗ್, ಫೋಕಸ್ ಅಸಿಸ್ಟ್ ಇತ್ಯಾದಿಗಳನ್ನು ಇದರಲ್ಲಿ ಪರಿಚಯಿಸಲಾಗಿದೆ. ಇದರಲ್ಲಿ ತುಂಬಾ ಪ್ರಮುಖ ವೈಶಿಷ್ಟ್ಯವೊಂದನ್ನು ಸೇರಿಸಲಾಗಿದ್ದು ಅದನ್ನು ಇನ್ನು ಯಾರು ಗುರುತಿಸಿಲ್ಲ. ಅದುವೇ ನಿಮ್ಮ ಸ್ಮಾರ್ಟ್ ಫೋನ್ ಡಿಸ್ಪ್ಲೇಯ ಕನ್ನಡಿ ಬಿಂಬವನ್ನು ವೈಯರ್ ಲೆಸ್ ಆಗಿ ನಿಮ್ಮ ಪಿಸಿಯಲ್ಲಿ ಪಡೆಯುವುದು.

25 ವರ್ಷಗಳಿಂದ ಒಂದೇ ಸ್ಥಳದಲ್ಲಿದೆ ಮಂದಿರ ಮತ್ತು ಮಸೀದಿ, ಕೋಮು ಸಾಮರಸ್ಯದಿಂದ್ದಾರೆ ಇಲ್ಲಿಯ ಜನ

25 ವರ್ಷಗಳಿಂದ ಒಂದೇ ಸ್ಥಳದಲ್ಲಿದೆ ಮಂದಿರ ಮತ್ತು ಮಸೀದಿ, ಕೋಮು ಸಾಮರಸ್ಯದಿಂದ್ದಾರೆ ಇಲ್ಲಿಯ ಜನ

ಕಳೆದ 25 ವರ್ಷಗಳಿಂದ ಪಶ್ಚಿಮ ಬಂಗಾಳದ ಜಾರ್ಗಗ್ರಾಮ್ ಎಂಬ ಪ್ರದೇಶದ ಒಂದೇ ಸ್ಥಳದಲ್ಲಿ ಮಸೀದಿ ಮತ್ತು ದೇವಾಲಯಗಳಿದ್ದು ಅಲ್ಲಿನ ಜನ ಕೋಮು ಸೌಹಾರ್ಧತೆ ಮೆರೆದಿದ್ದಾರೆ. ಈ ಮಂದಿರದಲ್ಲಿ ಹಿಂದೂಗಳು ಶಿವನನ್ನು ಪೂಜಿಸುತ್ತಾರೆ ಹಾಗೂ ಮುಸಲ್ಮಾನರು ಪವಿತ್ರ ಖುರಾನ್ ಗ್ರಂಥವನ್ನು ಪಠಿಸುತ್ತಾರೆ. ನಾವು ಕಾಳಿ ಮಾತೆಯನ್ನು ನೋಡುತ್ತೇವೆ ಹಾಗೆಯೇ ನಮಾಜ್ ಕೂಡ ಮಾಡುತ್ತೇವೆ ಎಂದು ಅಲ್ಲಿಯ ಸ್ಥಳೀಯರೊಬ್ಬರು ತಿಳಿಸಿದ್ದಾರೆ. ನಾರಾಯಣ ಚಂದ್ರ ಆಚಾರ್ಯ ಎಂಬ ಬ್ರಾಹ್ಮಣ ಈ ಸ್ಥಳದ ಕೇರ್ ಟೇಕರ್ ಆಗಿದ್ದಾರೆ. ದಶಕಗಳಿಂದಲೂ ಇಲ್ಲಿ ಈ ಆಚರಣೆ ಜಾರಿಯಲ್ಲಿದ್ದು, ಯಾವುದೇ ಗಲಾಟೆಗಳು ನಡೆದಿಲ್ಲ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more