Short News

ಪ್ರತಿದಿನ ತುಟಿಗೆ ಲಿಪ್‌ಸ್ಟಿಕ್‌ ಹಚ್ಚುತ್ತೀರಾ? ಜೋಕೆ!

ಪ್ರತಿದಿನ ತುಟಿಗೆ ಲಿಪ್‌ಸ್ಟಿಕ್‌ ಹಚ್ಚುತ್ತೀರಾ? ಜೋಕೆ!

ಪ್ರತಿದಿನ ಲಿಪ್‌ಸ್ಟಿಕ್ ಬಳಸುತ್ತಿದ್ದರೆ ತುಟಿ ಒಣಗುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಲಿಪ್‌ಸ್ಟಿಕ್‌ನಿಂದ ತುಟಿ ಹಾಳಾಗಬಾರದೆಂದು ನೀವು ಬಯಸುವುದಾದರೆ ಈ ಟಿಪ್ಸ್ ಪಾಲಿಸುವುದು ಉತ್ತಮ. ಎರಡು ವರ್ಷಕ್ಕಿಂತ ಹಳೆಯದಾದ ಲಿಪ್‌ಸ್ಟಿಕ್‌ ಬಳಸಬಾರದು. ವಾರದಲ್ಲಿ ಎರಡು ಬಾರಿ ತುಟಿಗೆ ಏನೂ ಹಚ್ಚಬೇಡಿ. ದಿನಾ ಲಿಪ್‌ಸ್ಟಿಕ್‌ ಹಚ್ಚುವವರಿಗೆ ಒಂದು ದಿನ ಹಚ್ಚದೆ ಇದ್ದರೆ ಏನೋ ಒಂದು ರೀತಿಯ ಸಮಾಧಾನವಿರುವುದಿಲ್ಲ. ಅಂತವರು ಲಿಪ್‌ಗ್ಲೋಸ್ ಹಚ್ಚಿ. ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಲಿಪ್‌ಸ್ಟಿಕ್‌ ಹಚ್ಚಬೇಡಿ. ಲಿಪ್‌ಸ್ಟಿಕ್‌ ಹಚ್ಚುವ ಮುನ್ನ ಲಿಪ್‌ಬಾಮ್‌ ಹಚ್ಚಿ.
ಬೆಟ್ಟಿಂಗ್ ನಡೆಯಲೆಂದು ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದರಾ ಯೋಗೇಶ್ವರ್?

ಬೆಟ್ಟಿಂಗ್ ನಡೆಯಲೆಂದು ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದರಾ ಯೋಗೇಶ್ವರ್?

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬರುವ ಹಿಂದಿನ ದಿನ ಸುದ್ದಿಗೋಷ್ಠಿ ನಡೆಸಿದ್ದ ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ 'ನಾನು ಚುನಾವಣೆ ಸೋಲುತ್ತೇನೆ' ಎಂದಿದ್ದರು ಆದರೆ ಅವರು ಹೀಗೇಕೆ ಹೇಳಿದ್ದರು ಎಂಬುದು ಈಗ ಬಹಿರಂಗವಾಗಿದೆ. ಜೆಡಿಎಸ್ ಪಕ್ಷದವರು ಬೆಟ್ಟಿಂಗ್‌ಗೆ ಬರಲಿ ಎಂಬ ಉದ್ದೇಶದಿಂದಲೇ ಸಿಪಿ ಯೋಗೇಶ್ವರ್ ಅವರು ಈ ರೀತಿ ಸುದ್ದಿಗೋಷ್ಠಿ ನಡೆಸಿ ಸೋಲುವುದಾಗಿ ಹೇಳಿದ್ದರು ಎನ್ನಲಾಗುತ್ತಿದ್ದು, ಇದಕ್ಕೆ ಫುಷ್ಠಿ ನೀಡುವಂತೆ ಯೋಗೇಶ್ವರ್ ಅವರು ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರನೊಬ್ಬನ ಬಳಿ ದೂರವಾಣಿ ಮೂಲಕ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿದೆ.
ಜಯನಗರ, ಆರ್.ಆರ್. ನಗರ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ

ಜಯನಗರ, ಆರ್.ಆರ್. ನಗರ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ

ಬೆಂಗಳೂರಿನ ಜಯನಗರ ಮತ್ತು ರಾಜರಾಜೇಶ್ವರಿ ನಗರ ಚುನಾವಣೆಗಳಿಗೆ ಬಿಜೆಪಿ ಉಸ್ತುವಾರಿಗಳನ್ನು ನೇಮಿಸಿದೆ.ಕರ್ನಾಟಕ ಶಾಸನಸಭೆಯಲ್ಲಿ 104 ಸ್ಥಾನಗಳನ್ನು ಗೆದ್ದು ಬಹುಮತಕ್ಕೆ ಬೇಕಾದ 113 ಸ್ಥಾನಗಳಿಗಿಂತ 9 ಸ್ಥಾನಗಳನ್ನು ಕಡಿಮೆ ಹೊಂದಿರುವ ಬಿಜೆಪಿಗೆ ಈ ಚುನಾವಣೆಗಳು ಬಹಳ ಮುಖ್ಯವಾಗಿವೆ. ಹೀಗಾಗಿ ಶತಾಯ ಗತಾಯ ಈ ಎರಡೂ ಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಹೊರಟಿರುವ ಬಿಜೆಪಿ ಜಯನಗರಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ರಾಜರಾಜೇಶ್ವರಿ ನಗರಕ್ಕೆ ಮತ್ತೋರ್ವ ಕೇಂದ್ರ ಸಚಿವ ಡಿವಿ ಸದಾನಂದ ಗೌಡರನ್ನು ಉಸ್ತುವಾರಿಯಾಗಿ ನೇಮಿಸಿದೆ.
ಬಿಜೆಪಿ ಚಾಣಾಕ್ಯನ ಮುಂದಿನ ತಂತ್ರಗಾರಿಕೆ ಏನಿರಬಹುದು?

ಬಿಜೆಪಿ ಚಾಣಾಕ್ಯನ ಮುಂದಿನ ತಂತ್ರಗಾರಿಕೆ ಏನಿರಬಹುದು?

ಮೂಲಗಳ ಪ್ರಕಾರ ಎಚ್.ಡಿ.ಕುಮಾರಸ್ವಾಮಿ ಸಂಪುಟ ರಚನೆ ಬಳಿಕ ಕಾಂಗ್ರೆಸ್‍ನಲ್ಲಿ ಭಿನ್ನಮತ ದೊಡ್ಡ ಮಟ್ಟಿಗೆ ಭುಗಿಲೇಳುವುದು ಖಚಿತ. ಏಕೆಂದರೆ 78 ಶಾಸಕರ ಪೈಕಿ ಹೆಚ್ಚೆಂದರೆ 20 ಮಂದಿಗೆ ಮಾತ್ರ ಸಚಿವ ಸ್ಥಾನ ದೊರೆಯಲಿದೆ. ಈ ಸಂದರ್ಭದಲ್ಲಿ ಹೈಕಮಾಂಡ್ ಬಹುತೇಕ ಹಸ್ತಕ್ಷೇಪ ಮಾಡಲಿದೆ. ಈ ಭಿನ್ನಮತವನ್ನು ಅವಲೋಕಿಸಿಕೊಂಡು ಬಿಜೆಪಿ ಮುಂದಿನ ಹೆಜ್ಜೆ ಇಡಲಿದೆ. ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದು ಕಡೆ ಅಮಿತ್ ಶಾ ಅವರು ಏನೇ ಆಗಲಿ ಕರ್ನಾಟಕದಲ್ಲಿ ಸರ್ಕಾರ ರಚಿಸಲೇಬೇಕು ಎನ್ನುವ ಜಿದ್ದಿಗೆ ಅಮಿತ್ ಶಾ ಬಿದ್ದಿದ್ದಾರೆ.