Short News

ಊಟವಾದ ಬಳಿಕ ನೀರು ಕುಡಿಯಲು ಎಷ್ಟು ಹೊತ್ತು ಕಾಯಬೇಕು?

ಊಟವಾದ ಬಳಿಕ ನೀರು ಕುಡಿಯಲು ಎಷ್ಟು ಹೊತ್ತು ಕಾಯಬೇಕು?

ಊಟದ ಬಳಿಕ ಮಾತ್ರವಲ್ಲ, ಊಟಕ್ಕೂ ಮೊದಲು ಅಥವಾ ಊಟದ ನಡುವೆಯೂ ನೀರು ಕುಡಿಯಬಾರದು! ಈ ಮಾಹಿತಿಯನ್ನು ಅರಗಿಸಿಕೊಳ್ಳಲು ಈಗ ಈ ಅಭ್ಯಾಸಕ್ಕೆ ಒಳಗಾಗಿರುವವರಿಗೆ ಕಷ್ಟವಾಗಬಹುದು, ಆದರೆ ದಿನಂಪ್ರತಿ ಇದನ್ನು ಅನುಸರಿಸುತ್ತಾ ಬಂದರೆ ಇದು ಅಸಾಧ್ಯವೇನಲ್ಲ! ಈ ಮಾಹಿತಿ ಓದಿದ ಬಳಿಕ ಈ ವ್ಯಕ್ತಿಗಳ ಮನದಲ್ಲಿ ಈ ಪ್ರಶ್ನೆ ಮಾತ್ರ ಮೂಡಿಯೇ ಇರುತ್ತದೆ. ಅದೆಂದರೆ: ಊಟದ ಬಳಿಕ ತಕ್ಷಣ ನೀರು ಕುಡಿಯಬಾರದು ಸರಿ, ಆದರೆ ಊಟದ ಬಳಿಕ ಎಷ್ಟು ಹೊತ್ತು ಬಿಟ್ಟು ಕುಡಿಯಬೇಕು? ಸರಳವಾಗಿ ಹೇಳುವುದಾದರೆ ಊಟದ ಬಳಿಕ ಸುಮಾರು ಅರ್ಧ ಗಂಟೆಯಾದರೂ ನೀರು ಕುಡಿಯದೇ, ಆ ಬಳಿಕ ಕುಡಿಯಬಹುದು.

ಮಹಿಳೆಯರು ಹೊಂದಾಣಿಕೆ ಮಾಡಿಕೊಳ್ಳದ ಆರು ಸಂಗತಿಗಳು

ಮಹಿಳೆಯರು ಹೊಂದಾಣಿಕೆ ಮಾಡಿಕೊಳ್ಳದ ಆರು ಸಂಗತಿಗಳು

ಸಂಬಂಧವೆನ್ನುವುದು ಎರಡು ಚಕ್ರಗಳಿದ್ದಂತೆ. ಇದು ಒಂದೇ ರೀತಿಯಲ್ಲಿ ಸಾಗಿದರೆ ಮಾತ್ರ ಗಾಡಿಯು ಮುಂದೆ ಹೋಗುವುದು. ಅದೇ ರೀತಿ ನೀವು ಸಂಗಾತಿಗೆ ಹೊಂದಿಕೊಂಡು ಹೋಗಬೇಕು. ಆದರೆ ಇದರರ್ಥ ನೀವು ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಜೀವನದಲ್ಲಿ ಮುಂದೆ ಸಾಗಬೇಕು ಎಂದಲ್ಲ ಅಥವಾ ನಿಮ್ಮ ಜೀವನದ ಬೇಕುಬೇಡಗಳನ್ನು ಬಲಿಕೊಡಬೇಕೆಂದಲ್ಲ. ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಅನಗತ್ಯವಾಗಿ ನೀವು ಪ್ರಾಬಲ್ಯ ಮೆರೆಯಬೇಡಿ ಅಥವಾ ಮೆರೆಸಲು ಬಿಡಬೇಡಿ. ನೀವು ಏನು ಮತ್ತು ನಿಮಗೆ ಏನು ಬೇಡ ಎನ್ನುವುದನ್ನು ನೀವು ಸ್ಪಷ್ಟಪಡಿಸಿಕೊಳ್ಳಿ.

ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಬೃಹತ್ ಜನಾಗ್ರಹ ಸಮಾವೇಶ

ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಬೃಹತ್ ಜನಾಗ್ರಹ ಸಮಾವೇಶ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಾಸನ ರಚಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೆಚ್ಚುತ್ತಿದ್ದು, ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ 'ಬೃಹತ್ ಜನಾಗ್ರಹ' ಸಭೆ ನಡೆಸಲು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ನಿರ್ಧರಿಸಿದೆ. ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಮುಖಂಡ ಎಂ.ಬಿ.ಪುರಾಣಿಕ್, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 4 ಕಡೆ ಸಮಾವೇಶ ನಡೆಯಲಿದ್ದು, ಮಂಗಳೂರು ವಿಭಾಗದ ನಾಲ್ಕು ಕಡೆ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಮಂಗಳೂರು ವಿಭಾಗದ ನಾಲ್ಕು ಕಡೆ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ರಫೇಲ್‌ ಡೀಲ್‌, ರಾಹುಲ್ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದ ಡಸಾಲ್ಟ್ ಸಿಇಓ

ರಫೇಲ್‌ ಡೀಲ್‌, ರಾಹುಲ್ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದ ಡಸಾಲ್ಟ್ ಸಿಇಓ

ರಫೇಲ್‌ ಒಪ್ಪಂದಕ್ಕಾಗಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯ ಆಯ್ಕೆ ನಮ್ಮದೇ ಆಗಿತ್ತು ಹೊರತು, ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ. ಮಾತ್ರವಲ್ಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳುತ್ತಿರುವುದೆಲ್ಲ ಸುಳ್ಳು ಎಂದು ರಫೇಲ್‌ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್‌ ಟ್ರ್ಯಾಪಿಯರ್ ಹೇಳಿದ್ದಾರೆ. 'ಭಾರತ ಮತ್ತು ಫ್ರಾನ್ಸ್‌ ನಡುವಿನ ರಫೇಲ್‌ ಫೈಟರ್‌ ಜೆಟ್‌ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ರಾಹುಲ್ ಅವರ ಆರೋಪಗಳು ಸಂಪೂರ್ಣ ಸುಳ್ಳು . ಈ ಡೀಲ್ ಬಗ್ಗೆ ನಾನು ಈ ಹಿಂದೆ ಮಾಡಿದ್ದ ಘೋಷಣೆಗಳು, ನೀಡಿದ್ದ ಹೇಳಿಕೆಗಳು ಸತ್ಯ ಎಂದು ಟ್ರ್ಯಾಪಿಯರ್ ಹೇಳಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more