Short News

ಅಡುಗೆ ಪದಾರ್ಥಗಳನ್ನು ಬಳಸಿ ತ್ವಚೆಯ ಚರ್ಮದ ಸಮಸ್ಯೆಯನ್ನು ಓಡಿಸಿ...

ಅಡುಗೆ ಪದಾರ್ಥಗಳನ್ನು ಬಳಸಿ ತ್ವಚೆಯ ಚರ್ಮದ ಸಮಸ್ಯೆಯನ್ನು ಓಡಿಸಿ...

ಚರ್ಮ ಎನ್ನುವುದು ನಮ್ಮ ದೇಹದ ರಕ್ಷಾ ಕವಚ. ಅಂತೆಯೇ ಸೌಂದರ್ಯವನ್ನು ಬಿಂಬಿಸುವ ಒಂದು ಅಂಗವೂ ಹೌದು. ಆರೋಗ್ಯಕರ ಚರ್ಮವು ನಮ್ಮ ವಯಸ್ಸನ್ನು ಮರೆಮಾಚುತ್ತದೆ. ಜೊತೆಗೆ ನಮ್ಮ ಆರೋಗ್ಯದ ಗುಣಮಟ್ಟವನ್ನು ಹೊರಗಿನ ಪ್ರಪಂಚಕ್ಕೆ ತೋರಿಸಿಕೊಡುತ್ತದೆ. ಹಾಗಾಗಿಯೇ ಸಾಮಾನ್ಯವಾಗಿ ಬಹುತೇಕ ಮಂದಿ ಚರ್ಮದ ಆರೈಕೆ ಹಾಗೂ ಅದರ ಪೋಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮಾಲಿನ್ಯದ ಪರಿಸರ, ಅತಿಯಾದ ಸೂರ್ಯನ ಕಿರಣ ಹಾಗೂ ಕೆಟ್ಟ ಧೂಳುಗಳಿಂದ ಚರ್ಮವು ಬಹುಬೇಗ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಅದರಂತೆಯೇ ವಿವಿಧ ಆರೈಕೆಯ ವಿಧಾನಗಳೂ ಇವೆ.

ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದ ಕಿಚ್ಚ ಸುದೀಪ್

ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದ ಕಿಚ್ಚ ಸುದೀಪ್

ನಟಿ ಶ್ರೀದೇವಿ ವಿಧಿವಶರಾದ ಸುದ್ದಿ ಕೇಳಿ ಕನ್ನಡ ನಟ ಕಿಚ್ಚ ಸುದೀಪ್ ಹೃದಯ ಛಿದ್ರಗೊಂಡಿದೆ. ಶ್ರೀದೇವಿ ಜೊತೆಗೆ ಸುದೀಪ್ ತಮಿಳಿನ 'ಪುಲಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. 2015ರಲ್ಲಿ ತೆರೆಕಂಡ 'ಪುಲಿ' ಚಿತ್ರದಲ್ಲಿ 'ರಾಣಿ' ಪಾತ್ರದಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದರು. ''ಶ್ರೀದೇವಿ ಅಂತ ಉತ್ಕೃಷ್ಟ ತಾರೆ ಜೊತೆಗೆ ಕೆಲ ಕಾಲ ಕಳೆಯುವ ಅವಕಾಶ ಸಿಕ್ಕಿದ್ದಕ್ಕೆ ನಾನು ಲಕ್ಕಿ ಅಂತ ಭಾವಿಸಬೇಕಾ? ಶ್ರೀದೇವಿ ಬಹುತೇಕರಿಗೆ ಸ್ಫೂರ್ತಿಯ ಚಿಲುಮೆ. ಕೆಲವೊಂದನ್ನ ನಂಬುವುದು ಕಷ್ಟ,ಸ್ವೀಕರಿಸುವುದು ಅದಕ್ಕಿಂತ ಕಷ್ಟ. ಹೃದಯ ಛಿದ್ರಗೊಂಡಿದೆ. ಶ್ರೀದೇವಿ ಅವರ ಆತ್ಮಕ್ಕೆ ಸಿಗಲಿ''ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಶ್ರೀದೇವಿನ ಕೊಂದ ದೇವರನ್ನು ದ್ವೇಷಿಸುತ್ತೇನೆ: ರಾಮ್ ಗೋಪಾಲ್ ವರ್ಮಾ

ಶ್ರೀದೇವಿನ ಕೊಂದ ದೇವರನ್ನು ದ್ವೇಷಿಸುತ್ತೇನೆ: ರಾಮ್ ಗೋಪಾಲ್ ವರ್ಮಾ

ನಟಿ ಶ್ರೀದೇವಿ ಅಂದ-ಚೆಂದಕ್ಕೆ ಮಾರು ಹೋಗಿದ್ದ ರಾಮ್ ಗೋಪಾಲ್ ವರ್ಮಾ,ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಶ್ರೀದೇವಿಯನ್ನ ಹತ್ತಿರದಿಂದ ನೋಡುವ ಸಲುವಾಗಿಯಂತೆ. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಶ್ರೀದೇವಿಗಾಗಿ 'ಕ್ಷಣ ಕ್ಷಣಂ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದರಂತೆ. ''ಕ್ಷಣ ಕ್ಷಣಂ' ಶ್ರೀದೇವಿಗಾಗಿ ನಾನು ಬರೆದ ಲವ್ ಲೆಟರ್''ಎಂದು ಟ್ವೀಟ್ ಮಾಡಿದ್ದಾರೆ. ''ಯಾವತ್ತೂ ನಾನು ದೇವರನ್ನ ಇಷ್ಟು ದ್ವೇಷಿಸಿಲ್ಲ. ಪ್ರಕಾಶಮಾನವಾದ ಬೆಳಕನ್ನ ಇಂದು ದೇವರು ಕಿತ್ತುಕೊಂಡಿದ್ದಾನೆ. ನನ್ನ ಹೃದಯ ಬೋನಿಕಪೂರ್ ಗಾಗಿ ಮಿಡಿಯುತ್ತಿದೆ''. ಏಯ್ ಬಾಲಾಜಿ,ನನ್ನನ್ನ ಉಳಿಸಿ ಶ್ರೀದೇವಿಯನ್ನ ಮಾತ್ರ ಯಾಕೆ ನೀನು ಕರೆದುಕೊಂಡೆ?ಎಂದಿದ್ದಾರೆ ವರ್ಮಾ.
ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಜಯಪುರದಲ್ಲಿ ಭಾನುವಾರ ಬೆಳಗ್ಗೆ ಹಾಫ್‌ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿದರು. ಭಾನುವಾರ ಮುಂಜಾನೆ ವೃಕ್ಷ ಅಭಿಯಾನ ಟ್ರಸ್ಟ್‌ ವಿಜಯಪುರದಲ್ಲಿ 'ವೃಕ್ಷೋತ್ಥಾನ್ 2018' ಹಾಫ್ ಮ್ಯಾರಾಥಾನ್ ಆಯೋಜನೆ ಮಾಡಿತ್ತು. ಹಸಿರು ‌ವಿಜಯಪುರ ನಿರ್ಮಾಣಕ್ಕಾಗಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. ವಿಜಯಪುರದ ಗೋಳಗುಮ್ಮಟ ಆವರಣದಲ್ಲಿ ರಾಹುಲ್ ಗಾಂಧಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ನಟ ಯಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.