Short News

ಸೂರ್ಯ ಗ್ರಹಣ ರಾಶಿಚಕ್ರದ ಮೇಲೆ ಯಾವ ಪರಿಣಾಮ ಬೀರುವುದು ನೋಡಿ...

ಸೂರ್ಯ ಗ್ರಹಣ ರಾಶಿಚಕ್ರದ ಮೇಲೆ ಯಾವ ಪರಿಣಾಮ ಬೀರುವುದು ನೋಡಿ...

ಭಾಗಶಃ ಸೂರ್ಯಗ್ರಹಣವು ಇಂದು ಭಾರತದೆಲ್ಲೆಡೆ ಕಾಣಿಸಿಕೊಳ್ಳುವುದು. ಖಗೋಳದಲ್ಲಿ ಗೋಚರವಾಗುವ ಈ ವಿದ್ಯಮಾನ ಪ್ರತಿಯೊಂದು ರಾಶಿಚಕ್ರದ ಮೇಲೆ ಗಮನಾರ್ಹ ಪರಿಣಾಮ ಬೀರುವುದು. ಇದರಿಂದ ಅನೇಕ ಋಣಾತ್ಮಕ ಪರಿಣಾಮವನ್ನು ಅನುಭವಿಸಬೇಕಾಗುವುದು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸಿದ್ದಾರೆ. ಕರ್ಕ ಮತ್ತು ಮಕರ ರಾಶಿಯ ಅಕ್ಷರೇಖೆಯ ಮೇಲೆ ಗ್ರಹಣವು ಉದ್ಭವವಾಗಿದೆ. ಇಂದು ಉಂಟಾದ ಬದಲಾವಣೆಯು 2020ರ ವರೆಗೂ ಎಲ್ಲಾ ರಾಶಿಯವರ ಮೇಲೆ ಪ್ರಭಾವ ಇರುವುದು ಎಂದು ಹೇಳಲಾಗುವುದು. ಸೂತಕ ಎನ್ನುವ ಭಾವನೆಯನ್ನು ನೀಡುವ ಗ್ರಹಣವು ಈ ಭಾರಿ ಭಾಗಶಃ ಎಲ್ಲಾ ಕಡೆ ಕಾಣಿಸಿಕೊಳ್ಳಲಿದೆ. ಇದರ ಪರಿಣಾಮ ಯಾವ ಬಗೆಯಲ್ಲಿ ಇರುತ್ತದೆ.

ದಿ ವಿಲನ್ ಚಿತ್ರದ ಎರಡನೇ ಸಾಂಗ್ ಟಿಕ್... ಟಿಕ್... ಟಿಕ್... ರಿಲೀಸ್

ದಿ ವಿಲನ್ ಚಿತ್ರದ ಎರಡನೇ ಸಾಂಗ್ ಟಿಕ್... ಟಿಕ್... ಟಿಕ್... ರಿಲೀಸ್

ಚಂದನವನದ ಬಹುನಿರೀಕ್ಷಿತ ಚಿತ್ರ ದಿ ವಿಲನ್. ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ರವರು ಅಭಿನಯಿಸುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಭಾರೀ ಹವಾ ಸೃಷ್ಟಿ ಮಾಡಿದೆ. ಈಗ ಚಿತ್ರದ 2ನೇ ಹಾಡನ್ನು ರಿಲೀಸ್ ಮಾಡಿದೆ ಚಿತ್ರತಂಡ. 'ಟಿಕ್... ಟಿಕ್...ಟಿಕ್​​' ಅನ್ನೋ ಸಾಲುಗಳಿಂದ ಪ್ರಾರಂಭವಾಗುವ ಈ ಸಾಂಗ್​ಗೆ ಪ್ರಸಿದ್ಧ ಗಾಯಕ ಕೈಲಾಸ್​ ಖೇರ್​, ಕನ್ನಡದ ವಿಜಯ್ ಪ್ರಕಾಶ್​ ಹಾಗೂ ನಿರ್ದೇಶಕ ಪ್ರೇಮ್ ಅವರು ಧ್ವನಿಯಾಗಿದ್ದಾರೆ. ನಿನ್ನೆ ಮೊನ್ನೆ ಬಂದವರೆಲ್ಲ ನಂಬರ್​ ಒನ್ ಅಂತಾರೋ.. ಅವರವರೇ ಸಂಘ ಕಟ್ಕೋಂಡು ಬಿರುದು ಹಿಡಕೊಂಡ ನಿಂತವರೋ ಎನ್ನುವ ಸಾಲುಗಳು ಹಾಡಿನಲ್ಲಿವೆ.
ಈ 4 ರಾಶಿಯವರು ಎಲ್ಲಾ ವಿಷಯವನ್ನೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳುವರು

ಈ 4 ರಾಶಿಯವರು ಎಲ್ಲಾ ವಿಷಯವನ್ನೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳುವರು

ಜೀವನ ಎನ್ನುವುದು ದೇವರು ಕೊಟ್ಟಿರುವ ಕೊಡುಗೆ. ಅದನ್ನು ಯಾವ ರೀತಿ ಜೀವಿಸುತ್ತೇವೆ ಎನ್ನುವುದು ಮುಖ್ಯ. ಸಮಾಜದಲ್ಲಿ ಒಂದು ಒಳ್ಳೆಯ ಹೆಸರು ಮಾಡಿದರೆ ಅದರಿಂದ ಜೀವನ ಸಾರ್ಥಕವಾಗುವುದು. ಕೆಲವರಿಗೆ ಮಾತ್ರ ಜೀವನದ ಬಗ್ಗೆ ಗೊತ್ತು ಗುರಿ ಎನ್ನುವುದೇ ಇರಲ್ಲ, ಆದರೆ ಇನ್ನು ಕೆಲವರು ಜೀವನವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ತಮ್ಮ ಗುರಿ ಸಾಧಿಸುವರು. ಇದಕ್ಕೆ ಪ್ರಮುಖವಾಗಿ ಅವರ ರಾಶಿಚಕ್ರಗಳು ಕಾರಣವಾಗಿದೆ. ಇಂತಹ ರಾಶಿಯವರು ಜೀವನದ ಬಗ್ಗೆ ತುಂಬಾ ತೀವ್ರವಾಗಿ ಗಮನಹರಿಸುವರು. ಆ ರಾಶಿಗಳು ಇವರೇ ನೋಡಿ- ವೃಶ್ಚಿಕ, ಮಕರ, ಕರ್ಕಾಟಕ, ಮೀನ

ಹರಕೆ ತೀರಿಸಲು ಶಬರಿಮಲೆಗೆ ಹೊರಟ ಸಚಿವ ಡಿ.ಕೆ.ಶಿವಕುಮಾರ್‌

ಹರಕೆ ತೀರಿಸಲು ಶಬರಿಮಲೆಗೆ ಹೊರಟ ಸಚಿವ ಡಿ.ಕೆ.ಶಿವಕುಮಾರ್‌

ಕೆಲವು ತಿಂಗಳುಗಳಿಂದ ಸತತ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಇದೀಗ ಮಾಲೆಧಾರಿಗಳಾಗಿ ಶಬರಿಮಲೆಗೆ ಹೊರಟಿದ್ದಾರೆ. ನಿನ್ನೆಯಷ್ಟೆ ಕೆ.ಆರ್.ಎಸ್.ಗೆ ಬಾಗಿನ ಅರ್ಪಿಸಿ ಮಂಡ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಸಂಜೆ ವೇಳೆಗೆ ಮೈಸೂರಿನಲ್ಲಿ ಮಾಲೆಧರಿಸಿ, ಇಡುಮುಡಿ ಹೊತ್ತು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ. ಸಚಿವರಿಗೆ ಕೆಲವು ಆಪ್ತರು ಜೊತೆಯಾಗಿದ್ದಾರೆ. ಇಡುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಮಲೆ ಏರಿರುವ ಸಚಿವರು, ತಮ್ಮ ಈ ಧಾರ್ಮಿಕ ಯಾತ್ರೆಯ ಹಲವು ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more