Short News

40 ವರ್ಷಕ್ಕೆ ಕೇವಲ 40 ದಿನಗಳು ಮಾತ್ರವೇ ದರ್ಶನ ನೀಡುವ ದೇವಾಲಯವಿದು !!

40 ವರ್ಷಕ್ಕೆ ಕೇವಲ 40 ದಿನಗಳು ಮಾತ್ರವೇ ದರ್ಶನ ನೀಡುವ ದೇವಾಲಯವಿದು !!

ತಮಿಳುನಾಡಿನಲ್ಲಿರುವ ದೇವಾಲಯವೊಂದರಲ್ಲಿನ ನಿಜವಾದ ಮೂಲವಿಗ್ರಹವನ್ನು 40 ವರ್ಷಕ್ಕೆ ಒಮ್ಮೆ ಮಾತ್ರವೇ ಭಕ್ತರು ದರ್ಶನವನ್ನು ಪಡೆಯಬಹುದಂತೆ. ಇಲ್ಲಿನ ಸ್ವಾಮಿಯ ದರ್ಶನಕ್ಕೆ ಎಷ್ಟು ಪ್ರಾಧನ್ಯತೆಯನ್ನು ನೀಡುತ್ತಾರೆಯೋ, ಅದಕ್ಕಿಂತ ಹೆಚ್ಚು ಪ್ರಾಧನ್ಯತೆಯನ್ನು ಆ ದೇವಾಲಯದಲ್ಲಿರುವ 2 ವಿಗ್ರಹಗಳ ಸ್ಪರ್ಶಕ್ಕೆ ಮಹತ್ವವನ್ನು ನೀಡುತ್ತಾರಂತೆ. ಶ್ರೀ ಮಹಾವಿಷ್ಣುವನ್ನು ವರದರಾಜ ಸ್ವಾಮಿಯ ಹೆಸರಿನಿಂದ ಕಂಚಿಯಲ್ಲಿ ಆರಾಧಿಸುತ್ತಾರೆ. 108 ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ವರದರಾಜಸ್ವಾಮಿ ದೇವಾಲಯವು ಒಂದು. ಈ ದೇವಾಲಯವಿರುವ ಪ್ರದೇಶವನ್ನೇ ವಿಷ್ಣು ಕಂಚಿ ಎಂದು ಕರೆಯುತ್ತಾರೆ.  
ಪಿಡಿಪಿ-ಬಿಜೆಪಿ ಮೈತ್ರಿ ಅಂತ್ಯ , ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ರಾಷ್ಟ್ರಪತಿ ಅಂಕಿತ

ಪಿಡಿಪಿ-ಬಿಜೆಪಿ ಮೈತ್ರಿ ಅಂತ್ಯ , ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ರಾಷ್ಟ್ರಪತಿ ಅಂಕಿತ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನ ಬಿಜೆಪಿ ಮುರಿದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಆಡಳಿತಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಸರ್ಕಾರ ರಚಿಸಲು ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಿಎಂ ಮೆಹಬೂಬಾ ಮುಫ್ತಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರ ರಚನೆಗೆ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ರಾಜ್ಯಪಾಲ ಎನ್‌.ಎನ್‌.ವೋಹ್ರಾ ಅವರು ರಾಜ್ಯಪಾಲರ ಆಳ್ವಿಕೆಗೆ ಶಿಫಾರಸು ಮಾಡಿದ ಪತ್ರವನ್ನು ರಾಷ್ಟ್ರಪತಿ ಕೋವಿಂದ್‌ ಅವರಿಗೆ ರವಾನಿಸಿದ್ದರು. ಹೀಗಾಗಿ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾಗಿದೆ.
ಹೆಚ್ಚು ಮಾರಾಟಗೊಳ್ಳುತ್ತಿರುವ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಬಲೆನೊ..

ಹೆಚ್ಚು ಮಾರಾಟಗೊಳ್ಳುತ್ತಿರುವ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಬಲೆನೊ..

ದೇಶಿಯ ವಾಹನ ತಯಾರಕ ಸಂಸ್ಥಯಾದ ಮಾರುತಿ 2015ರಲ್ಲಿ ತಮ್ಮ ಬಲೆನೊ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಕಾರುಗಳ ಸರಣಿಯಲ್ಲಿ ಹೆಚ್ಚು ಮಾರಾಟಗೊಳ್ಳುತ್ತಿರುವ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ. ಬಿಡುಗಡೆಗೊಂಡಾಗಿನೊಂದಲೂ ಈ ವರೆಗು ಮಾರುತಿ ಬಲೆನೊ ಕಾರುಗಳು ಸುಮಾರು 4 ಲಕ್ಷ ಯೂನಿಟ್‍‍ಗಿಂತ ಹೆಚ್ಚು ಮಾರಾಟಗೊಂಡಿದೆ. ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಸರಣಿಯಲ್ಲಿ ಮಾರುತಿ ಬಲೆನೊ ಕಾರುಗಳು ಪ್ರತೀ ತಿಂಗಳಿಗೆ 18,000 ಸಾವಿರ ಕಾರುಗಳನ್ನು ಮಾರಾಟಗೊಳಿಸುತ್ತಾ ಮೊದಲನೆಯ ಸ್ಥಾನವನ್ನು ಪಡೆದಿದ್ದು ಇನ್ನು ಎರಡನೆಯ ಸ್ಥಾನವನ್ನು ಎಲೈಟ್ ಐ20 ಕಾರು ಪಡೆದಿದೆ.
ಚಿತ್ರದುರ್ಗದಲ್ಲಿ ಅಪಘಾತ: ತಮಿಳುನಾಡಿನ ಐವರು ಬಲಿ

ಚಿತ್ರದುರ್ಗದಲ್ಲಿ ಅಪಘಾತ: ತಮಿಳುನಾಡಿನ ಐವರು ಬಲಿ

ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿಸದ ಭೀಕರ ಅಪಘಾತದಲ್ಲಿ ಐವರು ಮೃತರಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಕಾರು ಹಿರಿಯೂರು ಸಮೀಪ ಜವಗೊಂಡನಹಳ್ಳಿಯಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮೃತರನ್ನು ಸದ್ದಾಂ ಹುಸೇನ್(22), ಸದ್ದಾಂ(21), ತೌಸಿಫ್ ಅಹಮ್ಮದ್(24), ಶಾರೂಕ್(20) ಮತ್ತು ಆಸಿಫ್(21) ಎಂದು ಗುರುತಿಸಲಾಗಿದೆ. ನಾಲ್ಕು ಜನ ಸ್ಥಳದಲ್ಲೇ ಮೃತರಾಗಿದ್ದರೆ, ಆಸಿಫ್ ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more