Short News

ಪುರುಷರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಅಂಶಗಳು

ಪುರುಷರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಅಂಶಗಳು

ವೈವಾಹಿಕ ಜೀವನದಲ್ಲಿ ಸಂಬಂಧವು ಸುಗಮವಾಗಿ ಸಾಗಬೇಕಾದರೆ ಕೆಲವೊಂದು ಸೂತ್ರಗಳು ಇವೆ. ಇದರಲ್ಲಿ ಮುಖ್ಯವಾಗಿ ಲೈಂಗಿಕ ಸಂಬಂಧವು ಒಂದಾಗಿದೆ. ಪ್ರೀತಿ, ಪ್ರೇಮ, ಬೆಸುಗೆಯ ಕೊನೆಯ ಹಂತವೇ ಲೈಂಗಿಕ ಕ್ರಿಯೆ. ಇದು ಪುರುಷ ಹಾಗೂ ಮಹಿಳೆಯ ಜೀವನದಲ್ಲಿ ಅತೀ ಅಗತ್ಯವಾಗಿರುವುದು. ಲೈಂಗಿಕಾಸಕ್ತಿ ಇಲ್ಲದೆ ಇದ್ದರೆ ಆಗ ಸಮಸ್ಯೆಗಳು ಬರುವುದು. ಆದರೆ ಕೆಲವೊಂದು ಸಲ ಪುರುಷರ ಲೈಂಗಿಕ ಆಸಕ್ತಿ ಮೇಲೆ ಕೆಲವೊಂದು ಅಂಶಗಳು ಪರಿಣಾಮ ಬೀರುವುದು. ಇದರಿಂದಾಗಿ ಪುರುಷರಲ್ಲಿ ಕಾಮಾಸಕ್ತಿಯು ಕಡಿಮೆಯಾಗುವುದು. ಇದರಿಂದ ಆತನ ಭಾವನೆಗಳು ಮತ್ತು ಹಾರ್ಮೋನುಗಳು ತುಂಬಾ ಕ್ರಿಯಾತ್ಮಕವಾಗಿ ಭಾಗಿಯಾಗಲು ಆರಂಭಿಸುವುದು.

ಯೋಚನೆ ಮಾಡುವ ಮೊದಲೇ ಮಾತನಾಡುವ ಮಂದಿ ಇವರು

ಯೋಚನೆ ಮಾಡುವ ಮೊದಲೇ ಮಾತನಾಡುವ ಮಂದಿ ಇವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ಮಾತನಾಡುವಾಗ ಅಥವಾ ತಮ್ಮ ವರ್ತನೆಯನ್ನು ತೋರುವಾಗ ಹಿಂದೆ ಮುಂದೆ ಯೋಚಿಸದೆಯೇ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಅದು ಆ ಸಂದರ್ಭಕ್ಕೆ ಅಗತ್ಯವಿದೆಯೇ? ಅದರಿಂದ ಬೇರೆಯವರ ಮನಸ್ಸಿಗೆ ನೋವುಂಟಾಗುವುದೇ? ಎನ್ನುವುದನ್ನು ಕೊಂಚವು ಚಿಂತಿಸುವುದಿಲ್ಲ. ಬಾಯಿಗೆ ಬಂದಿದ್ದು, ಮನಸ್ಸಿಗೆ ತೋಚಿದ್ದನ್ನು ಮಾಡಿ ಮುಗಿಸಿಬಿಡುತ್ತಾರೆ. ಕೆಲವರಲ್ಲಿ ತಮ್ಮ ವರ್ತನೆಯ ಬಗ್ಗೆ ಸೂಕ್ತ ಚಿಂತನೆಗಳಿರುತ್ತವೆ. ಜೊತೆಗೆ
ತಮ್ಮ ಮಾತಿನ ಮೇಲೆ ಹಿಡಿತವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ: ಬಿಜೆಪಿಯಿಂದ ಶ್ರದ್ಧಾಂಜಲಿ

ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ: ಬಿಜೆಪಿಯಿಂದ ಶ್ರದ್ಧಾಂಜಲಿ

ಭಾರತೀಯ ಜನಸಂಘವನ್ನು ಸ್ಥಾಪಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ನಿಧನರಾಗಿ ಇಂದಿಗೆ 65 ವರ್ಷ. ಅವರು ನಿಧನರಾದ ದಿನವನ್ನು(ಜೂನ್ 23) ಬಿಜೆಪಿ ನಾಯಕರು ಬಲಿದಾನ ದಿನವನ್ನಾಗಿ ಆಚರಿಸಿ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ವಾಡಿಕೆ. ಈ ಬಾರಿಯೂ ಬಿಜೆಪಿಯ ಹಲವು ನಾಯಕರು ಮುಖರ್ಜಿ ಅವರ ಪುಣ್ಯತಿಥಿಯನ್ನು ಸ್ಮರಿಸಿದ್ದಾರೆ. ಭಾರತೀಯ ಜನಸಂಘವೇ ನಂತರ ಭಾರತೀಯ ಜನತಾಪಕ್ಷ(ಬಿಜೆಪಿ)ವಾಗಿ ಬದಲಾಗಿ, ಇದೀಗ ದೇಶದ ಬಹುಪಾಲು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ ಸ್ಟಾಲಿನ್ ಪೊಲೀಸ್ ವಶಕ್ಕೆ

ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ ಸ್ಟಾಲಿನ್ ಪೊಲೀಸ್ ವಶಕ್ಕೆ

ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ರಾಜ್ಯಪಾಲ ಬನ್ವಾರಿಲಾಲ್, ಸಂಯುಕ್ತ ವ್ಯವಸ್ಥೆಯ ತತ್ತ್ವದ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಹಲವು ಮುಖಂಡರನ್ನು ನಿನ್ನೆ ಬಂಧಿಸಲಾಗಿತ್ತು. ಈ ಕ್ರಮವನ್ನು ವಿರೋಧಿಸಿ ಎಂಕೆ ಸ್ಟಾಲಿನ್ ಇಂದು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more