Short News

ನೀವು ಮೂಗು ಚುಚ್ಚಿಸಿಕೊಂಡಿದ್ದೀರಾ? ಹಾಗಿದ್ದರೆ ಈ ಸಲಹೆಗಳನ್ನು ಓದಲೇಬೇಕು..

ನೀವು ಮೂಗು ಚುಚ್ಚಿಸಿಕೊಂಡಿದ್ದೀರಾ? ಹಾಗಿದ್ದರೆ ಈ ಸಲಹೆಗಳನ್ನು ಓದಲೇಬೇಕು..

ಮೂಗಿಗೆ ಮೂಗುತಿ ಹಾಕಿಸಿಕೊಳ್ಳುವುದು ಕೇವಲ ಶೋಕಿಗಾಗಿಯೋ ಅಥವಾ ಟ್ರೆಂಡ್ ಗಾಗಿಯೋ ಮಾತ್ರವಲ್ಲ. ಇದು ಅವರ ವ್ಯಕ್ತಿತ್ವವನ್ನೂ ಕೂಡ ಬಿಂಬಿಸುತ್ತದೆ. ಮತ್ತು ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. ಸಣ್ಣ ಮೂಗುತಿಯೇ ಇರಬಹುದು ಅಥವಾ ಚಂಕಿಚಂಕಿಯಾಗಿರುವ ನೋಸ್ ರಿಂಗ್ ಗಳೇ ಇರಬಹುದು, ಅದೊಂಥರಾ ಆಕರ್ಷಣೆ.
ಯಾರಾದರೂ ಅಟ್ರಾಕ್ಟೀವ್ ಆಗಿರುವ ಮೂಗುತಿ ಧರಿಸಿದ್ದರೆ ಒಮ್ಮೆ ನಮ್ಮ ಕಣ್ಣು ಅವರ ಮೇಲೆ ಹೋಗುತ್ತದೆ ಅಲ್ವಾ? ಹೆಚ್ಚಿನ ಹುಡುಗಿಯರು, ಮಹಿಳೆಯರು ಮೂಗುತಿ ಧರಿಸಲು ಇಷ್ಟಪಡುತ್ತಾರೆ ಹಾಗಾಗಿ ಮೂಗು ಚುಚ್ಚಿಸಿಕೊಳ್ಳುತ್ತಾರೆ.

ಗಡಿಯಲ್ಲಿ 14,000 ಬಂಕರ್ ಗಳ ನಿರ್ಮಾಣಕ್ಕೆ ಕೇಂದ್ರದಿಂದ ಹಸಿರು ನಿಶಾನೆ

ಗಡಿಯಲ್ಲಿ 14,000 ಬಂಕರ್ ಗಳ ನಿರ್ಮಾಣಕ್ಕೆ ಕೇಂದ್ರದಿಂದ ಹಸಿರು ನಿಶಾನೆ

ಜಮ್ಮು-ಕಾಶ್ಮೀರದ ಭಾರತ-ಪಾಕ್‌ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 14,000 ಬಂಕರ್ ಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ಪಾಕಿಸ್ತಾನದ ನಡೆಸುವ ಅಪ್ರಚೋದಿತ ಗುಂಡಿನ ದಾಳಿಯಿಂದ ಗಡಿ ಗ್ರಾಮದಲ್ಲಿರುವ ಜನರ ಪ್ರಾಣ ರಕ್ಷಣೆ ಇದರ ಉದ್ದೇಶವಾಗಿದೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ 13,029 ವೈಯಕ್ತಿಕ ಬಂಕರ್‌ಗಳು ಮತ್ತು 1,431 ಸಮುದಾಯ ಬಂಕರ್‌ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಪೂಂಚ್‌ ಮತ್ತು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 7,298 ಬಂಕರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
2019ರಲ್ಲಿ ಇಂಡಿಯನ್ ಸ್ಕೌಟ್ ಎಫ್‍‍ಟಿಆರ್ 1200 ಬೈಕ್ ಬಿಡುಗಡೆ ನಿಶ್ಚಿತ

2019ರಲ್ಲಿ ಇಂಡಿಯನ್ ಸ್ಕೌಟ್ ಎಫ್‍‍ಟಿಆರ್ 1200 ಬೈಕ್ ಬಿಡುಗಡೆ ನಿಶ್ಚಿತ

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್‍‍ಸನ್‍‍ಗೆ ಪೈಪೋಟಿ ನೀಡುತ್ತಿರುವ ಇಂಡಿಯನ್ ಮೋಟಾರ್‍‍ಸೈಕಲ್ ಕಂಪೆನಿ ಹೊಸದೊಂದು ರೇಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ, ಶೀಘ್ರದಲ್ಲೆ ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸಲಿದ್ದು ಮುಂದಿನ ವರ್ಷ ಇಂಡಿಯನ್ ಸ್ಕೌಟ್ ಎಫ್‍‍ಟಿಆರ್ 1200 ಬೈಕ್ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ವಿದೇಶದ ಮಾರುಕಟ್ಟೆಯಲ್ಲಿ ಎಫ್‍‍ಟಿಆರ್ 1200 ಬೈಕ್ ಫ್ಲಾಟ್ ಟ್ರ್ಯಾಕ್ ರೇಸಿಂಗ್ ಟೋರ್ನಮೆಂಟ್‍‍ನಲ್ಲಿ ಪ್ರಶಸ್ತಿಯನ್ನು ಗೆದಿದ್ದು, ಅದೇ ಪ್ಲಾಟ್‍‍ಫಾರ್ಮ್‍ನಲ್ಲಿ ಎಫ್‍‍ಟಿಆರ್ 1200 ಇದೀಗ ಮರುಕಟ್ಟೆಗೆ ಕಾಲಿಡಲು ಸಜ್ಜುಗೊಳ್ಳುತ್ತಿದೆ.
ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಜೀಪ್ ಸಂಸ್ಥೆಯು ಕಂಪಾಸ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಬೆಡ್‌ರಾಕ್ ಎನ್ನುವ ಲಿಮಿಟೆಡ್ ಎಡಿಷನ್ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು,ವಿಶೇಷ ಬಣ್ಣದ ಆಯ್ಕೆ ಮತ್ತು ಹೊಸ ಫೀಚರ್ಸ್‌ಗಳನ್ನು ಹೊತ್ತು ಬಂದಿರುವ ಈ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.17.53ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಸ್ಪೋರ್ಟ್ ವಿನ್ಯಾಸಗಳನ್ನು ಹೊತ್ತು ಬಂದಿರುವ ಬೆಡ್‌ರಾಕ್ ಎಡಿಷನ್ ಕಾರುಗಳು ಜೀಪ್ ಕಂಪಾಸ್ ಸ್ಪೆಷಲ್ ಎಡಿಷನ್‌ಗಳಲ್ಲೇ ವಿಶೇಷ ಎನ್ನಿಸಲಿದ್ದು, ನ್ಯೂ ಜನರೇಷನ್ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳು ಭಾರತದಲ್ಲಿ ಇದುವರೆಗೆ 25000ಎಡಿಷನ್ ಮಾರಾಟವಾದ ಹಿನ್ನೆಲೆಯಲ್ಲಿ ಬೆಡ್‌ರಾಕ್ ಎಡಿಷನ್ ಕಾರನ್ನು ಹೊರತಂದಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more