Short News

ದಿನಕ್ಕೆ ಒಂದೂವರೆ ಲೀಟರಿನಷ್ಟು ನೀರು ಕುಡಿದರೆ ಸಾಕು, ತೂಕ ಇಳಿಯುತ್ತೆ!

ದಿನಕ್ಕೆ ಒಂದೂವರೆ ಲೀಟರಿನಷ್ಟು ನೀರು ಕುಡಿದರೆ ಸಾಕು, ತೂಕ ಇಳಿಯುತ್ತೆ!

ನಾವು ಸೇವಿಸುವ ಆಹಾರದಿಂದ ಪಡೆಯುವ ಪೋಷಕಾಂಶಗಳನ್ನು ಅಂಗಾಂಶ ಹಾಗೂ ಎಲ್ಲಾ ಜೀವಕೋಶಗಳಿಗೆ ತಲುಪಿಸಲು ಹಾಗೂ ತ್ಯಾಜ್ಯಗಳನ್ನು ವಿಸರ್ಜಿಸಲೂ ನೀರು ಅಗತ್ಯವಾಗಿದೆ. ಅಲ್ಲದೇ ಇನ್ನೊಂದು ಅಚ್ಚರಿಯ ಗುಣವೆಂದರೆ ದೇಹದ ತೂಕ ಕಳೆದುಕೊಳ್ಳಲೂ ನೀರು ನೆರವಾಗುತ್ತದೆ! ತೂಕ ಕಳೆದುಕೊಳ್ಳಲು ಕೊಬ್ಬನ್ನು ಕರಗಿಸಬೇಕು, ಇದಕ್ಕೆ ನೀರು ನೇರವಾಗಿ ನೆರವಾಗುವುದಿಲ್ಲ ನಿಜ, ಆದರೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವಿಸದಿರಲು ಹಾಗೂ ಕಲ್ಮಶಗಳನ್ನು ನಿವಾರಿಸುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

ಮೂಡಬಿದ್ರೆಯಲ್ಲಿ ಹಳೆ ನಿಷ್ಠಾವಂತ ಅಮರನಾಥ್ ಶೆಟ್ಟಿಗೆ ಜೆಡಿಎಸ್ ಟಿಕೆಟ್

ಮೂಡಬಿದ್ರೆಯಲ್ಲಿ ಹಳೆ ನಿಷ್ಠಾವಂತ ಅಮರನಾಥ್ ಶೆಟ್ಟಿಗೆ ಜೆಡಿಎಸ್ ಟಿಕೆಟ್

ಮಹತ್ವದ ಬೆಳವಣಿಗೆಯೊಂದರಲ್ಲಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಹಳೆ ನಿಷ್ಠಾವಂತ ಮುಖಂಡ ಅಮರನಾಥ್ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದೆ. ಈ ಮೂಲಕ ಮುಲ್ಕಿ - ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪ್ರಬಲ ಸ್ಪರ್ಧೆ ನೀಡಲು ತಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ತ್ರಿಕೋನ ಸ್ಪರ್ಧೆಗೆ ವೇದಿಗೆ ಸಿದ್ದವಾಗಿದೆ. ಮೂಲ್ಕಿ ಮೂಡಬಿದ್ರೆ ಕ್ಷೇತ್ರ ದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಲ್ಕಿಯ ಉದ್ಯಮಿ ಜೀವನ್ ಶೆಟ್ಟಿ ಅವರನ್ನು ಕಣಕ್ಕಿಳಿಸಲು ಶುಕ್ರವಾರ ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದರು.
ಟಾಸ್ ಗೆದ್ದ ಬೆಂಗಳೂರು, ಡೆಲ್ಲಿ ವಿರುದ್ಧ ಬೌಲಿಂಗ್ ಆಯ್ಕೆ

ಟಾಸ್ ಗೆದ್ದ ಬೆಂಗಳೂರು, ಡೆಲ್ಲಿ ವಿರುದ್ಧ ಬೌಲಿಂಗ್ ಆಯ್ಕೆ

IPL2018ರ 19ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಈವರೆಗೆ ಕಳಪೆ ಪ್ರದರ್ಶನವನ್ನು ತೋರಿದ್ದು, ಎರಡೂ ತಂಡಗಳು ತಮ್ಮ ಈ ಹಿಂದಿನ ಪಂದ್ಯದಲ್ಲಿ ಸೋಲು ಕಂಡಿವೆ. ಇಂದಿನ ಪಂದ್ಯ ಗೆಲ್ಲುವ ಮೂಲಕ ಗೆಲುವಿನ ಟ್ರಾಕ್‌ಗೆ ವಾಪಾಸ್ಸಾಗಲು ಇತ್ತಂಡಗಳೂ ಪೈಪೋಟಿ ನಡೆಸಲಿವೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹೊರತು ಪಡಿಸಿ ಇನ್ನಾವುದೇ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರದಿರುವುದು ತಲೆನೋವಾಗಿ ಪರಿಣಮಿಸಿದೆ.
ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಬಲ ಪ್ರದರ್ಶನ, ಜನಾರ್ದನ ರೆಡ್ಡಿ ಸಾಥ್

ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಬಲ ಪ್ರದರ್ಶನ, ಜನಾರ್ದನ ರೆಡ್ಡಿ ಸಾಥ್

ಮೊಳಕಾಲ್ಮೂರು ಪರಿಶಿಷ್ಟ ಪಂಗಡ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಶೇಷ ವಿಮಾನದಲ್ಲಿ ಭೋಪಾಲ್ ನಿಂದ ಬಳ್ಳಾರಿಯ ತೋರಣಗಲ್ಲು ತಲುಪಿ, ವಿಶೇಷ ಹೆಲಿಕಾಪ್ಟರ್ ನಲ್ಲಿ ಬಿಎಸ್ ವೈ, ಬಿ. ಶ್ರೀರಾಮುಲು ಸೇರಿ ಐವರು ಮೊಳಕಾಲ್ಮೂರಿಗೆ ಹಾರಿದ್ದರು.

ಶನಿವಾರ ಬೆಳಗ್ಗೆ ನಸುಕಿನಲ್ಲಿ ಎದ್ದ ಬಿ.ಶ್ರೀರಾಮುಲು ಮನೆಯಲ್ಲಿ ಶಿವಪೂಜೆ ನೆರವೇರಿಸಿದರು. ಆ ನಂತರ ಗೋಪೂಜೆಯನ್ನು ನಡೆಸಿ, ಗುರು - ಹಿರಿಯರನ್ನು ಸ್ಮರಿಸಿ, ಆರಾಧ್ಯ ದೈವಕ್ಕೆ ನಮಸ್ಕರಿಸಿದರು.