Short News

'ಮೊಳಕೆಯೊಡೆದ ಬೆಳ್ಳುಳ್ಳಿಯ' ಉಪಯೋಗ

'ಮೊಳಕೆಯೊಡೆದ ಬೆಳ್ಳುಳ್ಳಿಯ' ಉಪಯೋಗ

ಮೊಳಕೆಯೊಡೆದ ಬಳಿಕ ಬೆಳ್ಳುಳ್ಳಿಯಲ್ಲಿ ಕೆಲವು ಆಂಟಿ ಆಕ್ಸಿಡೆಂಟುಗಳು ಉತ್ಪತ್ತಿಯಾಗುತ್ತವೆ. ಇವು ರಕ್ತದ ಸಂಚಾರವನ್ನು ಸುಗಮಗೊಳಿಸುತ್ತದೆ. ತನ್ಮೂಲಕ ಹೃದಯದ ಕೆಲಸವನ್ನು ಸುಲಭವಾಗಿಸಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಫೈಟೋ ನ್ಯೂಟ್ರಿಯೆಂಟುಗಳು ಮೊಳಕೆಯೊಡೆದ ಬಳಿಕ ಇನ್ನಷ್ಟು ಹೆಚ್ಚುವ ಕಾರಣ ನಿಯಮಿತವಾಗಿ ಮೊಳಕೆಯೊಡೆದ ಬೆಳ್ಳುಳ್ಳಿಯ ಸೇವನೆಯಿಂದ ಹಲವು ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಇನ್ನು ಚರ್ಮದಲ್ಲಿ ನೆರಿಗೆ ಬೀಳುವ ಸಾಧ್ಯತೆ ತಡವಾಗುತ್ತಾ ಹೋಗುತ್ತದೆ. ಜತೆಗೆ ಹೃದಯ ಸ್ತಂಭನವನ್ನು ತಡೆಗಟ್ಟುತ್ತದೆ.
ಪ್ರೀತಿಸುವ ಅಭಿಮಾನಿಗಳ ಜೊತೆ 'ಜೋಡಿಹಕ್ಕಿ'ಯ 300ರ ಸಂಭ್ರಮ

ಪ್ರೀತಿಸುವ ಅಭಿಮಾನಿಗಳ ಜೊತೆ 'ಜೋಡಿಹಕ್ಕಿ'ಯ 300ರ ಸಂಭ್ರಮ

ಹಳ್ಳಿಗಾಡಿನ ಹಸಿರ ಮಧ್ಯೆ ಅರಳಿ ನಿಲ್ಲೋ ಜೋಡಿಹಕ್ಕಿ. ಮುಖ್ಯ ಪಾತ್ರಧಾರಿಗಳಾದ ಪೈಲ್ವಾನ್ ರಾಮಣ್ಣನ ಮುಗ್ಧ ಪ್ರೀತಿ, ಜಾನಕಿ ಟೀಚರ್ ಮುದ್ದು ಮಾತುಗಳ ಮೂಲಕವೇ ವೀಕ್ಷಕರ ಮನಗೆದ್ದಿರುವ ಧಾರಾವಾಹಿ. ಕರ್ನಾಟಕದುದ್ದಕ್ಕೂ ಜೋಡಿಹಕ್ಕಿ ಧಾರಾವಾಹಿ ಅಪಾರ ಅಭಿಮಾನಿ ಬಳಗವನ್ನೇ ಗಳಿಸಿ, ಸದ್ಯ, ಯಶಸ್ವಿ 300 ಸಂಚಿಕೆಗಳನ್ನು ಪೂರೈಸಿದೆ. ಕಿರುತೆರೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಧಾರಾವಾಹಿ ತಂಡವೊಂದು ತನ್ನ ಅಭಿಮಾನಿಗಳಿಗಾಗೇ ಒಂದು ದಿನವನ್ನು ಮೀಸಲಿಟ್ಟು ಅವರಿಗಾಗಿ ವೇದಿಕೆಯೊಂದನ್ನು ನಿರ್ಮಿಸಿ 300ರ ಸಂಭ್ರಮನ್ನು ತನ್ನ ಅಭಿಮಾನಿಗಳೊಟ್ಟಿಗೇ ಆಚರಿಸಿದೆ.
ಕನಕಪುರ : ಡಿಕೆ ಶಿವಕುಮಾರ್ ವಿರುದ್ಧ ನಂದಿನಿ ಗೌಡ ಸ್ಪರ್ಧೆ

ಕನಕಪುರ : ಡಿಕೆ ಶಿವಕುಮಾರ್ ವಿರುದ್ಧ ನಂದಿನಿ ಗೌಡ ಸ್ಪರ್ಧೆ

ರಾಮನಗರ ಜಿಲ್ಲೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಕೊನೆಗೂ ಅಂತಿಮಗೊಳಿಸಿರುವ BJP, ಸೋಮವಾರದಂದು ಅಭ್ಯರ್ಥಿಯನ್ನು ಘೋಷಿಸಿದೆ. ಇಂಧನ ಸಚಿವ ಡಿ. ಕೆ ಶಿವಕುಮಾರ್ ಅವರ ವಿರುದ್ಧ ಸ್ಪರ್ಧಿಸಲು ನಂದಿನಿ ಗೌಡ ಅವರು ಸಿದ್ಧವಾಗಿದ್ದಾರೆ. ಕನಕಪುರ ತಾಲೂಕಿನ ಕಡಹಳ್ಳಿ ನಿವಾಸಿಯಾಗಿರುವ ನಂದಿನಿ ಗೌಡ ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಆದರೆ, ಇತ್ತೀಚಿಗೆ JDS ತೊರೆದು, BJP ಸೇರಿಕೊಂಡಿದ್ದರು. ಇದಕ್ಕೆ CPಯೋಗೇಶ್ವರ್ ಕಾರಣ ಎಂದರೆ ತಪ್ಪಾಗಲಾರದು. ಡಿಕೆ ಶಿವಕುಮಾರ್ ಅವರ ವಿರುದ್ಧ ಪ್ರಬಲ ಸ್ಪರ್ಧಿಯನ್ನು ನಿಲ್ಲಿಸಲು ಸ್ಥಳೀಯರಾದ ನಂದಿನಿ ಗೌಡ ಅವರ ಹೆಸರನ್ನು CPY ಸೂಚಿಸಿದ್ದಾರೆ.
`ಕೆಜಿಎಫ್' ಹಾಲಿವುಡ್ ಲೆವೆಲ್‍ನ ಸಿನಿಮಾ

`ಕೆಜಿಎಫ್' ಹಾಲಿವುಡ್ ಲೆವೆಲ್‍ನ ಸಿನಿಮಾ

ಯಶ್ ಅಭಿನಯದ `ಕೆಜಿಎಫ್' ಚಿತ್ರ ರಿಲೀಸ್ ಗೆ ಯಾಕೆ ಅಷ್ಟೊಂದು ವಿಳಂಬವಾಗುತ್ತಿದೆ ಎಂದರೆ, ಅದು ಹಾಲಿವುಡ್ ಲೆವೆಲ್‍ನ ಸಿನಿಮಾ ಎಂಬ ಉತ್ತರ ಆ ಚಿತ್ರದ ನಾಯಕ ಯಶ್ ಅವರಿಂದ ಬರುತ್ತದೆ. `ಶೂಟಿಂಗ್ ಕೆಲಸ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಅದಕ್ಕೆ ಸರಿಯಾಗಿ ಬಜೆಟ್ ಕೂಡಾ ಏರುತ್ತಿದೆ ಎಂದು ಚಿತ್ರತಂಡ ಹೇಳಿದೆ. ಅಷ್ಟೊಂದು ಖರ್ಚು ಬೇಕಾ ಎಂಬ ಪ್ರಶ್ನೆ ಬರಬಹುದು. ಆದರೆ, ಚಿತ್ರದ ಪ್ರತಿ ಶಾಟನ್ನು ಬಹಳ ಚೆನ್ನಾಗಿ ತಯಾರಿಸಲಾಗಿದೆ. ಯಾವುದನ್ನೂ ರಾಜಿ ಮಾಡಿಕೊಳ್ಳದೆಯೇ ಮಾಡಲಾಗುತ್ತಿದೆ.