Short News

ಸೂರ್ಯಗ್ರಹಣ ದಿನದಂದೇ 'ರಾಹು ಕೇತು'ವಿನ ಜನ್ಮವಾಯಿತಂತೆ!

ಸೂರ್ಯಗ್ರಹಣ ದಿನದಂದೇ 'ರಾಹು ಕೇತು'ವಿನ ಜನ್ಮವಾಯಿತಂತೆ!

ಪುರಾಣಗಳ ಪ್ರಕಾರ ದೇವಲೋಕದಲ್ಲಿ ಸಂಪತ್ತು ಹಾಗೂ ಸಮೃದ್ಧಿಯ ದೇವತೆ ಲಕ್ಷ್ಮೀ ದೇವಿಯು ಒಂದು ಸಲ ತನ್ನ ಪತಿ ವಿಷ್ಣುವಿನೊಂದಿಗೆ ಮನಸ್ತಾಪ ಮಾಡಿಕೊಂಡು ಅಲ್ಲಿಂದ ತೆರಳುವಳು. ಇದರಿಂದ ದೇವಲೋಕದಲ್ಲಿ ಸಂಪತ್ತು ಹಾಗೂ ಸಂಪನ್ಮೂಲಗಳ ಕೊರತೆ ಉಂಟಾಗುವುದು. ಎಲ್ಲವೂ ಶೀಘ್ರವೇ ಸಾಮಾನ್ಯವಾಗಲಿ ಎಂದು ಎಲ್ಲಾ ದೇವದೇವತೆಯರು ಕೂಡ ಪ್ರಾರ್ಥಿಸುತ್ತಿದ್ದರು. ತನ್ನೊಂದಿಗೆ ಸಮೃದ್ಧಿ ಹಾಗೂ ಸಂಪತ್ತು ತರುವ ಲಕ್ಷ್ಮೀ ದೇವಿಯನ್ನು ಆದಷ್ಟು ಬೇಗ ಮರಳಿ ಕರೆತರುವುದು ಹೇಗೆ ಎನ್ನುವ ಪ್ರಶ್ನೆ ಮಾತ್ರ ಪ್ರತಿಯೊಬ್ಬರನ್ನು ಕಾಡುತ್ತಲಿತ್ತು. ಲಕ್ಷ್ಮೀ ದೇವಿಯನ್ನು ಸಂಸ್ಕೃತದಲ್ಲಿ ಶ್ರೀ ಎಂದು ಕರೆಯಲಾಗುತ್ತದೆ.

ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್: ಇವರಿಬ್ಬರ ಸಂಭಾವನೆ ಎಷ್ಟು ಅಂತೀರಾ.?

ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್: ಇವರಿಬ್ಬರ ಸಂಭಾವನೆ ಎಷ್ಟು ಅಂತೀರಾ.?

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಂದ್ರೆ ಅದು ಅಕ್ಷಯ್ ಕುಮಾರ್.! ಫೋರ್ಬ್ಸ್ ಮ್ಯಾಗಝೀನ್ ಟಾಪ್ 100ರ ಪಟ್ಟಿಯಲ್ಲಿ ಭಾರತದಿಂದ ಸ್ಥಾನ ಪಡೆದಿರುವವರು ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಮಾತ್ರ.! ಫೋರ್ಬ್ಸ್ ಪಟ್ಟಿಯಲ್ಲಿ 'ಖತರೋಂಕೆ ಖಿಲಾಡಿ' ಅಕ್ಷಯ್ ಕುಮಾರ್ 76ನೇ ಸ್ಥಾನ ಪಡೆದಿದ್ದಾರೆ. 50 ವರ್ಷ ವಯಸ್ಸಿನ ಅಕ್ಷಯ್ ರ ವಾರ್ಷಿಕ ಆದಾಯ ಎಷ್ಟು ಗೊತ್ತಾ.? 40.5 ಮಿಲಿಯನ್ ಡಾಲರ್ (270 ಕೋಟಿ ರೂಪಾಯಿ). ಫೋರ್ಬ್ಸ್ ಪಟ್ಟಿಯಲ್ಲಿ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ 82ನೇ ಸ್ಥಾನ ಪಡೆದಿದ್ದಾರೆ. 52 ವರ್ಷ ವಯಸ್ಸಿನ ಸಲ್ಮಾನ್ ಖಾನ್ ರವರ ವಾರ್ಷಿಕ ಆದಾಯ 37.7 ಮಿಲಿಯನ್ ಡಾಲರ್ (251 ಕೋಟಿ ರೂಪಾಯಿ).
ರೆಬೆಲ್ ಸ್ಟಾರ್ ಅಂಬಿ ಪ್ರಕಾರ ಸ್ಯಾಂಡಲ್ ವುಡ್ 'ಬಾಸ್' ಯಾರು?

ರೆಬೆಲ್ ಸ್ಟಾರ್ ಅಂಬಿ ಪ್ರಕಾರ ಸ್ಯಾಂಡಲ್ ವುಡ್ 'ಬಾಸ್' ಯಾರು?

'ಬಾಸ್' ವಿವಾದ ವಿಚಾರದ ಬಗ್ಗೆ ಈಗ ರೆಬಲ್ ಸ್ಟಾರ್ ಅಂಬರೀಶ್ ಮಾತನಾಡಿದ್ದಾರೆ. ಇಲ್ಲಿ 'ಯಾರಿಗೆ ಯಾರು ಬಾಸ್ ಇಲ್ಲ' ಎಂದಿರುವ ಅಂಬಿ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ''ಇಲ್ಲಿ ಯಾರು 'ಬಾಸ್' ಅಲ್ಲ. ಸಿನಿಮಾ ಹಿಟ್ ಆದರೆ ಆ ಸಿನಿಮಾಗೆ ಅವರೇ 'ಬಾಸ್' ಇಂಡಸ್ಟ್ರಿಗೆ ಯಾರು 'ಬಾಸ್' ಆಗೋದಿಲ್ಲ. ಇಲ್ಲಿ ಯಾರು ಇನ್ನೊಬ್ಬರಿಗೆ ಬಾಸ್ ಅಲ್ಲ. ನಾವೆಲ್ಲ ಒಂದೇ ಕುಟುಂಬದವರ ತರ ಬಂದಿದ್ದೇವೆ. ಕಲಾವಿದರಲ್ಲಿಯೂ ಆ ರೀತಿ ಭಾವನೆ ಇದೆ.'' ಎಂದು ಅಂಬಿ ಹೇಳಿದ್ದಾರೆ.
ಪದವೀಧರರಿಗೆ ಇಂಡ್ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ

ಪದವೀಧರರಿಗೆ ಇಂಡ್ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ

ಇಂಡ್ ಬ್ಯಾಂಕ್ 15 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 30, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇಂಡ್-ಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವಿಸ್ ಲಿಮಿಟೆಡ್ ಸೆಕ್ರೆಟೇರಿಯಲ್ ಆಫೀಸರ್ 5, ಡೀಲರ್ 10 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more