Short News

ಮೇ ತಿಂಗಳಲ್ಲಿ ಅದೃಷ್ಟವು ಈ ರಾಶಿಯವರಿಗೆ ಬೆನ್ನಿಗಂಟಿಕೊಂಡೇ ಇರುತ್ತೆ

ಮೇ ತಿಂಗಳಲ್ಲಿ ಅದೃಷ್ಟವು ಈ ರಾಶಿಯವರಿಗೆ ಬೆನ್ನಿಗಂಟಿಕೊಂಡೇ ಇರುತ್ತೆ

ತುಲಾ ರಾಶಿಯವರಿಗೆ ಈ ವರ್ಷ ವಿದ್ಯಾಲಕ್ಷ್ಮೀಯ ಕೃಪಾಕಟಾಕ್ಷ ಬಹಳವಾಗಿ ಇರುತ್ತದೆ. ಹಾಗಾಗಿ ಎಜುಕೇಷನ್ ವಿಚಾರದಲ್ಲಿ ಇವರದ್ದು ಈ ಬಾರಿ ಮೇಲುಗೈ.IAS ಮತ್ತು UPSC ಪರೀಕ್ಷೆಗಳನ್ನು ಎದುರಿಸುವವರಿಗೆ ಈ ತಿಂಗಳು ಒಳ್ಳೆಯ ಸುದ್ದಿ ಬರಲಿದೆ. ಆದರೆ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ನೀಡಬೇಕಾಗಬಹುದು. ಸಣ್ಣ ಆರೋಗ್ಯ ಸಮಸ್ಯೆಯೂ ದೊಡ್ಡದಾಗಬಹುದು. ಹಣಕಾಸಿನ ವಿಚಾರದಲ್ಲಿ ಮತ್ತು ಆಧ್ಯಾತ್ಮಿಕವಾಗಿ ಬಹಳ ದೊಡ್ಡ ಮಟ್ಟದ ಬೆಳವಣಿಗೆಗಳಿವೆ. ಅದೃಷ್ಟ ಲಕ್ಷ್ಮೀ ನಿಮ್ಮ ಜೊತೆಗಿರುತ್ತಾಳೆ.
ದ್ವಾದಶ ರಾಶಿಗಳ ಇಂದಿನ (ಮೇ 20) ದಿನ ಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಮೇ 20) ದಿನ ಭವಿಷ್ಯ

ಮೇಷ:ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ಪರದಾಡುವಿರಿ. ವೃಷಭ:ಆದಾಯ-ಖರ್ಚು ಸಮವಾಗಿರುತ್ತದೆ. ಮಿಥುನ:ವಿರೋಧಿಗಳಿಂದ ತೊಂದರೆ ಎದುರಿಸುವಿರಿ. ಕಟಕ:ಯಾವುದೋ ಒಂದು ರೀತಿಯ ಭಯ ಕಾಡುತ್ತದೆ. ಸಿಂಹ:ಷೇರು ಮಾರು ಕಟ್ಟೆಯಲ್ಲಿ ಹಣ ಹೂಡುವುದ ರಿಂದ ಲಾಭ ಪಡೆಯುತ್ತೀರಿ. ಕನ್ಯಾ:ಸಮಾಜ ಸೇವಕರಿಂದ ಉತ್ತಮ ಕೆಲಸ-ಕಾರ್ಯಗಳನ್ನು  ಮಾಡಿಸಿಕೊಳ್ಳುವಿರಿ. ತುಲಾ:ಪ್ರೇಮಿಗಳು ಕಾನೂನಿನ ಇಕ್ಕಟ್ಟಿನಲ್ಲಿ ಸಿಲುಕುವರು. ವೃಶ್ಚಿಕ:ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿರುತ್ತವೆ. ಧನುಸ್ಸು:ಹೊಸ ಉದ್ಯೋಗ ಸದ್ಯಕ್ಕೆ ಬೇಡ. ಮಕರ:ವ್ಯಾಪಾರ ವಿಸ್ತರಣೆಯಲ್ಲಿ ವಿಫಲ. ಕುಂಭ:ಕೆಲಸಗಳಿಗೆ ತಕ್ಕ ಪ್ರತಿಫಲ. ಮೀನ:ಸ್ಥಿರಾಸ್ತಿ ಮಾಡುವ ಯೋಗವಿದೆ.
ತೂಕ ಇಳಿಸಲು ರಾತ್ರಿ ಏನು ಮಾಡಬೇಕು

ತೂಕ ಇಳಿಸಲು ರಾತ್ರಿ ಏನು ಮಾಡಬೇಕು

ಒಂದು ಅಧ್ಯಯನದ ಪ್ರಕಾರ ಯಾರು ಪ್ರೋಟೀನ್ ಯುಕ್ತ ಆಹಾರ ಸೇವನೆಯನ್ನು ನಿದ್ದೆಗೂ ಮೊದಲು ಮಾಡುತ್ತಾರೋ(30 ಗ್ರಾಂನಷ್ಟು ಪ್ರೋಟೀನ್), ಅವರು ಮಾರನೇ ದಿನ ಬೆಳಿಗ್ಗೆ ಅವರ ಒಟ್ಟು ಶಕ್ತಿಯ ಕೆಲವು ಪ್ರಮಾಣವನ್ನು ಹೆಚ್ಚಿಸಿಕೊಂಡಿರುತ್ತಾರೆ. ಕತ್ತಲಲ್ಲಿ ನಿದ್ರಿಸುವುದು, ಮಧ್ಯಪಾನ ಸೇವಿಸದೇ ಇರುವುದು, ರಾತ್ರಿಯ ಆಹಾರ ಕಡಿಮೆ ಸೇವಿಸುವುದು, ಹಗಲಿನಲ್ಲಿ ಆದಷ್ಟು ಆಕ್ಟೀವ್ ಆಗಿರುವುದು,ಊಟದಲ್ಲಿ ಕಾಳುಗಳನ್ನು ಬಳಕೆ ಮಾಡುವುದು ಇತ್ಯಾದಿಗಳು ನೀವು ನಿದ್ದೆಯಲ್ಲೂ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಸಹಕರಿಸುತ್ತೆ.

ಸಿಂಬು ಹಾಡಿದ ಮೊದಲ ಕನ್ನಡ ಹಾಡು ಇದೇ ತಿಂಗಳು ಬಿಡುಗಡೆ

ಸಿಂಬು ಹಾಡಿದ ಮೊದಲ ಕನ್ನಡ ಹಾಡು ಇದೇ ತಿಂಗಳು ಬಿಡುಗಡೆ

ಕಾಲಿವುಡ್ ನಟ ಸಿಂಬು ಗಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕಾವೇರಿ ನದಿ ನೀರು ವಿಚಾರದಲ್ಲಿ ತನ್ನ ಹೇಳಿಕೆ ಮೂಲಕ ಕನ್ನಡಿಗರ ಪ್ರೀತಿಗಳಿಸಿದ್ದ ಸಿಂಬು 'ಇರುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಹಾಡಿನ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಸಿಂಬು ಹಾಡಿರುವ ಮೊದಲ ಕನ್ನಡ ಹಾಡು ಇದೇ ತಿಂಗಳು 25ಕ್ಕೆ ಬಿಡುಗಡೆಯಾಗಲಿದೆ. ಸದ್ಯಕ್ಕೆ ಸಿಂಬು ಹಾಡಿರುವ 'ಕುಣಿರಿ ತಕಥ ಕುಣಿಸಿ ತಕಥೈ ಕುಣಿರಿ ತಕಥ ಕುಣಿಸಿ ತಕಥೈ...''ಹಾಡಿನ ಟೀಸರ್ ಸದ್ದು ಮಾಡುತ್ತಿದೆ. ಇನ್ನು ಈ ಹಾಡಿನ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.