Short News

ಭೋಲೇನಾಥ ಶಿವನ ಕಂಡು ಕೇಳರಿಯದ ಸತ್ಯಗಳು

ಭೋಲೇನಾಥ ಶಿವನ ಕಂಡು ಕೇಳರಿಯದ ಸತ್ಯಗಳು

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾರೆ.ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿದ್ದಾರೆ.

ಸೆಟ್ಟೇರುವ ಮುಂಚೆಯೇ ಕಿಚ್ಚನ ಚಿತ್ರಕ್ಕೆ ಡಿಮ್ಯಾಂಡ್

ಸೆಟ್ಟೇರುವ ಮುಂಚೆಯೇ ಕಿಚ್ಚನ ಚಿತ್ರಕ್ಕೆ ಡಿಮ್ಯಾಂಡ್

ಸುದೀಪ್ ಅಭಿನಯದ ಇನ್ನೂ ಪ್ರಾರಂಭ ಆಗದ ಕೋಟಿಗೊಬ್ಬ3 ಸಿನಿಮಾದ ಆಡಿಯೋ ಹಕ್ಕು ಈಗಾಗಲೇ ಮಾರಾಟವಾಗಿದೆ. ಕೋಟಿಗೊಬ್ಬ3 ಚಿತ್ರದ ಮಹೂರ್ತ ಮಾ.2ರಂದು ನಡೆಯಲಿದೆ. ಸೂರಪ್ಪ ಬಾಬು ಸಿನಿಮಾವನ್ನ ನಿರ್ಮಾಣ ಮಾಡಲಿದ್ದು ಶಿವ ಕಾರ್ತಿಕ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ಚಿತ್ರದ ಆಡಿಯೋ ಸೂಪರ್ ಹಿಟ್ ಆದ ಹಿನ್ನಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ಈಗಾಗಲೇ ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ನಲ್ಲಿ ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ಹಾಡು ಕಳೆದ ವರ್ಷದ ಸೂಪರ್ ಹಿಟ್ ಸಾಂಗ್ ಗಳ ಲೀಸ್ಟ್ ನಲ್ಲಿ ಪ್ರಥಮ ಸ್ಥಾನಗಳಿಸಿತ್ತು.
2018ರಲ್ಲಿ ವಿಶ್ವಸಂಸ್ಥೆಯ ಬಜೆಟ್ ಎಷ್ಟು ಗೊತ್ತಾ? ಇದರಲ್ಲಿ ಭಾರತದ ಪಾಲು 117 ಕೋಟಿ ರೂ.

2018ರಲ್ಲಿ ವಿಶ್ವಸಂಸ್ಥೆಯ ಬಜೆಟ್ ಎಷ್ಟು ಗೊತ್ತಾ? ಇದರಲ್ಲಿ ಭಾರತದ ಪಾಲು 117 ಕೋಟಿ ರೂ.

ಈ ಆರ್ಥಿಕ ವರ್ಷದ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಸುಮಾರು 2.5ಶತಕೋಟಿ ಡಾಲರ್‌(163ಶತಕೋಟಿ ರೂ.)ಹಣ ಹರಿದು ಬಂದಿದೆ. ವಿಶ್ವಸಂಸ್ಥೆಯ ಈ ಬಜೆಟ್‌ಗೆ ಸದಸ್ಯ ರಾಷ್ಟ್ರಗಳು ದೇಣಿಗೆ ನೀಡುತ್ತವೆ. ಈ ಸಾಲಿನ ಬಜೆಟ್‌ಗೆ ದೇಣಿಗೆ ನೀಡಲು ಫೆಬ್ರವರಿ ಕಡೆಯ ದಿನವಾಗಿತ್ತು. ಭಾರತವು ಸೇರಿದಂತೆ 48ದೇಶಗಳು ಸರಿಯಾದ ಸಮಯಕ್ಕೆ ದೇಣಿಗೆ ಪಾವತಿಸಿವೆ. 5ದೇಶಗಳು ಅವಧಿ ಕಳೆದ ಸ್ವಲ್ಪ ದಿನದ ನಂತರ ದೇಣಿಗೆ ಪಾವತಿಸಿವೆ. ಭಾರತವು 18ದಶಲಕ್ಷ ಡಾಲರ್‌(117 ಕೋಟಿ ರೂ.)ಮೊತ್ತ ದೇಣಿಗೆ ಕೊಟ್ಟಿದೆ. ವಿಶ್ವಸಂಸ್ಥೆಗೆ ಅತಿದೊಡ್ಡ ಕೊಡುಗೆದಾರ ಅಮೆರಿಕವಾಗಿದ್ದು,590ದಶಲಕ್ಷ ಡಾವರ್‌ ಮೊತ್ತವನ್ನು ವಿಶ್ವಸಂಸ್ಥೆಗೆ ದೇಣಿಗೆಯಾಗಿ ನೀಡಿದೆ.
ಹೆಲಿ ಟ್ಯಾಕ್ಸಿಯಲ್ಲಿ ತೆರಳಬೇಕೆ? ಹಾಗಾದರೆ ಬುಕಿಂಗ್ ಹೇಗೆ?

ಹೆಲಿ ಟ್ಯಾಕ್ಸಿಯಲ್ಲಿ ತೆರಳಬೇಕೆ? ಹಾಗಾದರೆ ಬುಕಿಂಗ್ ಹೇಗೆ?

ಬೆಂಗಳೂರಿನಲ್ಲಿ ಮುಂದಿನ ವಾರದಲ್ಲಿ ಹೆಲಿ ಟ್ಯಾಕ್ಸಿ ಸೇವೆ ಲೋಕಾರ್ಪಣೆಗೊಳ್ಳಲಿದೆ. ಇದರಿಂದ ಎಲೆಕ್ಟ್ರಾನಿಕ್ ಸಿಟಿಯಿಂದ ನಗರದ ಯಾವುದೇ ವಿಮಾನ ನಿಲ್ದಾಣಕ್ಕೆ ಕೇವಲ 15ನಿಮಿಷದ ಅವಧಿಯಲ್ಲಿ ತಲುಪಬಹುದಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಜನಸಂದಣಿ ವೇಳೆ ಎಲೆಕ್ಟ್ರಾನಿಕ್ ಸಿಟಿಯಿಂದ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬೆಳಗ್ಗೆ 6.30ರಿಂದ 9.30ರ ವೇಳೆ 3ಟ್ರಿಪ್ ಗಳಲ್ಲಿ ಹಾಗೂ ಮಧ್ಯಾಹ್ನ 3ರಿಂದ ಸಂಜೆ 6.15ರ ನಡುವಿನ ಅವಧಿಯಲ್ಲಿ 3ಟ್ರಿಪ್ ಗಳಲ್ಲಿ ಹೆಲಿ ಟ್ಯಾಕ್ಸಿ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಟಿಕೇಟ್ ಗಳನ್ನು ಬುಕ್ ಮಾಡಲು 'ಫ್ಲೈ ನೌ' ಎನ್ನುವ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು.