Short News

ಕೂದಲುದುರುವಿಕೆ ಮತ್ತು ಬೊಕ್ಕತಲೆಯನ್ನು ತಡೆಯಲು ಸಲಹೆಗಳು

ಕೂದಲುದುರುವಿಕೆ ಮತ್ತು ಬೊಕ್ಕತಲೆಯನ್ನು ತಡೆಯಲು ಸಲಹೆಗಳು

ಕೂದಲು ಉದುರುವಿಕೆ ಅನ್ನೋದು ಹೆಚ್ಚಿನ ಪುರುಷರು ಅನುಭವಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ನಿಜಕ್ಕೂ ಬಹಳ ಪೇಚಿಗೆ ಸಿಲುಕಿಸುವಂತಹ ಸಮಸ್ಯೆ. ಈ ಸಮಸ್ಯೆಯಿಂದ ಬಳಲುವ ಪುರುಷರು ದಿನದಿಂದ ದಿನಕ್ಕೆ ತಮ್ಮ ಕೂದಲನ್ನು ಕಳೆದುಕೊಳ್ಳುತ್ತಲೇ ಸಾಗುತ್ತಾರೆ. ಈ ಸಮಸ್ಯೆಯನ್ನು ಮನೆಮದ್ದುಗಳಿಂದ ಪರಿಹರಿಸಕೊಳ್ಳಬಹುದಾಗಿದ್ದು ಉದಾಹರಣೆಗೆ ಈರುಳ್ಳಿ ರಸ,ಬೀಟ್ರೋಟ್ ಮತ್ತು ಮೆಹಂದಿ ಪ್ಯಾಕ್, ದಾಸವಾಳದ ಹೂವುಗಳು, ತೆಂಗಿನ ಎಣ್ಣೆ ಇತ್ಯಾದಿಗಳು..ಕೂದಲುದುರುವಿಕೆ ಮತ್ತು ಬೊಕ್ಕತಲೆಯನ್ನು ತಡೆಯಲು ಸಲಹೆಗಳು

ಆತ್ಮಶ್ಲಾಘನೆ ಮಾಡಿಕೊಳ್ಳುವ ರಾಶಿಗಳು

ಆತ್ಮಶ್ಲಾಘನೆ ಮಾಡಿಕೊಳ್ಳುವ ರಾಶಿಗಳು

ಮೇಷ ರಾಶಿಯವರು ತುಂಬಾ ಆತ್ಮಶ್ಲಾಘನೆ ಮಾಡಿಕೊಳ್ಳುವವರು. ಇವರಲ್ಲಿ ಪರಿತ್ಯಾಗ ಸಮಸ್ಯೆಗಳಿರುವುದು. ಸಮಾಜದಲ್ಲಿ ಹೆಸರು ಪಡೆಯಲು ಇವರು ಹೆಚ್ಚು ವ್ಯಸ್ತರಾಗಿರುವರು. ಇವರು ಹೆಚ್ಚಾಗಿ ಸ್ವಹಿತಾಸಕ್ತಿಯತ್ತ ದೃಷ್ಟಿಹರಿಸಿರುವರು. ಇವರು ಬೇರೆಯವರು ಭಾವನೆ ಹಾಗೂ ಆಲೋಚನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮದೇ ದಾಟಿಯಲ್ಲಿ ಬದುಕುವರು. ಇನ್ನು ಸಿಂಹದ ಅಧಿಪತಿ ಸೂರ್ಯ ಮತ್ತು ಇವರು ಯಾವಾಗಲೂ ಆಕರ್ಷಣೆಯ ಕೇಂದ್ರವಾಗಿರಲು ಬಯಸುವರು. ಇವರು ಕೇಂದ್ರವಾಗಿರಲು ಬಯಸುವರು ಮತ್ತು ಸ್ವಾಅಭಿವ್ಯಕ್ತಿಯ
ಶಕ್ತಿಯನ್ನು ಸಮಾಜಕ್ಕೆ ತೋರಿಸಲು ಪ್ರಯತ್ನಿಸುವರು.

ಮುಗಿದ ವಿಶ್ವಾಸ ಮತ, ಬಿರುಸುಗೊಂಡ ಸಂಪುಟ ರಚನೆ ಕಸರತ್ತು

ಮುಗಿದ ವಿಶ್ವಾಸ ಮತ, ಬಿರುಸುಗೊಂಡ ಸಂಪುಟ ರಚನೆ ಕಸರತ್ತು

ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಗೆದ್ದಿದ್ದಾರೆ. ಇದೀಗ ಸರಕಾರ ಭದ್ರವಾಗುತ್ತಿದ್ದಂತೆ ಬಹು ನಿರೀಕ್ಷಿತ ಸಂಪುಟ ರಚನೆ ಕಸರತ್ತು ಬಿರುಸು ಪಡೆದುಕೊಂಡಿದೆ.

ಸಂಪುಟ ರಚನೆ ಸಂಬಂಧ ಇಂದು ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಬೆಂಗಳೂರಿನಲ್ಲಿ ಸಭೆ ನಡೆಸಿದರು.

ನಾಳೆ ನವದೆಹಲಿಗೆ ಕುಮಾರಸ್ವಾಮಿ ಮತ್ತು ಪರಮೇಶ್ವರ್ ತೆರಳಲಿದ್ದು ಪ್ರಮುಖವಾಗಿ ಸಂಪುಟ ರಚನೆ ಸಂಬಂಧ ಚರ್ಚೆ ಮುಗಿಸಿಕೊಂಡ ವಾಪಸಾಗಲಿದ್ದಾರೆ.

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಬಹುತೇಕರಿಗೆ ತಿಳಿದಿರುವುದಿಲ್ಲ. ಏಕೆಂದರೆ, ಫೇಸ್‌ಬುಕ್‌ನಲ್ಲಿನ ಎಲ್ಲ ಬಳಕೆದಾರರು ಬೇಕಾದಾಗಲೆಲ್ಲ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ಪಿಡಿಎಫ್ ಫೈಲ್ ಶೇರ್ ಮಾಡಬಹುದಾದರೂ, ಫೇಸ್‌ಬುಕ್‌ ವಾಣಿಜ್ಯ ಪುಟ ಮತ್ತು ಗ್ರೂಪ್‌ನಲ್ಲಿ ಸಾಧ್ಯ.ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more