Short News

ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಸಮಸ್ಯೆಗೆ ಅಂಗೈಯಲ್ಲೇ ಇದೆ ಮದ್ದುಗಳು

ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಸಮಸ್ಯೆಗೆ ಅಂಗೈಯಲ್ಲೇ ಇದೆ ಮದ್ದುಗಳು

ಮಹಿಳೆಯರ ಸೌಂದರ್ಯವನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಕಣ್ಣಿನಡಿಯಲ್ಲಿ ಕಾಣಿಸಿಕೊಳ್ಳುವಂತಹ ಕಪ್ಪು ವೃತ್ತಗಳು ಯಾವುದೇ ಅಪಾಯವನ್ನು ಉಂಟು ಮಾಡದೆ ಇದ್ದರೂ ಅದರ ನಿವಾರಣೆ ಮಾಡಬೇಕು. ಹಾರ್ಮೋನು ಬದಲಾವಣೆ, ಆರೋಗ್ಯ ಸಂಬಂಧಿ ಸಮಸ್ಯೆ, ಅಸಂಯೋಜಿತ ಆಹಾರ ಕ್ರಮ ಇತ್ಯಾದಿಗಳು ಕಣ್ಣಿನ ಕೆಳಗೆ ಕಪ್ಪು ವೃತ್ತ ಉಂಟು ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಆದರೆ ಈ ಕಪ್ಪು ವೃತ್ತಗಳು ನಮ್ಮ ಅಭ್ಯಾಸದಿಂದಾಗಿ ಮೂಡಿದೆ ಎಂದರೆ ಅಚ್ಚರಿಯಾಗಬಹುದು. ಮೇಕಪ್ ತೆಗೆಯುವ ರೀತಿಯಿಂದಲೂ ಕಣ್ಣ ಕೆಳಗಿನ ಚರ್ಮದ ಮೇಲೆ ಪರಿಣಾಮವಾಗಬಹುದು.

ಮಿಂಚಿದ ಕನ್ನಡಿಗ ಗೌತಮ್ , ರಾಜಸ್ಥಾನಕ್ಕೆ ರೋಚಕ ಜಯ

ಮಿಂಚಿದ ಕನ್ನಡಿಗ ಗೌತಮ್ , ರಾಜಸ್ಥಾನಕ್ಕೆ ರೋಚಕ ಜಯ

ಭಾನುವಾರ ರಾತ್ರಿ ನಡೆದ ಟಿ-20 ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ತಂಡ ಮೂರು ವಿಕೆಟ್‌ಗಳ ಅಂತರದಿಂದ ಮುಂಬೈ ಇಂಡಿಯನ್ ತಂಡವನ್ನು ಸೋಲಿಸಿದೆ. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ 20ಓವರ್‌ಗಳಲ್ಲಿ 7ವಿಕೆಟ್‌ಗಳಿಗೆ 167ರನ್ ಗಳಿಸಿತು. ಗೆಲುವಿನ ಗುರಿ ಬೆನ್ನು ಹತ್ತಿದ ರಾಜಸ್ಥಾನ 19.4ಓವರ್‌ಗಳಲ್ಲಿ 7ಕ್ಕೆ 168ರನ್ ಗಳಿಸಿ ಗೆಲುವು ಕಂಡಿತು. ಕನ್ನಡಿಗ ಕೃಷ್ಣಪ್ಪ ಗೌತಮ್ ಕ್ರೀಸ್ ಗಿಳಿದಾಗ ತಂಡದ ಗೆಲುವಿಗೆ 17ಎಸೆತಗಳಲ್ಲಿ 43ರನ್‌ಗಳ ಅಗತ್ಯವಿತ್ತು. ಆಗ 11ಎಸೆತಗಳಲ್ಲಿ 33ರನ್ (4ಬೌಂಡರಿ, 2ಸಿಕ್ಸರ್)ಸಿಡಿಸಿ,ತಂಡದ ಹೀರೊ ಎನಿಸಿಕೊಂಡರು.
ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ, ಇಂದಿನ (ಏಪ್ರಿಲ್ 23)  ದರ ನೋಡಿ..

ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ, ಇಂದಿನ (ಏಪ್ರಿಲ್ 23) ದರ ನೋಡಿ..

ದೆಹಲಿ: ಪೆಟ್ರೋಲ್: 74.50 / ಲೀಟರ್, ಡೀಸೆಲ್: 65.75 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.20 / ಲೀಟರ್ , ಡೀಸೆಲ್: 68.45 / ಲೀಟರ್. ಮುಂಬೈ: ಪೆಟ್ರೋಲ್: 82.35/ ಲೀಟರ್ , ಡೀಸೆಲ್: 70.01 / ಲೀಟರ್. ಚೆನ್ನೈ: ಪೆಟ್ರೋಲ್: 77.29 / ಲೀಟರ್ , ಡೀಸೆಲ್: 69.37 / ಲೀಟರ್. ಬೆಂಗಳೂರು: ಪೆಟ್ರೋಲ್: 75.68 / ಲೀಟರ್, ಡೀಸೆಲ್: 66.86 / ಲೀಟರ್. ಹೈದರಾಬಾದ್: ಪೆಟ್ರೋಲ್: 78.89/ ಲೀಟರ್, ಡೀಸೆಲ್: 71.43 / ಲೀಟರ್.
ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ಮೇಷ:ದೊಡ್ಡ ಕಾರ್ಯಗಳಿಗೆ ಕೈ ಹಾಕಬೇಡಿ. ವೃಷಭ:ಮಕ್ಕಳ ಪ್ರಗತಿಯಿಂದ ಸಂತಸ. ಮಿಥುನ:ಪ್ರವಾಸ ಮುಂದೂಡುವುದು ಒಳಿತು. ಕಟಕ:ಹಿತಶತ್ರುಗಳ ಕಾಟ ಹೆಚ್ಚಳದಿಂದ ಮನಸ್ಸಿನ ನೆಮ್ಮದಿ ಹಾಳು. ಸಿಂಹ:ಆರ್ಥಿಕ ಒತ್ತಡ ಹೆಚ್ಚಾದರೂ ಬೇರೆ ಮೂಲಗಳಿಂದ ಆದಾಯ ಬರಲಿದೆ. ಕನ್ಯಾ:ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ. ತುಲಾ:ಕಷ್ಟದ ದಿನಗಳು ಕರಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ವೃಶ್ಚಿಕ:ಈ ದಿನ ಸ್ವಲ್ಪ ತಾಳ್ಮೆ ವಹಿಸಿರಿ. ಧನುಸ್ಸು:ವೈಯಕ್ತಿಕ ಆರೋಗ್ಯದ ಕಡೆ ಗಮನವಿರಲಿ. ಮಕರ:ಇಚ್ಛಿಸಿದ ಕಾರ್ಯಗಳು ಕೈಗೂಡಲಿದೆ. ಕುಂಭ:ಕಚೇರಿಯಲ್ಲಿ ಮನಸ್ತಾಪ ಮಾಡಿಕೊಳ್ಳದಿರಿ. ಮೀನ:ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕೆಡಲಿದೆ.