Short News

ದೇಹದಲ್ಲಾಗುವ ತುರಿಕೆಗಳು ನಿಮ್ಮ ಜೀವನದ ಭವಿಷ್ಯವನ್ನು ಹೇಳುವುದು

ದೇಹದಲ್ಲಾಗುವ ತುರಿಕೆಗಳು ನಿಮ್ಮ ಜೀವನದ ಭವಿಷ್ಯವನ್ನು ಹೇಳುವುದು

ಪುರಾತನ ಕಾಲದಿಂದಲೂ ನಮ್ಮ ಶಾಸ್ತ್ರ ಹಾಗೂ ಜ್ಯೋತಿಷ್ಯ ವಿಚಾರದಲ್ಲಿ ನಂಬಿಕೆಯನ್ನು ಹೊಂದಿದ್ದೇವೆ. ಏಕೆಂದರೆ ಅವು ನಮ್ಮ ಭವಿಷ್ಯದ ಆಗುಹೋಗುಗಳನ್ನು ನಿರ್ಧರಿಸುತ್ತವೆ ಎಂದು ಹೇಳಲಾಗುತ್ತದೆ. ಪುರಾಣದ ಕಾಲದಲ್ಲಿ ಅದೆಷ್ಟೋ ವಿಚಾರಗಳನ್ನು ಕೆಲವು ವಸ್ತುನಿಷ್ಠ ಸಂಕೇತಗಳಿಂದಲೇ ನಿರ್ಧರಿಸುತ್ತಿದ್ದರು ಎನ್ನಲಾಗುವುದು. ಇಂತಹ ಭವಿಷ್ಯಗಳನ್ನು ಕೇವಲ ವಸ್ತು ಅಥವಾ ಸನ್ನಿವೇಶಗಳಿಂದಷ್ಟೇ ನಿರ್ಧರಿಸುವುದಿಲ್ಲ. ನಮ್ಮ ಶರೀರದಲ್ಲಾಗುವ ಕೆಲವು ಬದಲಾವಣೆ, ತುರಿಕೆ ಹಾಗೂ ಸೆಳೆತಗಳ ಆಧಾರದ ಮೇಲೆಯೂ ಹೇಳಲಾಗುತ್ತದೆ ಎನ್ನಲಾಗುವುದು.

ಲಿಂಗಾಯತ ಪ್ರತ್ಯೇಕ ಧರ್ಮ : ಶಾಮನೂರು ಶಿವಶಂಕರಪ್ಪ ಹೇಳುವುದೇನು?

ಲಿಂಗಾಯತ ಪ್ರತ್ಯೇಕ ಧರ್ಮ : ಶಾಮನೂರು ಶಿವಶಂಕರಪ್ಪ ಹೇಳುವುದೇನು?

ಕರ್ನಾಟಕ ಸರ್ಕಾರ ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡುತ್ತಿದ್ದ ಇಬ್ಬರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಅವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವ ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಜ್ಞರ ವರದಿ ಮೂಲೆ ಗುಂಪಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಮುಖಂಡರನ್ನು ಕರೆದು ಈ ಬಗ್ಗೆ ವಿವರವಾಗಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು. ಸರ್ಕಾರದ ನಿರ್ಧಾರ ಎಲ್ಲರಿಗೂ ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ.

ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ ಆಪಲ್!!

ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ ಆಪಲ್!!

ದುಬಾರಿ ವೆಚ್ಚದ ಮೊಬೈಲ್ ಗಳ ರಾಜನ ಸ್ಥಾನದಲ್ಲಿ ನಿಲ್ಲುವ ಆಪಲ್ ಮೊಬೈಲ್ ಸಂಸ್ಥೆ ತನ್ನ ಹೊಸ ಆವೃತ್ತಿಯ ಮೊಬೈಲ್ ಗಳಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸುವವಾಗ ಅಥವಾ ಇಷ್ಟವಾಗದ ಹಳೆಯ ಫೀಚರ್ ಗಳನ್ನು ತೆಗೆದುಹಾಕಲು ಯಾವುದೇ ಹಿಂದೇಟು ಹಾಕುತ್ತಿಲ್ಲ. ಸದಾ ಬಳಕೆದಾರರಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದ ಆಪಲ್, ಹೆಡ್‌ಫೋನ್ ನ ಜ್ಯಾಕ್ ತೆಗೆದುಹಾಕುವಾಗ ಅಥವಾ ಟಚ್ ಐಡಿಯ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುವಾಗ ಸಾಧನದ ಭವಿಷ್ಯದ ಬಗ್ಗೆ ಯೋಚಿಸಿದೆ. ಹಾಗೆಯೇ ಆಪಲ್ ಸಂಸ್ಥೆ ಮಾರುಕಟ್ಟೆಯ ಎದುರಾಳಿಗಳನ್ನು ಸಡ್ಡು ಹೊಡೆಯಲು ಸದ್ದಿಲ್ಲದೇ ಮತ್ತೊಂದು ದೀರ್ಘಾವಧಿಯ ತಂತ್ರಜ್ಞಾನವನ್ನು ಸಜ್ಜು ಮಾಡುತ್ತಿದೆ.

ಇತಿಹಾಸವನ್ನು ಬದಲಾಯಿಸಲಿದೆ ಒಪ್ಪೋ F7 ಸೆಲ್ಫಿ  ಸ್ಮಾರ್ಟ್‌ಫೋನ್ !

ಇತಿಹಾಸವನ್ನು ಬದಲಾಯಿಸಲಿದೆ ಒಪ್ಪೋ F7 ಸೆಲ್ಫಿ ಸ್ಮಾರ್ಟ್‌ಫೋನ್ !

ಫೋಟೋಗ್ರಫಿಗೆ ಹೆಚ್ಚಿನ ಆದ್ಯತೆ ನೀಡುವಂತಹ ಫೋನ್‌ಗಳನ್ನು ವಿನ್ಯಾಸ ಮಾಡುತ್ತಿರುವ ಒಪ್ಪೋ,ಈ ಬಾರಿ ಮತ್ತೊಂದು ಬೆಸ್ಟ್ ಸೆಲ್ಫಿ ಎಕ್ಸ್‌ಫರ್ಟ್‌ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ. ಮಾರುಕಟ್ಟೆಗೆ ಈಗಾಗಲೇ ಬೆಸ್ಟ್ ಸೆಲ್ಪಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವ ಒಪ್ಪೋ, ಶೀಘ್ರವೇ ಒಪ್ಪೋ F7 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಇತಿಹಾಸವನ್ನು ಬದಲಾವಣೆ ಮಾಡಲಿದೆ ಎನ್ನುವ ಮಾತು ಕೇಳಿಬಂದಿದೆ. ಇದರಲ್ಲಿ ಸೆಲ್ಪಿ ತೆಗೆಯುವ ಸಲುವಾಗಿ ಮುಂಭಾಗದಲ್ಲಿ 25MPಕ್ಯಾಮೆರಾವನ್ನು ಅವಳಡಿಸಲಾಗಿದ್ದು. ಇದರೊಂದಿಗೆ ಕೃತಕ ಬುದ್ದಿಮತ್ತೆಯನ್ನು ನೀಡಲಾಗಿದೆ.