Short News

ಈ ರಾಶಿಯವರು ತಮ್ಮ ತಪ್ಪುಗಳನ್ನು ಯಾವಾಗಲೂ ಒಪ್ಪಿಕೊಳ್ಳಲು ಸಿದ್ಧರಿರುವುದೇ ಇಲ್ಲ

ಈ ರಾಶಿಯವರು ತಮ್ಮ ತಪ್ಪುಗಳನ್ನು ಯಾವಾಗಲೂ ಒಪ್ಪಿಕೊಳ್ಳಲು ಸಿದ್ಧರಿರುವುದೇ ಇಲ್ಲ

ಕೆಲವರಿಗೆ ಕ್ಷಮೆ ಕೇಳುವುದು ಅಂದರೆ ಅದೊಂದು ದೊಡ್ಡ ಕಷ್ಟದ ವಿಚಾರವಾಗಿದೆ. ಇದನ್ನು ನಿಮ್ಮ ರಾಶಿಯೊಂದಿಗೂ ಜೋಡಿಸಬಹುದು ಎಂದರೆ ನೀವು ನಂಬುತ್ತೀರಾ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಮುಖವಾಗಿ 4 ರಾಶಿಯವರು ಕ್ಷಮೆಯಾಚಿಸುವುದರಲ್ಲಿ ಬಹಳ ಹಿಂದೆಮುಂದೆ ನೋಡುತ್ತಾರೆ. ಆ ರಾಶಿಯವರು ಯಾರೆಂದರೆ-ವೃಷಭ,ಸಿಂಹ,ವೃಶ್ಚಿಕ,ಕುಂಭ. ಇವರು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸಲಾರರು. ಒಂದು ವೇಳೆ ಅವರೇ ತಪ್ಪು ಮಾಡಿದ್ದು, ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ ಇದ್ದರೂ ಕೂಡ ತಪ್ಪಾಯ್ತು ಎಂದು ಕೇಳಲು ಅವರು ಮುಂದೆ ಬರುವುದಿಲ್ಲ.

ಪೋಖ್ರಾನ್‍ನಲ್ಲಿ ನಡೆಯಲಿದೆ ಪ್ರಥಮ ದೇಶಿಯ ನಿರ್ಮಿತ ಧನುಷ್ ಫಿರಂಗಿ ಪರೀಕ್ಷೆ

ಪೋಖ್ರಾನ್‍ನಲ್ಲಿ ನಡೆಯಲಿದೆ ಪ್ರಥಮ ದೇಶಿಯ ನಿರ್ಮಿತ ಧನುಷ್ ಫಿರಂಗಿ ಪರೀಕ್ಷೆ

ಭಾರತದ ಪ್ರಥಮ ದೇಶೀಯ ನಿರ್ಮಿತ,ದೀರ್ಘ ಅಂತರದ ಆರ್ಟಿಲರಿ ಗನ್(ಪಿರಂಗಿ)ಧನುಷ್ ಮುಂದಿನವಾರ ರಾಜಸ್ತಾನದ ಜೈಸಲ್ಮೆರ್‍ನ ಪೋಖ್ರಾನ್‍ನಲ್ಲಿ ಪರೀಕ್ಷೆಗೆ ಒಳಗಾಗುತ್ತಿದೆ. ಧನುಷ್ ಫಿರಂಗಿಗಳನ್ನು ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ(ಒಎಫ್‍ಬಿ) ಅಭಿವೃದ್ದಿಗೊಳಿಸಿದ್ದು,ಜಬ್ಬಲ್‍ಪುರ ಮೂಲದ ಗನ್ ಕ್ಯಾರಿಯೇಜ್ ಫ್ಯಾಕ್ಟರಿ(ಜಿಎಸ್‍ಎಫ್) ಸಿದ್ಧಪಡಿಸಿದೆ. ಭಾರತೀಯ ಸೇನಾ ಪಡೆಯ ತಾಂತ್ರಿಕ ಅಧಿಕಾರಿಗಳು ಮತ್ತು ಜಿಸಿಎಫ್ ತಜ್ಞರ ಸಮ್ಮುಖದಲ್ಲಿ ಫಿರಂಗಿಯಿಂದ ಗುಂಡು ಹಾರಿಸಿ ಪರೀಕ್ಷಾ ಪ್ರಯೋಗ ಮರುಭೂಮಿಯಲ್ಲಿ ನಡೆಯಲಿದೆ. 5ವರ್ಷದ ಹಿಂದೆಯೇ ಇದನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಮುಂದೂಡಲ್ಪಟ್ಟಿತ್ತು.
ಭೀಕರ ರಸ್ತೆ ಅಪಘಾತ: ಖ್ಯಾತ  ನಟಿ  ಸಾವು

ಭೀಕರ ರಸ್ತೆ ಅಪಘಾತ: ಖ್ಯಾತ ನಟಿ ಸಾವು

ಚಿತ್ರೀಕರಣದ ಸ್ಥಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಖ್ಯಾತ ಭೋಜ್ ಪುರಿ ನಟಿ 45 ವರ್ಷದ ನಟಿ ಮನೀಶಾ ರೈ ಮೃತಪಟ್ಟಿರುವ ಘಟನೆ ನಡೆದಿದೆ. ತನ್ನ ಸಹವರ್ತಿ ಸಂಜೀವ್ ಮಿಶ್ರಾ ಜತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಸಂಜೀವ್ ಮಿಶ್ರಾ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ ಉತ್ತರಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗುವ ಸಲುವಾಗಿ ನಟಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ನಿರ್ಣಾಯಕ ಪಂದ್ಯ: ಮುಂಬೈಗೆ 175 ರನ್  ಟಾರ್ಗೆಟ್ ನೀಡಿದ ಡೆಲ್ಲಿ

ನಿರ್ಣಾಯಕ ಪಂದ್ಯ: ಮುಂಬೈಗೆ 175 ರನ್ ಟಾರ್ಗೆಟ್ ನೀಡಿದ ಡೆಲ್ಲಿ

ದೆಹಲಿಯ ಫಿರೂಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ ಮತ್ತು ಮುಂಬೈ ಇಂಡಿಯನ್ಸ್ ಟಿ-20 ಟೂರ್ನಿಯ ನಿರ್ಣಾಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ರಿಷಭ್ ಪಂತ್ ಆಕರ್ಷಕ ಅರ್ಧಶತಕದ (64) ನೆರವಿನೊಂದಿಗೆ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 174 ರನ್‌ ಟಾರ್ಗೆಟ್ ನೀಡಿದೆ. ವಿಜಯದ ಗುರಿ ಬೆನ್ನು ಹತ್ತಿರುವ ಮುಂಬೈ ಈಗಾಗಲೇ 12 ಓವರ್ ಗೆ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿ. ಆಟ ಮುಂದುವರೆಸಿದೆ.