Short News

ಅಂಗೈಯಲ್ಲಿ “V” ಗುರುತಿನ ಚಿಹ್ನೆ ಇದ್ದರೆ ನೀವು ತುಂಬಾನೇ ಅದೃಷ್ಟವಂತರು

ಅಂಗೈಯಲ್ಲಿ “V” ಗುರುತಿನ ಚಿಹ್ನೆ ಇದ್ದರೆ ನೀವು ತುಂಬಾನೇ ಅದೃಷ್ಟವಂತರು

ಹಸ್ತಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯ ಮೇಲಿರುವಂತಹ ಕೆಲವೊಂದು ರೇಖೆಗಳು ನೀವು ಕೋಟ್ಯಾಧಿಪತಿಯಾಗಲಿದ್ದೀರಾ ಅಥವಾ ಇಲ್ಲವಾ ಎನ್ನುವುದನ್ನು ತಿಳಿಸಿಕೊಡಲಿದೆ. ಈ ಲೇಖನದಲ್ಲಿ ಅಂಗೈಯ ಮೇಲಿರುವಂತಹ ಒಂದು ಅಕ್ಷರದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅಂಗೈಯ ಮೇಲಿರುವ ವಿ ಅಕ್ಷರದ ಬಗ್ಗೆ ನೀವು ಸಂಪೂರ್ಣ ಮಾಹಿತಿ ಪಡೆಯಿರಿ. ಹೃದಯ ರೇಖೆಯ ಅಂತ್ಯದಲ್ಲಿ ವಿ ಇದ್ದರೆ ಇದು ತುಂಬಾ ಅದೃಷ್ಟ ಮತ್ತು ಅಂಗೈಯ ಮೇಲೆ ಈ ಅಕ್ಷರವು ಇಲ್ಲದೆ ಇದ್ದರೆ ನೀವು ಹೃದಯಹೀನರೆಂದು ಹೇಳಲಾಗುತ್ತದೆ. ಹೃದಯ ರೇಖೆಯಲ್ಲಿ ಈ ಅಕ್ಷರವು ಇದ್ದರೆ ನೀವು ತುಂಬಾ ಅದೃಷ್ಟವಂತರು

ಕಣ್ಣಿನ ರೆಪ್ಪೆಯಲ್ಲಾಗುವ ಡ್ಯಾಂಡ್ರಫ್ ನಿವಾರಣೆಗೆ ಮನೆಮದ್ದುಗಳು...

ಕಣ್ಣಿನ ರೆಪ್ಪೆಯಲ್ಲಾಗುವ ಡ್ಯಾಂಡ್ರಫ್ ನಿವಾರಣೆಗೆ ಮನೆಮದ್ದುಗಳು...

ಒಂದು ಟೇಬಲ್ ಸ್ಪೂನ್ ಬಾದಾಮಿ ಎಣ್ಣೆ ತೆಗೆದುಕೊಳ್ಳಿ ಮತ್ತು ಅದನ್ನು ಸ್ವಲ್ಪ ಬಿಸಿ ಮಾಡಿ.  ಕಣ್ಣುಗಳ ರೆಪ್ಪೆಗಳಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಮಾರನೆಯ ದಿನ ಬೆಳಿಗ್ಗೆ ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ. ಇನ್ನುಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿಮಾಡಿ ಕಣ್ಣಿನ ರೆಪ್ಪೆಗಳ ಸುತ್ತ ಹಚ್ಚಿ ಮಸಾಜ್ ಮಾಡಿ ಮತ್ತು ಕಣ್ಣನ್ನೂ ಮಸಾಜ್ ಮಾಡಿ.. ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಮತ್ತು ಆ ಬಟ್ಟೆಯನ್ನು ನಿಮ್ಮ ಕಣ್ಣಿನ ರೆಪ್ಪೆಯ ಮೇಲೆ 15 ನಿಮಿಷ ಹಾಗೆಯೇ ಬಿಡಿ. ಹೆಚ್ಚಾದ ಎಣ್ಣೆಯ ಅಂಶವನ್ನು ಹದವಾಗಿ ಬಿಸಿಯಾದ ನೀರಿನಿಂದ ತೊಳೆಯಿರಿ. ಡ್ಯಾಂಡ್ರಫ್ ನಿಂದ ಮುಕ್ತಿ ಪಡೆಯಲು ಪ್ರತಿ ದಿನ ಎರಡು ಬಾರಿ ಪ್ರಯತ್ನಿಸಿ.
'ಕೋಟಿಗೊಬ್ಬ-3' ಸಿನಿಮಾದಲ್ಲಿ ಶ್ರದ್ಧಾ ದಾಸ್ ಪಾತ್ರವೇನು.?

'ಕೋಟಿಗೊಬ್ಬ-3' ಸಿನಿಮಾದಲ್ಲಿ ಶ್ರದ್ಧಾ ದಾಸ್ ಪಾತ್ರವೇನು.?

'ಕೋಟಿಗೊಬ್ಬ-3' ಚಿತ್ರದ ಬಹುಪಾಲು ಸನ್ನಿವೇಶಗಳು ವಿದೇಶಗಳಲ್ಲಿಯೇ ನಡೆಯಲಿವೆ. ಹೀಗಾಗಿ, ಒಂದು ತಿಂಗಳಿಗೂ ಅಧಿಕ ಕಾಲ ಕಿಚ್ಚ ಸುದೀಪ್ ಫಾರಿನ್ ನಲ್ಲೇ ಇರಬೇಕು. ಬರೀ ಸುದೀಪ್ ಮಾತ್ರ ಅಲ್ಲ, ಅಫ್ತಾಬ್ ಶಿವದಾಸನಿ, ಮಡೋನ ಸೆಬಾಸ್ಟಿಯನ್ ಹಾಗೂ ಶ್ರದ್ಧಾ ದಾಸ್ ಕೂಡ ಬೆಲ್ ಗ್ರೇಡ್ ಗಾಗಿ ಫ್ಲೈಟ್ ಹತ್ತಿದ್ದಾರೆ. ಅಂದ್ಹಾಗೆ, 'ಕೋಟಿಗೊಬ್ಬ-3' ಚಿತ್ರದಲ್ಲಿ ಪರಭಾಷಾ ಚೆಲುವೆ ಶ್ರದ್ಧಾ ದಾಸ್ ಪಾತ್ರವೇನು ಎಂದು ಯೋಚನೆ ಮಾಡ್ತಿದ್ರಾ.? 'ಕೋಟಿಗೊಬ್ಬ-3' ಸಿನಿಮಾದಲ್ಲಿ ಶ್ರದ್ಧಾ ದಾಸ್ ಇಂಟರ್ ಪೋಲ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಇವರ ಆಸೆ ಕೂಡ ಆಗಿತ್ತಂತೆ.
ನಿಮ್ಮಲ್ಲು ಬದಲಾವಣೆ ತರಬಹುದು 'ಮುಂದಿನ ಬದಲಾವಣೆ' ಕಿರುಚಿತ್ರ
<iframe width="600" height="450" src="https://www.youtube.com/embed/e4ZetYc-FJg" frameborder="0" allow="autoplay; encrypted-media" allowfullscreen></iframe>

ನಿಮ್ಮಲ್ಲು ಬದಲಾವಣೆ ತರಬಹುದು 'ಮುಂದಿನ ಬದಲಾವಣೆ' ಕಿರುಚಿತ್ರ

ಬೆಳ್ಳಗೆ ಆಫೀಸ್ ಗೆ ಹೋದ ಮಗನಿಗಾಗಿ ಅಮ್ಮ ಕಾಯುತ್ತಿರುತ್ತಾಳೆ. ಮೊದಲು ಮಗ ಊಟ ಮಾಡಬೇಕು ಅಂತ ತಟ್ಟೆ ಹಿಡಿದು ಕುಳಿತಿರುತ್ತಾಳೆ. ಆದರೆ ರಾತ್ರಿ ಮನೆಗೆ ಮರಳುವ ಮಗ 'ನಂದು ಹೊರಗೆ ಊಟ ಆಯ್ತು..' ಅಂತ ಹೇಳಿ ಸೀದಾ ಮಲಗುತ್ತಾನೆ. ಮಗನಿಗಾಗಿ ಕಾಯುತ್ತಿದ್ದ ತಾಯಿ ಕೂಡ ಬೇಸರದಿಂದ ಮಲಗುತ್ತಾಳೆ.

ಈ ರೀತಿಯ ದೃಶ್ಯ ಪ್ರತಿ ಮನೆಯಲ್ಲಿ ನಡೆದಿರುತ್ತದೆ. ಇಂತಹ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಒಂದು ಕಿರುಚಿತ್ರ ಇದೀಗ ಬಿಡುಗಡೆಯಾಗಿದೆ. ಇದೇ 'ಮುಂದಿನ ಬದಲಾವಣೆ'. ಈ ಕಿರುಚಿತ್ರ ಒಬ್ಬ ತಾಯಿ ಮತ್ತು ಮಗನ ನಡುವೆ ನಡೆಯುತ್ತದೆ. ಇದರ ಮೂಲಕ ಅನೇಕ ಒಳ್ಳೆಯ ವಿಷಯಗಳನ್ನು ಹೇಳಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more