Short News

ತುಳಸಿಯ ಸಹಾಯದಿಂದ ತೂಕ ಇಳಿಸಿಕೊಳ್ಳಬಹುದೇ?

ತುಳಸಿಯ ಸಹಾಯದಿಂದ ತೂಕ ಇಳಿಸಿಕೊಳ್ಳಬಹುದೇ?

'Plant Foods For Human Nutrition' ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಪವಿತ್ರ ತುಳಸಿಯ ಬಳಕೆಯಿಂದ ರಕ್ತದಲ್ಲಿ ಗ್ಲುಕೋಸ್ ಮಟ್ಟ, ಮೇಧಸ್ಸು ಹಾಗೂ ಕೊಲೆಸ್ಟ್ರಾಲ್ ಮಟ್ಟಗಳಲ್ಲಿ ಇಳಿಕೆಗೆ ನೆರವಾಗುತ್ತದೆ. ನಮ್ಮ ಭಾರತದಲ್ಲಿಯೇ ನಡೆಸಿದ ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ತುಳಸಿಯನ್ನು ಆರೋಗ್ಯಕರ ಆಹಾರಕ್ರಮದೊಂದಿಗೆ ಬಳಸಿದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ಅಲ್ಲದೇ, ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಪರಾವಲಂಬಿ ಕ್ರಿಮಿ ನಿರೋಧಕ ಗುಣ ಹಲವು ಸೋಂಕುಗಳಿಂದ ರಕ್ಷಿಸುತ್ತದೆ, ಏರಿದ ಜ್ವರವನ್ನು ಕಡಿಮೆ ಮಾಡುತ್ತದೆ.
ಮಹಿಳೆಯರಿಗೆ ಶಬರಿಮಲೆ ಪ್ರವೇಶ ನಿರ್ಬಂಧ, ದೇವಾಲಯದ ಸ್ಪಷ್ಟನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದ ಸುಪ್ರೀಂ

ಮಹಿಳೆಯರಿಗೆ ಶಬರಿಮಲೆ ಪ್ರವೇಶ ನಿರ್ಬಂಧ, ದೇವಾಲಯದ ಸ್ಪಷ್ಟನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದ ಸುಪ್ರೀಂ

ಮಹಿಳೆಯರಿಗೆ 41ದಿನಗಳ ಕಾಲ ಕಠಿನ ವ್ರತ(ದೇಹದಂಡನೆ)ಕೈಗೊಳ್ಳುವುದು ಅಸಾಧ್ಯ ಎಂಬ ಕಾರಣಕ್ಕೆ ಶಬರಿಮಲೆ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿತ್ತು. ಇದಕ್ಕೆ ಉತ್ತರಿಸಿರುವ ಸುಪ್ರೀಂ ಕೋರ್ಟ್ 41 ದಿನಗಳ ಕಾಲ ಇಂದ್ರಿಯಗಳನ್ನು ನಿಗ್ರಹಿಸಬೇಕು ಎಂಬ ಷರತ್ತನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದೆ.ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಿಕ ಪೀಠ. ದೇವರ ಮೇಲಿನ ಭಕ್ತಿಯಿಂದ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಿದೆ.
ಅಧಿವೇಶನ ಸಂದರ್ಭದಲ್ಲೇ ಜಿಎಸ್ಟಿ ಸಭೆ, ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ಬೆಲೆ ಇಳಿಕೆ?

ಅಧಿವೇಶನ ಸಂದರ್ಭದಲ್ಲೇ ಜಿಎಸ್ಟಿ ಸಭೆ, ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ಬೆಲೆ ಇಳಿಕೆ?

ಮುಂಗಾರು ಅಧಿವೇಶನದಲ್ಲಿ ಮಹತ್ವದ ಮಸೂದೆ ಮಂಡನೆ,ಅವಿಶ್ವಾಸ ನಿರ್ಣಯ ಎದುರಿಸುತ್ತಿರುವ ಕೇಂದ್ರವು,ಜನತೆಗೆ ಶನಿವಾರದ ಬಳಿಕ ಕೊಂಚ ನೆಮ್ಮದಿಯ ಸುದ್ದಿ ನೀಡುವ ಸಾಧ್ಯತೆ ಹೆಚ್ಚಿದೆ.ಜುಲೈ 21ರಂದು ದೆಹಲಿಯಲ್ಲಿ ನಡೆಯಲಿರುವ ಜಿಎಸ್​ಟಿ ಮಂಡಳಿ ಸಭೆ ಸೇರಲಿದೆ. ನ್ಯಾಪ್ಕಿನ್,ಕೈಮಗ್ಗ,ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಹೊರೆ ಇಳಿಸುವ ಸಾಧ್ಯತೆ ಕಂಡು ಬಂದಿದೆ.ಜಿಎಸ್​ಟಿ ಜಾರಿಯಾಗಿ ಒಂದು ವರ್ಷವಾಗಿದ್ದು, ಇಲ್ಲಿ ತನಕ 328 ಸರಕು, ಸೇವೆಗಳ ಮೇಲಿನ ತೆರಿಗೆ ಇಳಿಸಲಾಗಿದೆ. ಇದೀಗ ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ತೆರಿಗೆ ಪ್ರಮಾಣ ಕಡಿಮೆ ಮಾಡುವ ಪ್ರಸ್ತಾವನೆ ಮಂಡಳಿ ಮುಂದಿದೆ.
ಅಧಿವೇಶನ ಅಪ್ಡೇಟ್ಸ್ : ಅವಿಶ್ವಾಸ ನಿರ್ಣಯ ಉತ್ತರ ನೀಡಲು ಎನ್ಡಿಎ ಸಜ್ಜು

ಅಧಿವೇಶನ ಅಪ್ಡೇಟ್ಸ್ : ಅವಿಶ್ವಾಸ ನಿರ್ಣಯ ಉತ್ತರ ನೀಡಲು ಎನ್ಡಿಎ ಸಜ್ಜು

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ ಶುಕ್ರವಾರ ಮಧ್ಯಾಹ್ನ ಚರ್ಚೆ, ಭಾಷಣ ನಡೆಯಲಿದೆ. ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ವಿಪಕ್ಷಗಳು, ಆಡಳಿತಾರೂಢ ಎನ್ಡಿಎ ಸರ್ಕಾರ ಬೀಳಿಸಲು ಸಾಧ್ಯವಿಲ್ಲದಿದ್ದರೂ ಇದು ಪ್ರತಿಷ್ಠೆಯ ನಿರ್ಣಯವಾಗಿದೆ. ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ 314 ಸದಸ್ಯ ಬಲ ಹೊಂದಿದೆ. ಬಹುಮತ ಸಾಬೀತು ಪಡಿಸಲು ಮ್ಯಾಜಿಕ್ ನಂಬರ್ 268. 'ಬಿಜೆಪಿ ಕೇವಲ ಎನ್‌ಡಿಎ ಮೈತ್ರಿಕೂಟದ ಮತಗಳು ಮಾತ್ರವಲ್ಲ, ಬೇರೆ ಪಕ್ಷಗಳಿಂದಲೂ ಮತಗಳನ್ನು ಪಡೆಯಲಿದೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more